ಕೀರ್ತಿ ಸುರೇಶ್​, ರಾಧಿಕಾ ಆಪ್ಟೆ 
ಸಿನಿವಾಣಿ

ಸೋದರ ಮಾವನನ್ನು ಮದುವೆಯಾಗುವ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ್ದ ರಾಧಿಕಾ ಆಪ್ಟೆ; ಕೀರ್ತಿ ಸುರೇಶ್​​ ಸ್ಪಷ್ಟನೆ ಕೊಟ್ಟಿದ್ದು ಹೀಗೆ..Keerthy Suresh

  • ಸೋದರ ಮಾವನನ್ನೇ ಮದುವೆಯಾಗುವುದು, ವಯಸ್ಸಾದ ನಟನೊಂದಿಗೆ ರೊಮ್ಯಾನ್ಸ್ ಬಗ್ಗೆ ರಾಧಿಕಾ ಆಪ್ಟೆ ಮಾತು.

  • ರಾಧಿಕಾ ಆಪ್ಟೆ ಅಂದು ಹೇಳಿದ್ದೇನು, ತಾವ್ಯಾಕೆ ನಕ್ಕಿದ್ದು ಎಂದು ಸ್ಪಷ್ಟನೆ ಕೊಟ್ಟ ಸೌತ್ ಬ್ಯೂಟಿ ಕೀರ್ತಿ ಸುರೇಶ್.

  • ನಾನು ಈ ಮದುವೆ ವಿಚಾರದ ಬಗ್ಗೆ ಆಕೆಗೆ ಅರ್ಥ ಮಾಡಿಸಿದೆ ಎಂದ ಕೀರ್ತಿ ಸುರೇಶ್.

 Keerthy Suresh Reacts To Radhika Apte: 'ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ ಅಂದು ರಾಧಿಕಾ ಆಪ್ಟೆ ಅವರು ಏನು ಮಾತನಾಡಿದರು ಎನ್ನುವುದೇ ಅರ್ಥವಾಗಿಲ್ಲ. ತೆಲುಗು ಸಿನಿಮಾವೊಂದರಲ್ಲಿ ಸೋದರ ಮಾವನನ್ನು ಮದುವೆಯಾಗಿ ಅವರೊಂದಿಗೆ, ರೊಮ್ಯಾನ್ಸ್ ಮಾಡಬೇಕಿತ್ತು. ಆ ಪಾತ್ರ ನನಗಿಷ್ಟವಾಗಿಲ್ಲ ಎಂದು ಹೇಳಿದಾಗ ನನಗೆ ಅರ್ಥವಾಗಿಲ್ಲ. ಆ ನಂತರ ಆಕೆ ನಮ್ಮ ಮದುವೆ ಪದ್ಧತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅರಿತುಕೊಂಡೆ. ಆಕೆಗೆ ಇಲ್ಲಿನ ಸಂಪ್ರದಾಯದ ಬಗ್ಗೆ ತಿಳಿಸಲು ಯತ್ನಿಸಿದೆ' ಹೀಗೆ ಕೀರ್ತಿ ಸುರೇಶ್​ ಸ್ಪಷ್ಟನೆ ಕೊಟ್ಟರು.

ಅಕ್ಕ ವೆಬ್​ ಸರಣಿ ಪ್ರಚಾರದ ವೇಳೆ ರಾಧಿಕಾ ಆಪ್ಟೆ ಅವರು ದಕ್ಷಿಣ ಸಿನಿಮಾ ರಂಗದ ಬಗ್ಗೆ ಕೊಟ್ಟಿದ್ದ ಹೇಳಿಕೆಯು ಭಾರಿ ಗದ್ದಲವನ್ನು ಸೃಷ್ಟಿ ಮಾಡಿತ್ತು. ಅವರ ಈ ಮಾತಿಗೆ ಕೀರ್ತಿ ಸುರೇಶ್ ಸಹ ನಕ್ಕಿದ್ದರು ಎನ್ನುವ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದರು. ಹಾಗೆ ನಡೆದುಕೊಂಡಿದ್ಯಾಕೆ..ಇದೆಲ್ಲ ಗೊಂದಲಕ್ಕೂ ಕಾರಣ ಏನು ಎನ್ನುವುದನ್ನು ಸತ್ಯವಾನ್ ಸಾವಿತ್ರಿ' ಸಿನಿಮಾ ಪ್ರಚಾರದ ಮಧ್ಯೆ ನಟಿ ಕೀರ್ತಿ ಸುರೇಶ್ ಮಾತನಾಡಿದ್ದಾರೆ.

ರಾಧಿಕಾ ಆಪ್ಟೆ ಏನಂದಿದ್ರು?

ಅಕ್ಕ ವೆಬ್​ ಸರಣಿ ರಿಲೀಸ್​​ಗೂ ಮುನ್ನ ಸಂದರ್ಶನದಲ್ಲಿ ಕೀರ್ತಿ ಸುರೇಶ್ ಹಾಗೂ ರಾಧಿಕಾ ಆಪ್ಟೆ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ರಾಧಿಕಾ ಆಪ್ಟೆ ತೆಲುಗು ಸಿನಿಮಾವೊಂದರಲ್ಲಿ ನನ್ನ ಸೋದರ ಮಾವನೊಂದಿಗೆ ಡುಯೆಟ್, ಪ್ರೀತಿಸುವ ಪಾತ್ರ ಇತ್ತು. ನನಗದು ಇಷ್ಟವಾಗಿಲ್ಲ ಎಂದು ಹೇಳಿಕೊಂಡಿದ್ದರು. ಇದಕ್ಕೆ ಕೀರ್ತಿ ಸುರೇಶ್ ಅವರು ಸಹ ಹಲ್ಲು ಕಿರಿದು, ಹೌದು ತಮಿಳು-ತೆಲುಗಿನಲ್ಲಿ ಮಾವಂದಿರನ್ನು ಮದುವೆಯಾಗುವುದು ಸಾಮಾನ್ಯ ಎಂದು ಹೇಳಿದ್ದರು.

ಈ ವಿಡಿಯೋ ವೈರಲ್ ಆಗುತ್ತಲೇ ನೆಟ್ಟಿಗರು ಕಿಡಿಕಾರಿದ್ದರು. ದಕ್ಷಿಣ ಭಾರತದ ಸಂಪ್ರದಾಯಕ್ಕೆ ಹಾಗೂ ಇಲ್ಲಿನ ಆಚಾರ-ವಿಚಾರವನ್ನು ಅಣಕಿಸಲಾಗುತ್ತಿದೆ ಎಂದು ಕಿಡಿಕಾರಿದ್ದರು. ಈ ಹೇಳಿಕೆಯು ಸದ್ಯ ಕೀರ್ತಿ ಸುರೇಶ್​ ಅವರಿಗೆ ಸತ್ಯವಾನ್ ಸಾವಿತ್ರಿ ಸಿನಿಮಾ ಪ್ರಚಾರದ ಮೇಲೆ ಬಿದ್ದಿದೆ. ಸಂದರ್ಶನ ಪಡೆಯುವವರೆಲ್ಲ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.

ಕೀರ್ತಿ ಸುರೇಶ್ ಹೇಳಿದ್ದೇನು?

ಪ್ರಾಮಾಣಿಕವಾಗಿ ಹೇಳ್ತೇನೆ..ಆಕೆ ಮೊದಲಿಗೆ ಏನು ಹೇಳುತ್ತಿದ್ದಳು ಎಂದು ಅರ್ಥವಾಗಿಲ್ಲ. ಸೋದರ ಮಾವನೊಟ್ಟಿಗಿನ ರೊಮ್ಯಾನ್ಸ್, ಮದುವೆ ಏನು ಮಾತನಾಡುತ್ತಿದ್ದರು ಎಂದೇ ಅರ್ಥವಾಗಿಲ್ಲ. ಆನಂತರ ಇಲ್ಲಿನ ಮದುವೆ ಸಂಪ್ರದಾಯದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಯಿತು, ಅವರಿಗೆ ನಮ್ಮ ಸಂಸ್ಕೃತಿ ಬಗ್ಗೆ ಗೊತ್ತಿಲ್ಲ. ಅದರ ಅರಿವನ್ನು ನಾನು ಮಾಡಿಸಿದೆ ಎಂದು ಸ್ಪಷ್ಟನೆ ಕೊಟ್ಟರು ಕೀರ್ತಿ ಸುರೇಶ್.

ತಮಿಳುನಾಡು ಮತ್ತು ಆಂಧ್ರದಲ್ಲಿ ಸೋದರ ಮಾವನ ಮದುವೆ ಬಗ್ಗೆ ಆಕೆಗೆ ತಿಳಿಸಿದೆ. ಕೇರಳದಲ್ಲಿ ಇಂತಹ ಆಚರಣೆ ಇಲ್ಲ. ಹೀಗಾಗಿ ಅವರಿಗೆ ನಮ್ಮ ಸಂಪ್ರದಾಯದ ಬಗ್ಗೆ ಅರಿವಿಲ್ಲ, ಅರ್ಥ ಮಾಡಿಸಲು ಯತ್ನಿಸಿದೆ. ನಾನು ನಮ್ಮ ಸಂಸ್ಕೃತಿ, ಸಂಪ್ರದಾಯ ಪಾಲನೆ ಬಗ್ಗೆ ಎಂದೂ ಮಾತನಾಡಿಲ್ಲ ಎಂದರು ಕೀರ್ತಿ ಸುರೇಶ್.

'ಸತ್ಯವಾನ್ ಸಾವಿತ್ರಿ' ಸಿನಿಮಾ ಬಗ್ಗೆ

ಕೀರ್ತಿ ಸುರೇಶ್ ನಟನೆಯ ಸತ್ಯವಾನ್ ಸಾವಿತ್ರಿ ಸಿನಿಮಾವು ನವೆಂಬರ್​ 20ರಂದು ಬೆಳ್ಳಿ ತೆರೆ ಮೇಲೆ ಅನಾವರಣಗೊಳ್ಳಲಿದೆ. ಬಾಲ ಸರವಣನ್​, ಚಾರುಕೇಶ್​, ಶಿಲ್ಪಾ, ಸುಂದರರಾಜನ್​ ಸೇರಿದಂತೆ ಹಲವು ನಟಿಸಿದ್ದಾರೆ. ಇಷ್ಟವಿಲ್ಲದ ಮದುವೆಗೆ ಸಿಲುಕುವ ಸಾವಿತ್ರಿ ಎಂಬ ವಕೀಲೆ ಪಾತ್ರದಲ್ಲಿ ಕೀರ್ತಿ ಮಿಂಚಿದ್ದಾರೆ. ಸದ್ಯ ನಟಿ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ,(ಏಜೆನ್ಸೀಸ್).