ಸಿನಿವಾಣಿ

ಕೊರಗಜ್ಜ ಚಿತ್ರದ ಶೂಟಿಂಗ್​ ವೇಳೆ ಪವಾಡ ; ಅನುಭವ ಬಿಚ್ಚಿಟ್ಟ ನಿರ್ದೇಶಕ ಸುಧೀರ್​ ಅತ್ತಾವರ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸುಧೀರ್​ ಅತ್ತಾವರ್​ ನಿರ್ದೇಶನದ ಸಿನಿಮಾ "ಕೊರಗಜ್ಜ'. ಚಿತ್ರೀಕರಣದ ಆರಂಭದಿಂದಲೂ ಹಲವು ಸವಾಲುಗಳ ಜತೆ ಪವಾಡಗಳನ್ನೂ ಎದುರಿಸುತ್ತಿದೆ. ಈಗ ಮತ್ತೊಂದು ಅಂತಹದೇ ಟನೆಗೆ ಚಿತ್ರತಂಡ ಸಾಯಾಗಿದೆ. ಇತ್ತೀಚೆಗಷ್ಟೆ ದೈವ ನರ್ತನದ ದೃಶ್ಯವನ್ನು ಬೆಂಗಳೂರಿನ ಹೊರ ವಲಯದ ಕಗ್ಗಲಿ ಹಳ್ಳಿಯಲ್ಲಿ ಅದ್ದೂರಿ ಸೆಟ್​ ಹಾಕಿ ಕೇರಳದ ತೆಯ್ಯಂ ಕಲಾವಿದರ ಜತೆ ಹಾಗೂ ಮಾಸ್​ ಮಾದ ಸಾಹಸ ನಿರ್ದೇಶನದಲ್ಲಿ ಮೂರನೇ ಬಾರಿ ಮರು ಚಿತ್ರೀಕರಣ ಮಾಡಲಾಗುತ್ತಿತ್ತು.

ಮಲಯಾಳಂನ ಮನೋಜ್​ ಪಿಳ್ಳೈ ಛಾಯಾಗ್ರಾಹಣ ಮಾಡುತ್ತಿರುವಾಗ, ನಿರ್ದೇಶಕ ಸುಧೀರ್​ ಅತ್ತಾವರ್​ ಸನ್ನಿವೇಶ ವಿವರಿಸುತ್ತಿರುವಾಗ ಇದ್ದಕ್ಕಿದ್ದಂತೆ ಅಗೋಚರ ಶಕ್ತಿಯೊಂದು ತಳ್ಳಿ ಹಾಕಿದ್ದು, ಏಳೆಂಟು ಗಜ ದೂರ ಬಿದ್ದಿದ್ದಾರೆ. ಆದರೆ, ಅದೃಷ್ಟವಷಾತ್​ ಯಾವುದೇ ಅಪಾಯ ಆಗಿಲ್ಲ. "ಕೊರಗಜ್ಜ' ಕೃಪೆಯಿಂದಲೇ ಏನೂ ಅಪಾಯ ಆಗಿಲ್ಲ ಎನ್ನುವುದು ಚಿತ್ರತಂಡದವರ ಮಾತು. ನಟಿ ಶ್ರುತಿ ಸೇರಿ ಹಲವು ಕಲಾವಿದರು ಹಾಗೂ ತಂತ್ರಜ್ಞರು ಈ ಟನೆಗೆ ಸಾಕ್ಷಿಯಾಗಿದ್ದಾರೆ. ಸದ್ಯ ಕೊಚ್ಚಿ ಹಾಗೂ ಮುಂಬೈನಲ್ಲಿ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದೆ. ಸುಮಾರು 800 ವರ್ಷಗಳ ಹಿಂದಿನ ಕಥೆಯಾಧಾರಿತ ಚಿತ್ರ ಇದಾಗಿದ್ದು, ಬಿಗ್​ ಬಜೆಟ್​ನಲ್ಲಿ ತ್ರಿವಿಕ್ರಮ ಸಾಫಲ್ಯ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರಕ್ಕೆ "ಪುಷ್ಪ', "ಆ್ಯಂಟ್​ ಮ್ಯಾನ್​', "ಟ್ರೂ ಸ್ಪಿರಿಟ್​', "ಆಕ್ವಮ್ಯಾನ್​' ಸೇರಿ ಹಲವು ಹಾಲಿವುಡ್​ ಚಿತ್ರಗಳ ತಂತ್ರಜ್ಞರು ಭಾಗಿಯಾಗಿರುವುದು ವಿಶೇಷ. ಹಲವು ಬಾಲಿವುಡ್​ ಹಾಗೂ ಹಾಲಿವುಡ್​ ಚಿತ್ರಗಳಲ್ಲಿ ನಟಿಸಿರುವ ನಟ ಕಬೀರ್​ ಬೇಡಿ, ಹೆಸರಾಂತ ನೃತ್ಯ ಸಂಯೋಜಕ ಸಂದೀಪ್​ ಸೋಪರ್ಕರ್​, ಶ್ರುತಿ, ಗಣೇಶ್​ ಆಚಾರ್ಯ, ಭವ್ಯ ತಾರಾಗಣದಲ್ಲಿದ್ದಾರೆ. "ಕೊರಗಜ್ಜ'ನ ತಾಯಿ "ಕೊರೊಪೊಳು' ಪಾತ್ರದ ಮೂಲಕ ಋತಿಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.