Love Mocktail 3 
ಸಿನಿವಾಣಿ

ಲವ್​ ಮಾಕ್ಟೇಲ್ 3 ಓಟಿಟಿಗೆ ಲಗ್ಗೆ; ಸಿನಿಮಾ ನೋಡಬೇಕಾದ್ದದ್ದು ಎಲ್ಲಿ, ಎಂದು ರಿಲೀಸ್..‘Love Mocktail 3’

ಪ್ರಮುಖ ಮುಖ್ಯಾಂಶಗಳು

  • ಕ್ರಿಸ್ಮಿ ಫಿಲ್ಂನ ಲವ್​ ಮಾಕ್ಟೇಲ್ 3 ಸಿನಿಮಾ ಓಟಿಟಿಗೆ
  • ಮೇ8ರಂದು ಓಟಿಟಿಗೆ ಲಗ್ಗೆ ಇಡಲಿರುವ ಲವ್​ ಮಾಕ್ಟೇಲ್​ 3
  • ಮಿಲನಾ, ಕೃಷ್ಣ ನಿರ್ದೇಶನದ ಲವ್​ ಮಾಕ್ಟೇಲ್​ 3 ಮೇ.8ರಂದು ಓಟಿಟಿಗೆ ಬರಲಿದೆ
Love Mocktail 3: ಕೋವಿಡ್​ ಕಾಲದಲ್ಲಿ ಕರ್ಫ್ಯೂಗೆ ಒಳಗಾಗಿದ್ದಾಗ ರಿಲೀಸ್​ ಆಗಿದ್ದ ಲವ್​ ಮಾಕ್ಟೇಲ್​ ಸಿನಿಮಾವು ಪ್ರೇಮಿಗಳ ಮನ ಗೆದ್ದಿದ್ದವು. ಲವ್​ ಮಾಕ್ಟೇಲ್​ 2 ಅಷ್ಟೇನು ಹಿಟ್ ಕಂಡಿಲ್ಲವಾದರೂ, ಲವ್​ ಮಾಕ್ಟೇಲ್​ 3 ಅಮ್ಮ-ಮಗಳ ಸಂಬಂಧಕ್ಕಾಗಿ ಹೆಚ್ಚು ಇಷ್ಟವಾಗುತ್ತದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಸಾಧ್ಯವಾಗಿಲ್ಲ ಎಂದು ಬೇಸರವಾಗಿದ್ದ ಸಿನಿ ಪ್ರೇಮಿಗಳಿಗೆ ಗುಡ್​ನ್ಯೂಸ್ ಒಂದು ಸಿಕ್ಕಿದೆ. 

ಸಿನಿಮಾ ಓಟಿಟಿಗೆ ಲಗ್ಗೆ ಇಡಲಿದೆ.

ಹೌದು, ಲವ್​ ಮಾಕ್ಟೇಲ್​-3 ಸಿನಿಮಾ ಮೇ.8ರಂದು ಜೀ 5ನಲ್ಲಿ ರಿಲೀಸ್​ ಆಗಲಿದೆ ಎಂದು ಅಧಿಕೃತವಾಗಿ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದೆ. ಕೆಲವು ಕಥೆಗಳು ಹೃದಯಕ್ಕೆ ಹತ್ತಿರ, ಈ ಕಥೆ ಅದಕ್ಕೂ ಮಿಗಿಲು! ‘ಲವ್ ಮಾಕ್‌ಟೇಲ್ 3’ ಅಧಿಕೃತ ಟ್ರೇಲರ್ ಈಗ ನಿಮ್ಮ ಮುಂದೆ. ಆದಿಯ ಈ ಹೊಸ ಅಧ್ಯಾಯ ಕಣ್ತುಂಬಿಕೊಳ್ಳಿ ನಿಮ್ಮ ನೆಚ್ಚಿನ Z5 ಕನ್ನಡದಲ್ಲಿ ಎಂದು ಪೋಸ್ಟ್​ನ್ನು ಹಂಚಿಕೊಂಡಿದೆ. 

ಲವ್​ ಮಾಕ್ಟೇಲ್​ ಸಿನಿಮಾದ ಕತೆ ಏನು?

ಲವ್​ ಮಾಕ್ಟೇಲ್ 31 ಜನವರಿ​ 2020ರಲ್ಲಿ ರಿಲೀಸ್​​ ಆಗಿದ್ದು, ರೊಮ್ಯಾಂಟಿಕ್​ ಚಿತ್ರ. ಈ ಸಿನಿಮಾವನ್ನು ಕೃಷ್ಣ ಮತ್ತು ಮಿಲನಾ ನಾಗರಾಜ್​ ನಿರ್ದೇಸಿದ್ದರು.  ಆದಿ ಮತ್ತು ಜೋ ಪ್ರೀತಿ ಮಾಡುತ್ತಿರುತ್ತಾರೆ. ಆದರೆ, ಇಬ್ಬರ ಮಧ್ಯೆಯ ಹಣದ ವಿಚಾರಕ್ಕೆ ನಡೆದ ಕಿತ್ತಾಟ ದೂರವಾಗಿಸುತ್ತದೆ. ನಂತರ ಆದಿಗೆ ಪರಿಚಯವಾಗೋದೆ ನಿಧಿ ಅದೇ ಮಿಲನಾ ನಾಗರಾಜ್ ಆಕೆಗೂ  ಕ್ಯಾನ್ಸರ್​ನಿಂದಾಗಿ ಮೃತಪಡುತ್ತಾಳೆ. ಇದರ ನಂತರ ಬರೋದೆ ಲವ್​ ಮಾಕ್ಟೇಲ್​ 2, ಈಗ ಲವ್​ ಮಾಕ್ಟೇಲ್​ 3 ಇದರಲ್ಲಿ ಆದಿ ಮಗುವನ್ನು ದತ್ತು ಪಡೆದುಕೊಳ್ಳುವುದು ಅದಕ್ಕೆ ಎದುರಾಗುವ ಸವಾಲುಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. 
ಲವ್​ ಮಾಕ್ಟೇಲ್​ 3ರಲ್ಲಿ ಮಿಲನ ನಾಗರಾಜ್, ಡಾರ್ಲಂಗ್​ ಕೃಷ್ಣ, ಯದುನಂದನ್​, ಶ್ವೇತಾ ಪ್ರಸಾದ್​​, ಅಮೃತಾ ಅಯ್ಯಂಗಾರ್​ ಇದ್ದಾರೆ. ಸಿನಿಮಾವನ್ನು ಕ್ರಿಸ್​ಮಿ ಫಿಲಂಸ್​ ಅಡಿ ನಿರ್ಮಿಸಿದ್ದಾರೆ. 
ಲವ್​ ಮಾಕ್ಟೇಲ್ 3  ವಿವಾದ ಸುತ್ತ
ಲವ್​ಮಾಕ್ಟೇಲ್​ ಸಿನಿಮಾ ಭಾಗ 3 ಕೃತಿ ಚೌರ್ಯ ಆರೋಪವನ್ನು ಎದುರಿಸುತ್ತಿದೆ. ನಿರ್ದೇಶಕ ರಾಘವೇಂದ್ರ ಎಂನಾಯ್ಕ ಮತ್ತು ಗಯುರು ದೇಶಪಾಂಡೆ ಅವರು ಕೃಷ್ಣ ವಿರುದ್ಧ ಆರೋಪಿಸಿದ್ದರು. ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಮಧ್ಯಸ್ಥಿಕೆ ಮತ್ತಿ ಡಾ ಜಯಮಾಲಾ ನೇತೃತ್ವದಲ್ಲಿ ಈ ವಿವಾದವು  ಸುಖಾಂತ್ಯ ಕಂಡಿದೆ ಎನ್ನಲಾಗಿದೆ, (ಏಜೆನ್ಸೀಸ್).