Star Satendra Soni Claims A Director Threatened To Kill Him Over Payment Dispute 
ಸಿನಿವಾಣಿ

'ಹಣ ಕೇಳಿದ್ದಕ್ಕೆ ಕೊಲೆ ಮಾಡ್ತೀನಿ ಅಂದ್ರು'; ಬಾಲಿವುಡ್​ ನಿರ್ದೇಶಕನ ವಿರುದ್ಧ 'ಲಪಾತಾ ಲೇಡಿಸ್​' ನಟ ಆರೋಪ.. Satendra Soni

ಪ್ರಮುಖ ಮುಖ್ಯಾಂಶಗಳು

  • ಕೊಲೆ ಬೆದರಿಕೆ ಎಂದು ವಿಡಿಯೋ ಮಾಡಿದ ಲಾಪತಾ ಲೇಡೀಸ್ ಸಿನಿಮಾ ಖ್ಯಾತಿಯ ಸತೇಂದ್ರ ಸೋನಿ.
  • ಹಣ ಕೇಳಿದ್ದಕ್ಕೆ ನಿರ್ದೇಶಕ ನಿರ್ದೇಶಕ ಪುಷ್ಪೇಂದ್ರ ಸಿಂಗ್​ರಿಂದ ಕೊಲೆ ಮಾಡುವುದಾಗಿ ಬೆದರಿಕೆ
  • ಐವತ್ತು ಸಾವಿರ ಕೊಟ್ಟಿದ್ದಾರೆ ಮಿಕ್ಕ ಹಣ ಕೇಳಿದ್ದಕ್ಕೆ ಧಮ್ಕಿ ಹಾಕಿ, ನಮ್ಮನ್ನ ಚೇಸ್ ಮಾಡಿದ್ದಾರೆ ಎಂದ ನಟ
Star Satendra Soni: ಬಾಲಿವುಡ್​ನ ಖ್ಯಾತ ನಟ ಅಮೀರ್ ಖಾನ್​ ಪ್ರೊಡಕ್ಷನ್​ನಲ್ಲಿ ನಿರ್ಮಾಣವಾಡ ಲಾಪತಾ ಲೇಡೀಸ್ ಸಿನಿಮಾವು  50 ದಿನಕ್ಕೆ ಬಾಕ್ಸ್​​ ಆಫೀಸ್​​ನಲ್ಲಿ  17 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿಕೊಂಡಿತ್ತು. ಕಿರಣ್​ ರಾವ್​ ನಿರ್ದೇಶನದ ಈ ಸಿನಿಮಾವು ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಸದ್ಯ ಮತ್ತೆ ಅದೇ ಸಿನಿಮಾ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ ಅದರಲ್ಲಿ ಛೋಟು ಪಾತ್ರದಲ್ಲಿ  ನಟಿಸಿದ್ದ ಸತೇಂದ್ರ ಸೋನಿ.
ಹೌದು, ಸತೇಂದ್ರ ಸೋನಿ ಅವರು ನಿರ್ದೇಶಕ ಪುಷ್ಪೇಂದ್ರ ಸಿಂಗ್ ಎಂಬುವವರಿಂದ ಕೊಲೆ ಬೆದರಿಕೆ ಇದೆ ಎಂದು ವಿಡಿಯೋ ಮಾಡಿ ಫೇಸ್​ಬುಕ್​ ಸೇರಿಂದ ಆನ್​ಲೈನ್​ ಫ್ಲಾಟ್​ಫಾರ್ಮ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

'ಹೆಲೋ ನಾನು ಸತೇಂದ್ರ ಸೋನಿ.  ನಾನೊಬ್ಬ ನಟ. ನಾನು ಇಲ್ಲಿಗೆ ಸಿನಿಮಾ ಶೂಟಿಂಗ್​ಗಾಗಿ ಬಂದಿದ್ದೆ. 50 ಸಾವಿರ ಕೊಡುವುದಾಗಿ ನನ್ನ ಬಳಿ ಸಹಿ ಮಾಡಿಸಿಕೊಂಡು ಹಣ ಕೊಟ್ಟರು. ಆದರೆ, ಸಿನಿಮಾ ಶೂಟಿಂಗ್​ ನಂತರ ಸೆಟಲ್​ ಮಾಡಬೇಕಾದ ಹಣ ನೀಡಲಾಗುತ್ತಿಲ್ಲ. ಈಗ ಎಂಟು ದಿನದ ಶೂಟಿಂಗ್​ ಎಲ್ಲವೂ ಮುಕ್ತಾಯಗೊಂಡಿದೆ. ನಾನು ಮಿಕ್ಕ ಹಣ ಕೇಳಿದ್ದಕ್ಕೆ ಎಲ್ಲವನ್ನು ಪ್ಯಾಕ್ ಮಾಡಿ ಇಲ್ಲಿಂದ ಹೊರಟು ಬಿಡಿ. ನಿಮ್ಮನ್ನು ಮತ್ತೆ ಇಲ್ಲಿ ನೋಡಲು ಇಷ್ಟ ಪಡೋದಿಲ್ಲ ಎಂದು ಬೆದರಿಕೆ ಹಾಕಿದ್ರು. ಜೊತೆಗೆ ನನ್ನನ್ನು ಕೊಲ್ಲುವುದಾಗಿ ಜೀವಬೆದರಿಕೆ ಹಾಕಿದ್ದಾರೆ' ಎಂದು ಹೇಳಿಕೊಂಡಿದ್ದಾರೆ.

ಕಾರಿನಲ್ಲಿ ಚೇಸ್ ಮಾಡಿದರು

ಮುಂದುವರೆದು,  'ಶ್ರೀಧರ್ ದುಬೆ ಮತ್ತು ಪಂಕಜ್ ಶರ್ಮಾ ಹಾಗೂ ನಾನು ಮೂವರು ನಡೆದು ಬರುತ್ತಿರುವ ಸಂದರ್ಭದಲ್ಲಿ ಪತ್ನಿ ಹಾಗೂ ಸಿನಿಮಾದ ನಾಯಕಿ ಪ್ರಗತಿ ಚೌಹಾಣ್ ಮತ್ತು ನಿರ್ದೇಶಕ ಪುಷ್ಪೇಂದ್ರ ಸಿಂಗ್ ನನ್ನನ್ನು ನೋಡಿ ರಸ್ತೆಯ ಮಧ್ಯದಲ್ಲಿ ನನಗೆ ಹೊಡೆಯಲು ಪ್ರಾರಂಭಿಸಿದರು. ಶ್ರೀಧರ್ ಭಯ್ಯಾ ನನ್ನನ್ನು ರಕ್ಷಿಸಲು ಮುಂದೆ ಬಂದಾಗ, ನಿರ್ದೇಶಕರು ಅವರನ್ನೂ ಹೊಡೆಯಲು ಪ್ರಾರಂಭಿಸಿದರು' ಎಂದು ಹೇಳಿಕೊಂಡಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ ಇಬ್ಬರು ನಟರು ಸುರಕ್ಷಿತವಾಗಿ ಮುಂಬೈ ರೈಲು ನಿಲ್ದಾಣಕ್ಕೆ ತಲುಪಿದ ವಿಡಿಯೋ ಹಂಚಿಕೊಂಡಿದ್ದಾರೆ. ಹಾಗಯೇ ಅವರ ಸುರಕ್ಷತೆ ಬಗ್ಗೆ ವಿಚಾರಿಸಿದ ಎಲ್ಲ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಧನ್ಯವಾದ ಕೋರಿದ್ದಾರೆ.

ಸತೇಂದ್ರ ಸೋನಿ ಯಾರು?

ಲಪಾತಾ ಲೇಡಿಸ್​​ನಲ್ಲಿ ಛೋಟು ಪಾತ್ರದ ಮೂಲಕ ಗಮನ ಸೆಳೆದ ಇವರು,  ಬಾಲಿವುಡ್​ನ ಹೆಸರಾಂತ ನಟರ ಜೊತೆಗೆ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ಆಯುಷ್ಮಾನ್​ ಖುರಾನ ನಟಿಸಿರುವ ಡಾಕ್ಟರ್ ಜಿ, ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಅವರ ಬವಾಲ್, ನವಾಜುದ್ದೀನ್ ಸಿದ್ದಿಕಿ ಅವರ ರಾತ್ ಅಕೇಲಿ ಹೈ: ದಿ ಬನ್ಸಾಲ್ ಮರ್ಡರ್ಸ್ ಮತ್ತು ಹಲೋ ಬಚ್ಚೋನ್​ನಲ್ಲಿ ಮಿಂಚಿದ್ದಾರೆ. ಇವರು ಮಿರ್ಜಾಪುರ ದಿ ಮೂವಿಯಲ್ಲಿ ನಟಿಸಿದ್ದಾರೆ. ಇದರಲ್ಲಿ ಪಂಕಜ್​ ತ್ರಿಪಾಠಿ, ದಿವ್ಯೇಂದು ಹಾಗೂ ಅಲಿ ಫಜಲ್​ ಸೇರಿದಂತೆ ಹಲವರ ನಟಿಸಿದ್ದಾರೆ.