ಸಿನಿವಾಣಿ

ವೈಲ್ಡ್​ ಕಾರ್ಡ್​ ಸ್ಪರ್ಧಿಗಳ ಜೊತೆ ಕಿಚ್ಚನ ಟಾಕ್​; ಒಗ್ಗಟ್ಟಿನ ಕೊರತೆ, ಟಾಸ್ಕ್​ ನಿಯಮ ತಿಳಿಯದ ಉಸ್ತುವಾರಿಗಳ ಪೆದ್ದಾಟಕ್ಕೆ ಕ್ಲಾಸ್..BBK13

  • ಮಜ ಕೊಡದ ಬಿಗ್​ಬಾಸ್​​ ಕನ್ನಡ 13, ಗಿಲ್ಲಿನ ಕರೆಸಿ ಎಂದ ವೀಕ್ಷಕರು

  • ವೈಲ್ಡ್​ ಕಾರ್ಡ್​ ಸ್ಪರ್ಧಿಗಳ ಆಟದ ಬಗ್ಗೆ ಸುದೀಪ್​ ಟಾಕ್​

  • ಒಗ್ಗಟ್ಟಿನ ಕೊರತೆ, ಟಾಸ್ಕ್​ ರದ್ದಾದ ಬಗ್ಗೆ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್

ಖಾಲಿಯಾಗಿದ್ದ ಬಿಗ್​ಬಾಸ್​ ಮನೆಗೆ ಮೂವರು ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಹೈಜಾಕರ್​ ಆಗಿ ಎಂಟ್ರಿ ಕೊಟ್ಟ ಗಾನವಿ, ಪ್ರಶಾಂತ್​ ಹಾಗೂ ಸೋನಿಕಾ ಆಟಗಳು ಅಷ್ಟಾಗಿ ವೀಕ್ಷಕರಿಗೆ ಮಜ ಕೊಟ್ಟಿಲ್ಲ. ಗಾನವಿಯವರ ಕಿರುಚಾಟ, ನಗುವೇ ತರಿಸದ ಪ್ರಶಾಂತ್​ ಕಾಮಿಡಿಗೆ ರೋಸಿ ಹೋದ ಜನರು ಮತ್ತೆ ಗಿಲ್ಲಿನ ಕರಿಸಿ ಎಂದು ಪಟ್ಟು ಹಿಡಿದಿದ್ದಾರೆ.

ಈ ವಾರ ಕ್ಯಾಪ್ಟನ್​ ಸ್ಥಾನಕ್ಕಾಗಿ ನಡೆದ ಎರಡು ಟಾಸ್ಕ್​ಗಳಲ್ಲಿ ಗಾನವಿ ನಾಯಕತ್ವದ ಗ್ರೀನ್​ ಟೀಂ ಗೆದ್ದುಕೊಂಡಿತ್ತಾದರೂ ಸಹ ಉಸ್ತುವಾರಿಗಳಾದ ಮಂಜ ಮತ್ತು ಲಿಖಿತ್​ ಪೆದ್ದಾಟದಿಂದ ಕ್ಯಾಪ್ಟನ್​ ಸ್ಥಾನಕ್ಕೆ ಟಾಸ್ಕ್​​ ರದ್ದು ಮಾಡಲಾಗಿತ್ತು. ಇತರ ಸ್ಪರ್ಧಿಗಳಿಗೆ ಚಾನ್ಸ್ ಕೊಡದೆ ಕಿರುಚಾಡಿದ ಗಾನವಿ ವಿರುದ್ಧ ಇಡೀ ಮನೆ ನಿಂತು ಕಳಪೆ ಕೊಟ್ಟು ಜೈಲಿಗೆ ಕಳುಹಿಸಿದರು. ಉಸ್ತುವಾರಿ ಸ್ಥಾನವನ್ನು ಸರಿಯಾಗಿ ನಿರ್ವಹಿಸದ ಮಂಜನನ್ನು ಸಹ ಈ ಬಾರಿ ಜೈಲಿಗೆ ಕಳುಹಿಸಲಾಗಿತ್ತು. ಸದ್ಯ ಈ ಎಲ್ಲ ವಿಚಾರದ ಬಗ್ಗೆ ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಚರ್ಚೆಯಾಗಲಿದೆ. ಈ ಬಗ್ಗೆ ಪ್ರೊಮೋಸಹ ರಿಲೀಸ್​ ಆಗಿದೆ.

ಪ್ರೊಮೋದಲ್ಲಿ ಏನಿದೆ?

ಹೊಸದಾಗಿ ಬಂದ ಸ್ಪರ್ಧಿಗಳು ಮನೆಯಲ್ಲಿ ಯಾವ ರೀತಿಯ ಮನರಂಜನೆ ನೀಡುತ್ತಿದ್ದಾರೆ, ಹಳೆಯ ಸ್ಪರ್ಧಿಗಳೊಂದಿಗೆ ಅವರ ಹೊಂದಾಣಿಕೆ ಹೇಗಿದೆ ಎಂಬ ಬಗ್ಗೆ ಮಾತುಕತೆ ನಡೆಯಲಿದೆ. ' ನಿಜವಾಗಿಯೂ ಸ್ಪರ್ಧಿಗಳು ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರಾಅಥವಾ ವೈಲ್ಡ್​​ ಕಾರ್ಡ್​ ಸ್ಪರ್ಧಿಗಳು ಆಟದ ಮಜಲನ್ನು ಬದಲಾಯಿಸಿದ್ದಾರಾ. ಇಲ್ಲ ಹಳೆಯ ಸ್ಪರ್ಧಿಗಳ ಜೊತೆ ಒಗ್ಗಿಕೊಂಡಿದ್ದಾರಾ' ಎನ್ನುವ ಎಲ್ಲ ವಿಚಾರದ ಬಗ್ಗೆ ಈ ಬಾರಿ ಮಾತನಾಡಲಾಗುತ್ತದೆ ಎನ್ನುವುದನ್ನು ಸುದೀಪ್​ ಉಲ್ಲೇಖಿಸಿದ್ದಾರೆ.

ತಾಂಡವ್​ ರೀ ಎಂಟ್ರಿ ಬಗ್ಗೆ

ತಾಂಡವ್​ ಅವರು ಕ್ಯಾಪ್ಟನ್​ ಸ್ಥಾನ ಹೈಜಾಕ್ ಮಾಡುವ ಮೂಲಕ ಬಿಗ್​ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಅವರು ಕಂಡಂತೆ ಆಸಿಯಾಗೆ ಸ್ನೇಹವನ್ನು ದುರ್ಬಳಕೆ ಮಾಡಿಕೊಳ್ಳುವವರು ಎಂದು ಫಲಕ ಕೊಟ್ಟಿದ್ರೆ, ಶಾಸ್ತ್ರಿಗೆ ಹೊಟ್ಟೆ ಕಿಚ್ಚು, ಸಂಗೀತಾಗೆ ಮುಖವಾಡ, ಲಿಖಿತ್​ಗೆ ಮ್ಯಾನಿಪುಲೇಟ್​ ಹಾಗೂ ಜಗದೀಶ್​ಗೆ ಬೇರೆಯವರ ನೆರಳಲ್ಲಿ ಬದುಕುವವರು ಎನ್ನುವ ಫಲಕ ಕೊಟ್ಟಿದ್ದರು. ಈ ಬಗ್ಗೆ ಎಲ್ಲ ಸ್ಪರ್ಧಿಗಳು ದಿಕ್ಕಾರ ಕೂಗಿದ್ದರು. ತಾಂಡವ್​ರ ಈ ನಿರ್ಧಾರ ಸರಿಯಾ, ಕ್ಯಾಪ್ಟನ್​ ಆಗಿ ಎಂಟ್ರಿ ಕೊಟ್ಟ ನಂತರ ಅವರು ಬಿಗ್​ಬಾಸ್ ಮನೆಯಲ್ಲಿ ಆಟದ ತಂತ್ರವನ್ನು ಬದಲಾಯಿಸಿದ್ದಾರಾ ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ.

ಗಾನವಿ ವಿರುದ್ಧ ನಿಂತ ಇಡೀ ಮನೆ

ಹಳ್ಳಿ ಪವರ್​ನಲ್ಲಿ ಘಾಟಿ ಗಾನವಿ ಎಂದೇ ಫೇಮಸ್​ ಆದ ಇವರು ತಮ್ಮ ಇಡೀ ಟೀಂ ಅನ್ನು ಒಟ್ಟಾಗಿಟ್ಟುಕೊಂಡು ಎರಡು ಟಾಸ್ಕ್​ನಲ್ಲಿ ಗೆದ್ದಿದ್ದರು. ಭಾರ ಹೊತ್ತ ಧೀರ ಟಾಸ್ಕ್​​ನಲ್ಲಿ ಗಗನ್​, ಸೌಂದರ್ಯ ಹಾಗೂ ಇತರ ಸ್ಪರ್ಧಿಗಳಿಗೆ ಚಾನ್ಸ್​ ನೀಡದ ಕಾರಣ ಅವರ ಟೀಂ ಸದಸ್ಯರು ಅವರ ವಿರುದ್ಧ ನಿಂತರು. ಕಳಪೆ ಎಂದು ಬಂದಾಗ ಜಗದೀಶ್​, ಗಗನ್ ಹಾಗೂ ಸೌಂದರ್ಯ ಸೇರಿದಂತೆ ಹಲವರು ಗಾನವಿ ವಿರುದ್ಧ ನಿಂತರು. ನಾನು ಒಂಟಿಯಾಗಿ ನಿಂತು ಹೋರಾಡ್ತೇನೆ ಎಂದಿದ್ದರು. ಸದ್ಯ ಜೈಲಿನಲ್ಲಿ ಗಾನವಿ ಇದ್ದಾರೆ. ಗಾನವಿ ಅವರ ಈ ವರ್ತನೆ ಸರಿಯಿತ್ತಾ? ಎನ್ನುವ ಪ್ರಶ್ನೆ ಇನ್ನೂ ಹಲವರಲ್ಲಿ ಇದೆ.

ಲಿಖಿತ್​​ ಬಗ್ಗೆ

ಲಿಖಿತ್​ ಯಾವ ಟಾಸ್ಕ್​ ಅನ್ನು ಸರಿಯಾಗಿ ಆಡದೆ, ಆಸಿಯಾ ವಿರುದ್ಧ ಆಗಾಗ್ಗೆ ಇರಿಟೇಟ್ ಮಾಡುತ್ತಿರುವ ಬಗ್ಗೆ ಚರ್ಚೆ ಮಾಡಲು ವೀಕ್ಷಕರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸುದೀಪ್​ ಕ್ಲಾಸ್​ ತೆಗೆದುಕೊಳ್ಳುತ್ತಾರಾ ಅಥವಾ ಈ ಬಾರಿ ಉಸ್ತುವಾರಿಗಳಾಗಿದ್ದ ಲಿಖಿತ್​ ಮತ್ತು ಮಂಜುನನ್ನು ಹೇಗೆ ತರಾಟೆಗೆ ತೆಗೆದುಕೊಳ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).