ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ವಿಕ್ರಾಂತ್ ರೋಣ' ಸಿನಿಮಾ ಬಳಿಕ, ಕಳೆದ ಎರಡು ವರ್ಷಗಳಿಂದ ಕಿಚ್ಚ ಸುದೀಪ್ ನಾಯಕನಾಗಿ ನಟಿಸಿರುವ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಕಳೆದ 2023ರ ಮಾ. 17ರಂದು ಆರ್.ಚಂದ್ರು ನಿರ್ದೇಶಿಸಿ ಉಪೇಂದ್ರ ನಾಯಕನಾಗಿದ್ದ "ಕಬ್ಜ' ಸಿನಿಮಾ ರಿಲೀಸ್ ಆಗಿತ್ತಾದರೂ, ಅದರಲ್ಲಿ ಕಿಚ್ಚ ಸುದೀಪ್ ಹೀರೋ ಆಗಿರಲಿಲ್ಲ. ಅದರ ನಡುವೆಯೇ "ಬಿಲ್ಲಾ ರಂಗಾ ಬಾಷಾ', "ಕಬ್ಜಾ 2', ಕಿಚ್ಚ ಸುದೀಪ್ ನಿರ್ದೇಶಿಸಿ, ನಟಿಸಲಿರುವ ಒಂದು ಸಿನಿಮಾ, ತಮಿಳು ನಿರ್ದೇಶಕ ಚೇರನ್ ಜತೆ ಇನ್ನೊಂದು ಚಿತ್ರ ಅಂತ ಹೊಸ ಸಿನಿಮಾಗಳು ಘೋಷಣೆಯಾಗಿದ್ದವು. ಆದರೆ, ಅವುಗಳಲ್ಲಿ ಮೊದಲು "ಮ್ಯಾಕ್ಸ್' ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇತ್ತು.
ಹೀಗಾಗಿಯೇ ಅಭಿಮಾನಿಗಳು "ಮ್ಯಾಕ್ಸ್' ಬಗ್ಗೆ ಅಪ್ಡೇಟ್ ಕೇಳುತ್ತಲೇ ಇದ್ದರು. ಇದೀಗ ಕಿಚ್ಚ ಸುದೀಪ್ "ಮ್ಯಾಕ್ಸ್'ನ ಮಾಸ್ ಟೀಸರ್ ಮೂಲಕ ಅಭಿಮಾನಿಗಳಿಗೆ ಉತ್ತರ ನೀಡಿದ್ದಾರೆ. ನಿರೀೆಯಂತೆಯೇ ಈ ಟೀಸರ್ನಲ್ಲಿ ಕಿಚ್ಚ ಸುದೀಪ್ ಮಾಸ್ ಅವತಾರದಲ್ಲಿ ಮಿಂಚಿದ್ದು, ಭರ್ಜರಿ ಡೈಲಾಗ್ ಮತ್ತು ಆ್ಯಕ್ಷನ್ ಮೂಲಕ ಸದ್ದು ಮಾಡುತ್ತಿದ್ದಾರೆ. ಟೀಸರ್ನಲ್ಲಿ ಇಂಗ್ಲೀಷ್ ರೈಮ್ "ಬಾ ಬಾ ಬ್ಲ್ಯಾಕ್ಶೀಪ್'ಗೆ ಹೊಸ ವ್ಯಾಖ್ಯಾನ ನೀಡಲಾಗಿದ್ದು, ಅದು ಕಿಚ್ಚ ಸುದೀಪ್ ಕಂಠದಲ್ಲಿ, ಅಜನೀಷ್ ಲೋಕನಾಥ್ ಹಿನ್ನೆಲೆ ಸಂಗೀತದಲ್ಲಿ ಮೂಡಿಬಂದಿರುವುದು ಈ ಝಲಕ್ನ ಕೇಂದ್ರಬಿಂದುವಾಗಿದೆ.
ವಿಜಯ್ ಕಾರ್ತಿಕೇಯ ನಿರ್ದೇಶಿಸುತ್ತಿರುವ "ಮ್ಯಾಕ್ಸ್' ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿಬರಲಿದೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು ಕಿಚ್ಚ ಸುದೀಪ್ ಜತೆ ವರಲಕ್ಷಿ$್ಮ ಶರತ್ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಅಜನೀಷ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ, ಗಣೇಶ್ ಬಾಬು ಸಂಕಲನವಿರಲಿದೆ.