ಕೆಜಿಎಫ್ – ಚಾಪ್ಟರ್ 2’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮಲ್ಪೆ ಪಡುಕೆರೆ ಬೀಚ್ನಲ್ಲಿ ಗುರುವಾರ ಪ್ರಾರಂಭವಾಗಿದೆ. ಯಶ್, ಶ್ರೀನಿಧಿ ಶೆಟ್ಟಿ ಸೇರಿ ಹಲವರು ಮೂರು ದಿನಗಳ ಈ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಜತೆಗೆ ಸಫಾರಿ, ರೇಂಜ್ ರೋವರ್, ಲ್ಯಾಂಡ್ ರೋವರ್ನಂತಹ ದುಬಾರಿ ಕಾರುಗಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ. ಆ ಶೂಟಿಂಗ್ನ ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕುತೂಹಲ ಮೂಡಿಸುತ್ತಿವೆ. ಅಷ್ಟೇ ಅಲ್ಲದೆ ಯಶ್ ನೋಡಲು ಭಾರಿ ಸಂಖ್ಯೆಯಲ್ಲಿ ಜನ ಬೀಚ್ ಬಳಿ ಸೇರಿದ್ದು,. ಚಿತ್ರೀಕರಣ ಸ್ಥಳದ ಫೋಟೋ ತೆಗೆಯದಂತೆ, ವಿಡಿಯೋ ಮಾಡದಂತೆ ನಿರ್ಬಂಧ ಹೇರಲಾಗಿತ್ತು. ಈ ನಡುವೆಯೂ ಒಂದಷ್ಟು ವಿಡಿಯೋಗಳು ಹರಿದಾಡುತ್ತಿವೆ.