ಅಕಿರಾ ಕರುಸೋವಾ ಅವರ ಬಹುತೇಕ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ. ಅವರ ಎಲ್ಲ ಸಿನಿಮಾಗಳ ಪೈಕಿ ನನ್ನನ್ನು ಹೆಚ್ಚು ಕಾಡಿದ್ದು, 1963ರಲ್ಲಿ ತೆರೆಕಂಡ ‘ಹೈ ಆಂಡ್ ಲೋ’. ಈ ಕ್ಷಣಕ್ಕೂ ಅಂದರೆ ಪ್ರಸ್ತುತತೆಗೆ ತುಂಬ ಸೂಕ್ತ ಎನಿಸುವಂಥ ಕಥಾನಕ. ಸಹಜವಾಗಿ ಕುರಸೋವಾ ಅವರ ಸಿನಿಮಾಗಳೆಂದರೆ, ಮನುಷ್ಯನೊಳಗಿನ ಕ್ರೌರ್ಯತೆ, ಪ್ರೀತಿಯ ತುಡಿತ, ಈ ಕ್ಷಣದ ಬದುಕು ಇಂಥ ಕಥೆ ಅವರ ಸಿನಿಮಾದಲ್ಲಿ ಅಡಕವಾಗಿರುತ್ತದೆ. ಆ ಕಾರಣಕ್ಕೆ ನನಗೆ ಅವರ ಸಿನಿಮಾಗಳೆಂದರೆ ಇಷ್ಟ. ಸಮಯ ಸಿಕ್ಕಾಗಲೆಲ್ಲ ನೋಡುತ್ತೇನೆ. ಅಂದಹಾಗೆ ಈ ಸಿನಿಮಾ ಈದ್ ಮೆಕ್ಬೇನ್ ಅವರ ಪತ್ತೇದಾರಿ ಕಾದಂಬರಿ ‘ಕಿಂಗ್ಸ್ ರಾನ್ಸೋಮ್ ಆಧರಿಸಿದೆ.
| ಸುಮನಾ ಕಿತ್ತೂರು ನಿರ್ದೇಶಕಿ
ಮಿಷನ್ ಮಂಗಲ್
ಭಾರತವನ್ನು ಬಾಹ್ಯಾಕಾಶ ನಕ್ಷೆಯಲ್ಲಿ ಇರಿಸಲು ಇಸ್ರೋ ವಿಜ್ಞಾನಿಗಳು ಪಡುವ ಶ್ರಮವನ್ನು ಸಾರಿ ಹೇಳುವ ಚಿತ್ರವೇ ‘ಮಿಷನ್ ಮಂಗಲ್’. ಇದು ನೈಜ ಘಟನೆಯನ್ನಾಧರಿಸಿದ ಚಿತ್ರ. ಕೆಲವು ವರ್ಷಗಳ ಹಿಂದೆ, ಮಂಗಳದ ಮೇಲ್ಮೈಯನ್ನು ಸಂಶೋಧಿಸಲು ಮಂಗಳನ ಕಕ್ಷೆಯಲ್ಲಿ ಉಪಗ್ರಹವನ್ನು ಇರಿಸಲಾಯಿತು. ಅದಕ್ಕೆ ಇಸ್ರೋದ ವಿಜ್ಞಾನಿಗಳ ತಂಡ ಹೇಗೆಲ್ಲಾ ಪ್ರಯತ್ನ ನಡೆಸಿದರು ಎಂಬುದನ್ನು ಈ ಸಿನಿಮಾದಲ್ಲಿ ಬಹಳ ಚೆನ್ನಾಗಿ ಹಿಡಿದಿಡಲಾಗಿದೆ. ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ, ದತ್ತಣ್ಣ ಮುಂತಾದವರು ನಟಿಸಿರುವ ಈ ಚಿತ್ರವನ್ನು ಜಗನ್ ಶಕ್ತಿ ನಿರ್ದೇಶಿಸಿದ್ದು, ಇದೊಂದು ಸ್ಪೂರ್ತಿದಾಯಕ ಚಿತ್ರ ಎಂದು ಹೇಳಬಹುದು.
| ಡಾ. ರಾಜಕುಮಾರ. ಸ. ಪಾಟೀಲ್ ಬೆಳಗಾವಿ