ಸಿನಿವಾಣಿ

ರವೀನಾ ಕೆಜಿಎಫ್ ಶೂಟೌಟ್

ಬೆಂಗಳೂರು: ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಅಭಿನಯಿಸಲು ಬಾಲಿವುಡ್ ಬೆಡಗಿ ರವೀನಾ ಟಂಡನ್ ಕೆಲವು ದಿನಗಳ ಹಿಂದೆ ಚಿತ್ರತಂಡವನ್ನು ಸೇರಿಕೊಂಡಿದ್ದು ಈಗಾಗಲೇ ಗೊತ್ತಿರುವಂಥದ್ದೇ. ಇದೀಗ ಅವರು ಶೂಟಿಂಗ್ ಸ್ಪಾಟ್​ನಿಂದ ಔಟ್ ಆಗಿದ್ದಾರೆ. ಅಂದರೆ ತಮ್ಮ ಪಾತ್ರಕ್ಕೆ ಸಂಬಂಧಿಸಿದ ದೃಶ್ಯಗಳ ಚಿತ್ರೀಕರಣ ಮುಗಿಸಿ ನಿರ್ಗಮಿಸಿದ್ದಾರೆ.

ಶೂಟಿಂಗ್​ನಲ್ಲಿನ ಸಂತೋಷದ ಕ್ಷಣಗಳ ನೆನಪಿಗಾಗಿ ‘ಕೆಜಿಎಫ್’ ಚಿತ್ರತಂಡದ ಜತೆಗೆ ಗ್ರೂಪ್ ಫೋಟೋ ತೆಗೆಸಿಕೊಂಡಿರುವ ಅವರು ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೂಡ ಹಂಚಿಕೊಂಡಿದ್ದಾರೆ.

ವಿಜಯ್ ಕಿರಗಂದೂರು ನಿರ್ವಣ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಯಶ್ ನಾಯಕರಾಗಿ ಅಭಿನಯಿಸುತ್ತಿದ್ದು, ಅವರಿಗೆ ಜೋಡಿಯಾಗಿ ನಾಯಕಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ. ಜತೆಗೆ ಬಾಲಿವುಡ್​ನ ಸಂಜಯ್ ದತ್ ಕೂಡ ಈ ಚಿತ್ರದಲ್ಲಿದ್ದಾರೆ. ಇದರಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಕಾಣಿಸಿಕೊಳ್ಳಲಿದ್ದಾರೆ.

1999ರಲ್ಲಿ ಉಪೇಂದ್ರ ನಿರ್ದೇಶನದ ‘ಉಪೇಂದ್ರ’ ಸಿನಿಮಾ ಮೂಲಕ ರವೀನಾ ಸ್ಯಾಂಡಲ್​ವುಡ್​ಗೆ ಪ್ರವೇಶ ಮಾಡಿದ್ದ ರವೀನಾ ಟಂಡನ್, ಎರಡು ದಶಕದ ಬಳಿಕ ‘ಕೆಜಿಎಫ್: ಚಾಪ್ಟರ್ 2’ ಮೂಲಕ ಕಮ್್ಯಾಕ್ ಮಾಡಿದ್ದಾರೆ.