ಐತಿಹಾಸಿಕ ಸಾಧನೆಗೈದ 'ಕೊರಗಜ್ಜ' ಸಿನಿಮಾ: ಮೈಸೂರು ದಸರಾ ಮೆರವಣಿಗೆಯಲ್ಲಿ ಲಾಂಚ್​ ಆದ ಚಿತ್ರದ ಟ್ರೈಲರ್ | Koragajja Movie  
ಸಿನಿವಾಣಿ

ಐತಿಹಾಸಿಕ ಸಾಧನೆಗೈದ 'ಕೊರಗಜ್ಜ' ಸಿನಿಮಾ: ಮೈಸೂರು ದಸರಾ ಮೆರವಣಿಗೆಯಲ್ಲಿ ಲಾಂಚ್​ ಆದ ಚಿತ್ರದ ಟ್ರೈಲರ್ | Koragajja Movie

ಬಹುನಿರೀಕ್ಷಿತ 3D ಸಿನಿಮಾ ಕೊರಗಜ್ಜದ ಸ್ತಬ್ದ ಚಿತ್ರ ಮೈಸೂರು ದಸರಾ ಜಂಬುಸವಾರಿಯಲ್ಲಿ ಸಾಗಿಬಂದು, ಬನ್ನಿ ಮಂಟಪದ ಬಳಿ ಲಕ್ಷಾಂತರ ಜನರ ಎದುರು ಟ್ರೈಲರ್ ಲಾಂಚ್ ಮಾಡುವ ಮುಖಾಂತರ ಐತಿಹಾಸಿಕ ಸಾಧನೆ ಗೈದಿದೆ.

ಬೆಂಗಳೂರು: ತ್ರಿವಿಕ್ರಮ್ ಸಪಲ್ಯ ನಿರ್ಮಾಣದ, ಸುಧೀರ್ ಅತ್ತಾವರ ನಿರ್ದೇಶನದ ಬಹುನಿರೀಕ್ಷಿತ 'ಕೊರಗಜ್ಜ' (Koragajja Movie) ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದೆ. ಇಡೀ 'ಕೊರಗಜ್ಜ' ಚಿತ್ರವನ್ನು 3ಡಿ ರೂಪದಲ್ಲಿ ಪ್ರೇಕ್ಷಕರ ಮುಂದಿಡಲು ಸಜ್ಜಾಗಿರುವ ಚಿತ್ರತಂಡ ಇದೀಗ ಮೈಸೂರು ದಸರಾ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರದ ಮೂಲಕ ಗಮನ ಸೆಳೆದು ಒಂದು ಹೊಸ ದಾಖಲೆಯನ್ನೂ ನಿರ್ಮಿಸಿದೆ.

ಬಹುನಿರೀಕ್ಷಿತ 3D ಸಿನಿಮಾ ಕೊರಗಜ್ಜದ ಸ್ತಬ್ದ ಚಿತ್ರ ಮೈಸೂರು ದಸರಾ ಜಂಬುಸವಾರಿಯಲ್ಲಿ ಸಾಗಿಬಂದು, ಬನ್ನಿ ಮಂಟಪದ ಬಳಿ ಲಕ್ಷಾಂತರ ಜನರ ಎದುರು ಟ್ರೈಲರ್ ಲಾಂಚ್ ಮಾಡುವ ಮುಖಾಂತರ ಐತಿಹಾಸಿಕ ಸಾಧನೆ ಗೈದಿದೆ. ಇಲ್ಲಿಯವರೆಗೆ, ಯಾವ ಸಿನಿಮಾಗಳೂ ಮಾಡದ ಅಪರೂಪದ ಸಾಧನೆ ಇದಾಗಿದೆ ಎಂಬುದು ಇಲ್ಲಿ ಗಮನಾರ್ಹ.

ಕ್ರಿ.ಶ. 1610ರಲ್ಲಿ ಆರಂಭಗೊಂಡ ಮೈಸೂರು ಜಂಬೂ ಸವಾರಿಯ‌ 416ನೇ ವರ್ಷದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಸಿನಿಮಾವೊಂದರ ಸ್ತಬ್ದ ಚಿತ್ರವೊಂದು ಪಾಲ್ಗೊಂಡು ಹೊಸ ಇತಿಹಾಸ ಸೃಷ್ಟಿಸಿದೆ. ಸಿಎಂ ಡಿಕೆ ಶಿವಕುಮಾರ್​ ಅವರು ತುಳು ಭಾಷೆಯನ್ನು ಅಧಿಕೃತ ಆಡಳಿತ ಭಾಷೆಯಾಗಿ ಘೋಷಣೆ ಮಾಡಿ, ತುಳುನಾಡಿಗೆ ಅಗ್ರ ಸ್ಥಾನಮಾನ ನೀಡಿದ ಹಿನ್ನೆಲೆಯಲ್ಲಿ, "ತುಳುನಾಡು ಕಂಗೊಳಿಸುತ್ತಿದೇ....ಕರುನಾಡ ಕಂಪಿನಲೀ..." ಸಂಗೀತಮಯ ಘೋಷ ವಾಕ್ಯ ಮೆರವಣಿಗೆಯ ತುಂಬಾ ಅವರಿಸಿಕೊಂಡು ಕೊರಗಜ್ಜ ಸ್ತಬ್ದ ಚಿತ್ರಕ್ಕೆ ಇನ್ನಿಲ್ಲದ ಮೆರುಗನ್ನು ನೀಡಿದ್ದು ವಿಶೇಷತೆ.

ಸುಮಾರು 52-53 ಟ್ಯಾಬ್ಲೋಗಳ ಭವ್ಯ ಮೆರವಣಿಗೆಯಲ್ಲಿ "ಕೊರಗಜ್ಜ" ಚಿತ್ರದ ಟ್ಯಾಬ್ಲೋ ಕೂಡ ಅಂಬಾರಿಯ ಸಮೀಪವೇ ಸಾಗಿಬರುವ ಅಪರೂಪದ ಗೌರವಕ್ಕೆ ಸಾಕ್ಷಿಯಾಯಿತು. ನಿರ್ದೇಶಕ ಸುಧೀರ್ ಅತ್ತಾವರ್ ಅವರೊಂದಿಗೆ ಖ್ಯಾತ ಹಾಲಿವುಡ್-ಬಾಲಿವುಡ್- ಸ್ಯಾಂಡಲ್​ವುಡ್ ಕಲಾವಿದರಾದ ಕಬೀರ್ ಬೇಡಿ, ಮಿನಾಕ್ಷಿ ಶೇಷಾದ್ರಿ, ಹಿರಿಯ ನಟಿ ಭವ್ಯ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಕಾರ್ಯಕಾರಿ ನಿರ್ಮಾಪಕ-ಎಡಿಟರ್ ವಿದ್ಯಾಧರ್ ಶೆಟ್ಟಿ, ಉದ್ಯಮಿ ಮತ್ತು ನೃತ್ಯ ಪಟು ಯು.ಟಿ. ಝುಲ್ಫಿಕರ್ ಮತ್ತಿತರರು ಪಾಲ್ಗೊಂಡಿದ್ದರು.