krishithapanda 
ಸಿನಿವಾಣಿ

ಸಹಜ ಜೀವನಕ್ಕೆ ಮರಳಿದ ನಟಿ ಕೃಷಿ ತಾಪಂಡ...!

ಭೂಮಿಕಾ ವಿ. ನಾಥ್​​​

ಪ್ರಮುಖ ಮುಖ್ಯಾಂಶಗಳು

  • ಕೃಷಿ ಟ್ರೋಲ್ ಗಳ ವಿರುದ್ಧ ಮತ್ತೆ ಸಿಡಿದೆದ್ದಿದ್ದ ನಟಿ ಇದೀಗ ಮತ್ತೆ ಇನ್ಸ್​​​​ಟಾ ಪೋಸ್ಟ್​​ಗಳ ಮೂಲಕ ಸಹಜ ಜೀವನಕ್ಕೆ ಕಾಲಿಟ್ಟಿದ್ದಾರೆ.
  • ನಾನು ಮೌನವನ್ನು ಆಯ್ಕೆ ಮಾಡಿಕೊಂಡದ್ದು ಗೌರವಕ್ಕಾಗಿ, ಕೈಂಡ್ ನೆಸ್ ಆಯ್ಕೆ ಮಾಡಿಕೊಂಡದ್ದು ನನ್ನ ವ್ಯಕ್ತಿತ್ವಕ್ಕಾಗಿ.
  • ಬೇರೆಯವರ ಗಾಯಗಳಲ್ಲಿ ಸಂತೋಷ ಹುಡುಕುವ ಅಗತ್ಯವೇ ಬರದಿರಲಿ
  • ನಿಮ್ಮ ಸ್ಟೋರೀಸ್ ನನ್ನನ್ನು ಬದಲಾಯಿಸಲಾರವು
  • ನಿಮ್ಮ ರೂಮರ್ಸ್ ನನ್ನನ್ನು ನಿರ್ಧರಿಸಲಾರವು
ಕನ್ನಡ ಚಿತ್ರರಂಗದ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಕೃಷಿ ತಾಪಂಡ ಈ ಹಿಂದೆ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದರು, ನಂತರ ಕೃಷಿ ಗೆಳೆಯ ಅವರದೇ ಫ್ಲಾಟಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿಷಯವು ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಕಾರಣದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ನಟಿಯ ಕುರಿತು ಹಲವಾರು ಚರ್ಚೆ, ಟೀಕೆಗಳು ಕೇಳಿ ಬಂದಿದ್ದವು. ಇದೀಗ ಕೃಷಿ ಮತ್ತೆ ಸಹಜ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೃಷಿ ಟ್ರೋಲ್ ಗಳ ವಿರುದ್ಧ ಮತ್ತೆ ಸಿಡಿದೆದ್ದಿದ್ದ ನಟಿ ಇದೀಗ ಮತ್ತೆ ಇನ್ಸ್​​​​ಟಾ ಪೋಸ್ಟ್​​ಗಳ ಮೂಲಕ ಸಹಜ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾರದ್ದೋ ನೋವನ್ನು ನೋಡಿ ಅದನ್ನೇ ಮನರಂಜನೆ ಮಾಡಿಕೊಳ್ಳುವಷ್ಟು ನಾವು ಯಾವಾಗ ಇಷ್ಟು ಬದಲಾಗಿಬಿಟ್ಟೆವು? ಯಾರಾದರೂ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅವರನ್ನು ಹಾಗೆಯೇ ಬಿಡುವುದು ಯಾಕೆ ಇಷ್ಟು ಕಷ್ಟ? ನನ್ನ ಪರ್ಸನಲ್ ಲೈಫ್ ಬಗ್ಗೆ ಎಲ್ಲರಿಗೂ ಉತ್ತರ ಕೊಡಬೇಕೆಂಬ ಹಕ್ಕು ಎಲ್ಲಿಂದ ಬಂತು? ಮೌನವಾಗಿದ್ದರೆ ಅದು ದೌರ್ಬಲ್ಯ ಅಲ್ಲ, ಕೈಂಡ್ ನೆಸ್ ಅಂದ್ರೆ ವೀಕ್ನೆಸ್ ಅಲ್ಲ.
ನಾನು ಮೌನವನ್ನು ಆಯ್ಕೆ ಮಾಡಿಕೊಂಡದ್ದು ಗೌರವಕ್ಕಾಗಿ, ಕೈಂಡ್ ನೆಸ್ ಆಯ್ಕೆ ಮಾಡಿಕೊಂಡದ್ದು ನನ್ನ ವ್ಯಕ್ತಿತ್ವಕ್ಕಾಗಿ. ನನ್ನನ್ನು ಎಷ್ಟು ತಳ್ಳಿದರು, ಎಷ್ಟು ಪ್ರಶ್ನೆಸಿದರೂ ಎಷ್ಟು ಜಡ್ಜ್ ಮಾಡಿದರು, ಎಷ್ಟು ಕಥೆಗಳನ್ನು ಕಟ್ಟಿದರೂ ನಾನು ಪ್ರತಿ ಬಾರಿ ಮತ್ತೆ ಎದ್ದಿದ್ದೇನೆ. ಇನ್ನೂ ಎದ್ದೆ ನಿಲ್ಲುತ್ತೇನೆ ಎಮದು ನಟಿ ಈ ಹಿಂದೆ ಪೋಸ್ಟ್​​ ಸಹಿತ ಮಾಡಿದ್ದರು.
ಬೇರೆಯವರ ಗಾಯಗಳಲ್ಲಿ ಸಂತೋಷ ಹುಡುಕುವ ಅಗತ್ಯವೇ ಬರದಿರಲಿ
ನಾನು ಯಾರಿಗಾದರೂ ಉತ್ತರ ಕೊಡಬೇಕಾದರೆ ಅದು ಅವರಿಗೆ ಮಾತ್ರ, ಬೇರೆ ಯಾರಿಗೂ ಅಲ್ಲ. ನಿಮ್ಮ ರೂಮರ್ಸ್ ನನ್ನನ್ನು ನಿರ್ಧರಿಸಲಾರವು. ನಿಮ್ಮ ಸ್ಟೋರೀಸ್ ನನ್ನನ್ನು ಬದಲಾಯಿಸಲಾರವು. ನಿಮ್ಮ ಪ್ರಯತ್ನಗಳು ನನ್ನ ಆತ್ಮವನ್ನು ಮುರಿಯಲಾರವು. ಯಾಕೆಂದರೆ ನನ್ನನ್ನು ದೇವರು ಕಾಪಾಡುತ್ತಿದ್ದಾನೆ. ನನ್ನ ಜನ ಕಾಪಾಡುತ್ತಿದ್ದಾರೆ. ನಿಮ್ಮ ಮೇಲೆ ನನಗೆ ಕೋಪ ಇಲ್ಲ, ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ. ಒಂದು ದಿನ ನಿಮ್ಮ ಹೃದಯ ನಿಮ್ಮ ಅಭಿಪ್ರಾಯಕ್ಕಿಂತ ದೊಡ್ಡದಾಗಲಿ ಎಂದು. ಒಂದು ದಿನ ಬೇರೆಯವರ ನೋವು, ನಿಮಗೆ ಎಂಟಟೈನ್ಮೆಂಟ್ ಆಗದೆ ನಿಜವಾದ ನೋವಾಗಿ ಕಾಣಲಿ ಎಂದು. ಒಂದು ದಿನ ನಿಮ್ಮ ಜೀವನದಲ್ಲಿ ಅಷ್ಟೊಂದು ಪ್ರೀತಿ ತುಂಬಿರಲಿ, ಬೇರೆಯವರ ಗಾಯಗಳಲ್ಲಿ ಸಂತೋಷ ಹುಡುಕುವ ಅಗತ್ಯವೇ ಬರದಿರಲಿ ಎಂದೂ ನಟಿ ಈ ಹಿಂದೆ ಪೋಸ್ಟ್​​ ಮಾಡಿದ್ದರು.