ಬದುಕಿನಲ್ಲಿ ಒಮ್ಮೆಯಾದರೂ ಎಲ್ಲರ ಎದೆಗೂಡಿನಲ್ಲಿ ಅರಳುವ ಪ್ರೇಮ ಒಂದು ಮಧುರ ಕ್ಷಣ. ಪ್ರೇಮ ನಿವೇದನೆಯ ತಲ್ಲಣಗಳು, ಅದಕ್ಕೆ ಬರುವ ಸಕಾರಾತ್ಮಕ ಪ್ರತಿಕ್ರಿಯೆ... ಅದರ ಪರಿಣಾಮವಾಗಿ ಉಂಟಾಗುವ ಉಲ್ಲಾಸ ಇನ್ನಷ್ಟು ಮಧುರ. ಆ ದಿನಗಳ ವಿರಹವೂ ಮಧುರ ಯಾತನೆಯೇ. ಅವೆಲ್ಲವನ್ನೂ ದಾಟಿ ಮದುವೆ ಎಂಬಲ್ಲಿಗೆ ಬಂದು ನಿಂತರೆ ಅದೇ ದೊಡ್ಡ ಖುಷಿ. ಮದುವೆಯ ನಂತರವೂ ಪ್ರೀತಿ ತಾಜಾ ಆಗಿಯೇ ಉಳಿದರಂತೂ ಅದು ಅಮರಪ್ರೇಮ. ಅಂಥ ಪ್ರೇಮದ ಬಗ್ಗೆ ಬರೆದು ಕಳಿಸಿ ಎಂದು ‘ವಿಜಯವಾಣಿ’ ನೀಡಿದ್ದ ಕರೆಗೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಆಯ್ದ ಯಶಸ್ವೀ ನೈಜ ಪ್ರೇಮಕಥೆಗಳು ಇಲ್ಲಿವೆ.
ನಮ್ಮದು ಐದು ವರ್ಷಗಳ ಪವಿತ್ರ ಪ್ರೀತಿ. ನಾವು ಮದುವೆ ಆಗಿ ಒಂದು ವರ್ಷವಾಯಿತು. ಜೀವನದ ಪ್ರತಿಯೊಂದು ಹಂತದಲ್ಲಿ ಪ್ರೀತಿಯ ದಿನಗಳನ್ನು ಕಳೆದೆವು. ನಮ್ಮ ದಾಂಪತ್ಯದಲ್ಲಿ ವಿರಸ ಸುಳಿಯದು. ನಮ್ಮ ಈ ಪ್ರೀತಿ ಉಳಿಯಲು, ಬೆಳೆಯಲು ನಮ್ಮಿಬ್ಬರ ಕುಟುಂಬ ಸದಸ್ಯರ ಸಹಕಾರ ಕಾರಣ. ಎಲ್ಲರಿಗೂ ಪ್ರೀತಿಯ ದಿನದ ಶುಭಾಶಯಗಳು.
| ಜಗದೀಶ ಹಟ್ಟಿ ನಾಲತವಾಡ, ಮುದ್ದೇಬಿಹಾಳ ತಾಲೂಕು