ಸಿನಿವಾಣಿ

ಪುನೀತ್ ಬಯೋಗ್ರಫಿ ಪುಸ್ತಕ ‘ನೀನೇ ರಾಜಕುಮಾರ’ ಬಿಡುಗಡೆ ಮಾಡಿ ಭಾವುಕರಾದ ಸುದೀಪ್...

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಅತೀ ನಿರೀಕ್ಷಿತ ಬಯೋಗ್ರಫಿ ಪುಸ್ತಕ ‘ನೀನೇ ರಾಜಕುಮಾರ್’ವನ್ನು ನಟ ಕಿಚ್ಚ ಸುದೀಪ್ ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಪತ್ರಕರ್ತರಾದ ಡಾ. ಶರಣು ಹುಲ್ಲೂರು ಬರೆದಿರುವ ಈ ಕೃತಿ ಅಥವಾ ಪುಸ್ತಕ ಬಿಡುಗಡೆಗೂ ಮುನ್ನ ಎರಡನೇ ಮುದ್ರಣ ಕೂಡಾ ಕಂಡಿದೆ ಎನ್ನಲಾಗಿದೆ. ಈ ಪುಸ್ತಕದಲ್ಲಿ 260ಕ್ಕೂ ಹೆಚ್ಚು ಪುಟಗಳನ್ನು ಇವೆ.
ಈ ಕೃತಿಯ ರಿಲೀಸ್ ಬಳಿಕ ಮಾತಾಡಿದ ನಟ ಕಿಚ್ಚ ಸುದೀಪ್, ‘ಒಂದೊಳ್ಳೆಯ ಕೃತಿಯ ಮೂಲಕ ಶರಣು ಹುಲ್ಲೂರು ನಟ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಈ ಕೃತಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ. ಯಾವತ್ತಿಗೂ ನಾನು ಪುನೀತ್ ಅವರನ್ನು ಮೀಸ್ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ. 
ಅಂದಹಾಗೆ, ನಟ ಕಿಚ್ಚ ಸುದೀಪ್ ಅವರ ಪುಸ್ತಕವನ್ನು ಎರಡು ವರ್ಷಗಳ ಹಿಂದೆ ನಟ ಡಾ. ಪುನೀತ್ ರಾಜ್ ಕುಮಾರ್ ಅವರು ರಿಲೀಸ್ ಮಾಡಿದ್ದರು. ಇದೀಗ, ಪುನೀತ್ ಅವರ ಬಯೋಗ್ರಫಿಯನ್ನು ಸುದೀಪ್ ರಿಲೀಸ್ ಮಾಡಿದ್ದು ಎಲ್ಲರೂ ಭಾವುಕರಾಗಿದ್ದಾರೆ. ಈ ಪುಸ್ತಕ ಬಿಡುಗಡೆಗೆ ನಿರ್ಮಾಪಕರಾದ ಜಾಕ್ ಮಂಜು, ಕುಮಾರ್, ಸಾವಣ್ಣ, ಪ್ರಕಾಶನದ ಜಮೀಲ್, ಲೇಖಕ ಶರಣು ಹುಲ್ಲೂರು ಉಪಸ್ಥಿತರಿದ್ದರು.