ಮುಂಬೈ: ಬಾಲಿವುಡ್ ಸೆಲಿಬ್ರೆಟಿ ಫೋಟೋಗ್ರಾಫರ್ ಡಬ್ಬೂ ರಾಟ್ನಾನಿ ತಮ್ಮ ವಾರ್ಷಿಕ ಕ್ಯಾಲೆಂಡರ್ ಅನ್ನು ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದರು. ತಮ್ಮ ಕ್ಯಾಲೆಂಡರ್ಗಾಗಿ ಸೆರೆಹಿಡಿದಿರುವ ನಟಿ ಕಿಯಾರಾ ಅಡ್ವಾಣಿ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಫೋಟೋ ಟೀಕೆಗೆ ಒಳಗಾಗಲು ಟಾಪ್ಲೆಸ್ ಮಾತ್ರ ಕಾರಣವಲ್ಲ. ಬದಲಾಗಿ ಫೋಟೋ ಕುರಿತಾದ ಕೃತಿಚೌರ್ಯ ಆರೋಪ ಕೂಡ ಹೌದು. ಅಂತಾರಾಷ್ಟ್ರೀಯ ಫೋಟೋಗ್ರಾಫರ್ ಮರಿಯಾ ಬಾರ್ಷ್ ಫೋಟೋಶೂಟ್ ಅನ್ನು ಯಥಾವತ್ತಾಗಿ ಡಬ್ಬೂ ರಾಟ್ನಾನಿ ನಕಲು ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.
ಕ್ಯಾಲೆಂಡರ್ ಫೋಟೋದಲ್ಲಿ ನಟಿ ಕಿಯಾರ ಅಡ್ವಾಣಿ ಟಾಪ್ಲೆಸ್ ಆಗಿ ದೊಡ್ಡ ಎಲೆಯ ಮರೆಯಲ್ಲಿ ನಿಂತು ಮಾದಕವಾಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಆದರೆ, ಇದೇ ಹೋಲಿಕೆ ಈ ಮೊದಲೇ ಮರಿಯಾ ಬಾರ್ಷ್ ಮಾಡಿರುವ ಫೋಟೋಶೂಟ್ನಲ್ಲಿದೆ.
ಹೀಗಾಗಿ ಎರಡು ಫೋಟೋಗಳನ್ನು ಒಟ್ಟಿಗೆ ಸೇರಿಸಿ ನೆಟ್ಟಿಗರು ಡಬ್ಬೂ ರಾಟ್ನಾನಿ ವಿರುದ್ಧ ಕೃತಿಚೌರ್ಯ ಆರೋಪ ಮಾಡಿದ್ದಾರೆ. ಡಬ್ಬೂ ರಾಟ್ನಾನಿ ಅವರು ಮರಿಯಾ ಅವರ ಐಡಿಯಾವನ್ನು ಕದ್ದಿದ್ದಾರೆ ಎಂದು ಕಿಡಿಕಾರಿದ್ದಾರೆ. ವಿಶೇಷವೆಂದರೆ ಮರಿಯಾ ಕೂಡ ಫೋಟೋವನ್ನು ಪೋಸ್ಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.
ಭೂಮಿ ಪಡ್ನೇಕರ್, ಸನ್ನಿ ಲಿಯೋನ್, ವಿದ್ಯಾ ಬಾಲನ್, ವಿಕ್ಕಿ ಕುಶಾಲ್, ಅನನ್ಯ ಪಾಂಡೆ ಸೇರಿದಂತೆ ಮತ್ತಿತರರು ಡಬ್ಬೂ ರಾಟ್ನಾನಿ ಅವರ ಕ್ಯಾಲೆಂಡರ್ಗೆ ಫೋಸ್ ನೀಡಿದ್ದಾರೆ. (ಏಜೆನ್ಸೀಸ್)