ಸಿನಿವಾಣಿ

ಮೂರೇ ದಿನದಲ್ಲಿ 13 ಕೋಟಿ ಸಮೀಪ ಬಂದ ರಾಕಿ ಭಾಯ್​!

manjunathktgns

ಬೆಂಗಳೂರು: ‘ರಾಕಿಂಗ್ ಸ್ಟಾರ್’ ಯಶ್ ಅವರ ಹುಟ್ಟುಹಬ್ಬದ ನಿಮಿತ್ತ ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಟೀಸರ್ ಗುರುವಾರ ರಾತ್ರಿ 9.29ಕ್ಕೆ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆ ಆಗಿದೆ. ಹಾಗೆ ರಿಲೀಸ್ ಆದ ಟೀಸರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಇದೀಗ 13 ಕೋಟಿ (130 ಮಿಲಿಯನ್) ವೀಕ್ಷಣೆಯ ಸಮೀಪಕ್ಕೆ ಬಂದು ನಿಂತಿದೆ ಟ್ರೇಲರ್​.

ಸದ್ಯಕ್ಕೆ ಇದು ವಿಶ್ವದಲ್ಲಿ ಬೇರಾವ ಸಿನಿಮಾ ಮಾಡದ ಸಾಧನೆಯನ್ನು ಕನ್ನಡದ ‘ಕೆಜಿಎಫ್’ ಸಿನಿಮಾ ಮಾಡಿದೆ. ಈ ಮೂಲಕ ಘಟಾನುಘಟಿ ಹಾಲಿವುಡ್ ಸಿನಿಮಾಗಳಿಗೂ ಸ್ಯಾಂಡಲ್​ವುಡ್ ಕೆಜಿಎಫ್​ ಸೆಡ್ಡು ಹೊಡೆದಿದೆ. ಕೇವಲ 24 ಗಂಟೆಯಲ್ಲಿ 7.8 ಕೋಟಿ (78 ಮಿಲಿಯನ್) ವೀಕ್ಷಣೆ ಪಡೆದು ದಾಖಲೆ ನಿರ್ಮಿಸಿದ್ದ ಟೀಸರ್, ಇದೀಗ 13 ಕೋಟಿ ವೀಕ್ಷಣೆಯತ್ತ ಮುನ್ನುಗ್ಗುತ್ತಿದೆ.

ಇನ್ನು ಲೈಕ್ಸ್ ವಿಚಾರದಲ್ಲಿ ಬಂದರೆ, ಇಲ್ಲಿಯವರೆಗೂ  60 ಲಕ್ಷಕ್ಕೂ (6.6 ಮಿಲಿಯನ್)​ ಅಧಿಕ ಲೈಕ್ಸ್ ಪಡೆದುಕೊಂಡು ಮುನ್ನುಗುತ್ತಿದೆ. ಈ ಮೊದಲು ಸುಶಾಂತ್ ಸಿಂಗ್ ರಜಪೂತ್ ದಿಲ್​ಬೇಚಾರ ಸಿನಿಮಾ 24 ಗಂಟೆಯಲ್ಲಿ 60 ಲಕ್ಷ (6 ಮಿಲಿಯನ್) ಲೈಕ್ಸ್​ ಗಿಟ್ಟಿಸಿಕೊಂಡು ಮೊದಲ ಸ್ಥಾನದಲ್ಲಿದೆ. ಇದೀಗ ಕೆಜಿಎಫ್​ ಅದನ್ನೂ ಮೀರಿ ಮುನ್ನಡೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ.