ಸಿನಿವಾಣಿ

ಚಿರಂಜೀವಿ ತಂಗಿ ಕೀರ್ತಿ

‘ಮಹಾನಟಿ’ಯ ಯಶಸ್ಸಿನ ನಂತರ ಕೀರ್ತಿ ಸುರೇಶ್ ಅವರ ಜನಪ್ರಿಯತೆ ಸಿಕ್ಕಾಪಟ್ಟೆ ಹೆಚ್ಚಿದ್ದು, ಅವರ ಜತೆಗೆ ಕೆಲಸ ಮಾಡಬೇಕೆಂದು ಬಹಳಷ್ಟು ಜನ ಕಾಯುತ್ತಿದ್ದಾರೆ. ಆ ಪೈಕಿ ತೆಲುಗು ನಟ ಚಿರಂಜೀವಿ ಸಹ ಒಬ್ಬರು. ಕೀರ್ತಿ ಅವರ ಅಭಿನಯ ನೋಡಿ ಮೆಚ್ಚಿರುವ ಅವರು, ಕೀರ್ತಿ ಜತೆಗೆ ನಟಿಸಬೇಕು ಎಂದುಕೊಂಡಿದ್ದರಂತೆ. ಈಗ ಅದಕ್ಕೊಂದು ಅವಕಾಶ ಸಿಕ್ಕಿದೆ.

‘ವೇದಾಳಂ’ ಚಿತ್ರದ ತೆಲುಗು ರೀಮೇಕ್​ನಲ್ಲಿ ಚಿರಂಜೀವಿ ಅವರ ತಂಗಿ ಪಾತ್ರಕ್ಕೆ ಕೀರ್ತಿ ಆಯ್ಕೆಯಾಗಿದ್ದು, ಆ ಪಾತ್ರಕ್ಕೆ ಅವರ ಹೆಸರನ್ನು ಸೂಚಿಸಿದ್ದು ಸ್ವತಃ ಚಿರಂಜೀವಿ ಅವರೇ ಎಂದು ಹೇಳಲಾಗುತ್ತಿದೆ. ಇದಕ್ಕೆ ಕೀರ್ತಿ ಸಹ ಒಪ್ಪಿಕೊಂಡಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ‘ಸರಕಾರು ವಾರಿ ಪಾಟ’ ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಕೀರ್ತಿ ಸುರೇಶ್ ನಟಿಸಲಿದ್ದಾರೆ. - ಏಜೆನ್ಸೀಸ್