ಬೆಂಗಳೂರು: ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ರಾಬರ್ಟ್’ ಹಾಗೂ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾಗಳ ಬಿಡುಗಡೆಗೆ ತರಾತುರಿಯ ತಯಾರಿ ನಡೆಯುತ್ತಿದ್ದು, ‘ರಾಬರ್ಟ್’ಗೆ ವಾರ ಬಂತಮ್ಮ ಹಾಗೂ ‘ಕೋಟಿಗೊಬ್ಬ 3’ಗೆ ಗುಡ್ಫ್ರೈಡೇ ಎಂಬಂತಾಗಿದೆ!
ಚಿತ್ರತಂಡಗಳ ಸದ್ಯದ ಪ್ರಯತ್ನದ ಪ್ರಕಾರ, ‘ರಾಬರ್ಟ್’ ಏ. 9 ಹಾಗೂ ‘ಕೋಟಿಗೊಬ್ಬ 3’ ಏ. 10ರಂದು ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ‘ರಾಮ್ಾಬು ಪ್ರೊಡಕ್ಷನ್ಸ್’ ಮೂಲಕ ಸೂರಪ್ಪ ಬಾಬು ನಿರ್ಮಾಣ ಹಾಗೂ ಶಿವಕಾರ್ತಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕೋಟಿಗೊಬ್ಬ 3’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿವೆ. ಈ ಮಧ್ಯೆ ಚಿತ್ರತಂಡ ಏಪ್ರಿಲ್ನಲ್ಲಿ ಚಿತ್ರ ತೆರೆ ಕಾಣಿಸಲು ಚಿಂತನೆ ನಡೆಸುತ್ತಿದ್ದು, ಎಲ್ಲ ಅಂದುಕೊಂಡಂತೆಯೇ ನಡೆದರೆ ಏ. 10ರ ಗುಡ್ಫ್ರೈಡೇಯಂದು ‘ಕೋಟಿಗೊಬ್ಬ 3’ ಬಿಡುಗಡೆ ಆಗುವ ಸಾಧ್ಯತೆ ನಿಚ್ಚಳವಾಗಿದೆ.
ಮತ್ತೊಂದೆಡೆ ‘ಉಮಾಪತಿ ಫಿಲಮ್್ಸ’ ಮೂಲಕ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಹಾಗೂ ತರುಣ್ ಕಿಶೋರ್ ನಿರ್ದೇಶನದ ‘ರಾಬರ್ಟ್’ ಚಿತ್ರದ ಶೂಟಿಂಗ್ ಕೂಡ ಮುಗಿದಿದ್ದು, ಚಿತ್ರೀಕರಣೋತ್ತರ ಕಾರ್ಯ ಭರದಿಂದ ಸಾಗಿದೆ. ಈ ಚಿತ್ರತಂಡ ಏ. 9ರಂದು ಸಿನಿಮಾ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದು, ಅಂದೇ ತೆರೆ ಕಾಣಿಸುವ ಪ್ರಯತ್ನದಲ್ಲಿದೆ ಎನ್ನಲಾಗಿದೆ.
ಇನ್ನು ಶೀರ್ಷಿಕೆಯಲ್ಲಿ ಕ್ರಿಶ್ಚಿಯನ್ ಹೆಸರು ಇರುವ ‘ರಾಬರ್ಟ್’ ಚಿತ್ರದ ಫಸ್ಟ್ಲುಕ್ ಮೋಷನ್ ಪೋಸ್ಟರ್ ಕ್ರಿಸ್ವುಸ್ ಸಂದರ್ಭದಲ್ಲಿ ಬಿಟ್ಟಿದ್ದ ನಿರ್ದೇಶಕ ತರುಣ್ ಸುಧೀರ್, ಅದರಲ್ಲಿ ಶಿಲುಬೆ ಧರಿಸಿದ್ದ ದರ್ಶನ್ ದರ್ಶನ ಮಾಡಿಸಿದ್ದರು. ಬಳಿಕ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದ ನಿರ್ದೇಶಕರು, ಅದರಲ್ಲಿ ರಾಮನ ಹೊತ್ತು ಬಂದ ಹನುಮನ ಅವತಾರದಲ್ಲಿ ದರ್ಶನ್ ಕಾಣುವಂತೆ ಮಾಡಿದ್ದರು.
ಇದೀಗ ಏ. 8ರಂದು ಹನುಮ ಜಯಂತಿ, ಏ. 10ರಂದು ಗುಡ್ಫ್ರೈಡೇ. ಮಧ್ಯದ ದಿನದಂದು ‘ರಾಬರ್ಟ್’ ಚಿತ್ರ ಬಿಡುಗಡೆ ಮಾಡುವ ಯತ್ನದಲ್ಲಿದ್ದಾರಂತೆ ನಿರ್ದೇಶಕರು. ಒಟ್ಟಿನಲ್ಲಿ ಏಪ್ರಿಲ್ ಎರಡನೇ ವಾರ ಸುದೀಪ್-
ದರ್ಶನ್ ಇಬ್ಬರ ಅಭಿಮಾನಿಗಳಿಗೂ ಭಾರಿ ಸಂಭ್ರಮ ಉಂಟಾಗುವ ನಿರೀಕ್ಷೆ ಇದೆ.