ಸಿನಿವಾಣಿ

ಕೆಜಿಎಫ್​​-2 ಗೆಲ್ಲಿಸಿದ ಅಭಿಮಾನಿಗಳಿಗೆ ಭಾವನಾತ್ಮಕ ವಿಡಿಯೋ ಹರಿಬಿಟ್ಟ ರಾಕಿಭಾಯ್!

theerthaswamy

ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​-2 ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಕೆಜಿಎಫ್​ ಚಾಪ್ಟರ್​ 1 ಗಿಂತ ಚಾಪ್ಟರ್​ 2 ಎಲ್ಲೆಡೆ ಅದ್ಧೂರಿ ಓಪನಿಂಗ್​ ಪಡೆದುಕೊಂಡಿದ್ದು, ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಿದೆ.

ಬಹು ದೊಡ್ಡ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ನಟ, ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ಒಂದು ಭಾವನಾತ್ಮಕ ವಿಡಿಯೋ ಹರಿಬಿಟ್ಟಿದ್ದಾರೆ.

ಇದರಲ್ಲಿ ಒಂದು ಚಿಕ್ಕ ಕಥೆಯೊಂದನ್ನು ಹೇಳುವ ಮೂಲಕ ಧನ್ಯವಾದ ಅರ್ಪಿಸಿರುವ ನಟ, ನನಗೆ ತುಂಬಾ ಪ್ರೀತಿ ಮತ್ತು ಅಪಾರ ಆಶೀರ್ವಾದಗಳನ್ನು ನೀಡಿದ್ದಕ್ಕಾಗಿ ನಾನು ಎಲ್ಲರಿಗೂ ಪೂರ್ಣ ಹೃದಯದಿಂದ ಧನ್ಯವಾದಗಳು ಹೇಳುತ್ತೇನೆ ಎಂದಿದ್ದಾರೆ.