ನಿರ್ದೇಶಕ ಮಿಸ್ಕಿನ್ ಅವರು ನಟಿ ಕೀರ್ತಿ ಸುರೇಶ್ ಅವರನ್ನು ಹೊಗಳುತ್ತಾ ಮುಟ್ಟಿ ಮಾತನಾಡಿಸಿದ ವಿಡಿಯೋ ವೈರಲ್.
ಚೆನ್ನೈನ ಸತ್ಯವಾನ್ ಸಾವಿತ್ರಿ ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಡೆದ ಘಟನೆ.
ನನ್ನ ಮುಖದಲ್ಲಿ ಅಸಮಾಧಾನ ಎಲ್ಲಿದೆ ನೀವಿನ್ನೂ ಅರಿತುಕೊಳ್ಳೋದು ತುಂಬಾನೆ ಇದೆ ಎಂದ ಕೀರ್ತಿ ಸುರೇಶ್.
Keerthy Suresh: ನಟಿ ಕೀರ್ತಿ ಸುರೇಶ್ ಅವರು ನಟಿಸಿರುವ 'ಸತ್ಯವಾನ್ ಸಾವಿತ್ರಿ' ಸಿನಿಮಾ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮದ ವೇಳೆ ನಿರ್ದೇಶಕ ಮಿಸ್ಕಿನ್ ಅವರು ನಟಿ ಕೀರ್ತಿ ಸುರೇಶ್ ಅವರನ್ನು ಹೊಗಳುತ್ತಾ ಸ್ಪರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ನಟಿ ಕೀರ್ತಿ ಸುರೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.
ನಟಿ ಕೀರ್ತಿ ಸುರೇಶ್ ಅವರ ಸತ್ಯವಾನ್ ಸಾವಿತ್ರಿ ಚಿತ್ರದ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ವೈರಲ್ ಆದ ವಿಡಿಯೋ ಪ್ರಕಾರ, ನಿರ್ದೇಶಕ ಮಿಸ್ಕಿನ್ ಅವರು ಕೀರ್ತಿ ಸುರೇಶ್ ಅವರನ್ನು ಹಾಡಿ ಹೊಗಳುತ್ತಾ ಅವರನ್ನು ಸ್ಪರ್ಶಿಸುವುದು ಕಂಡುಬಂದಿದೆ. ಇದನ್ನು ಗಮನಿಸಿದ ಕೆಲವು ನೆಟ್ಟಿಗರು, ಆ ಕ್ಷಣದಲ್ಲಿ ಕೀರ್ತಿ ಸುರೇಶ್ ಅವರ ಮುಖದಲ್ಲಿ ಇರಿಟೇಶನ್ ಭಾವನೆ ಇದೆ. ಅವರಿಗೆ ಅನ್ಕಂಫರ್ಟೆಬಲ್ ಆಗುತ್ತಿದ್ದಂತೆ ಕಾಣಿಸುತ್ತದೆ ಎಂದು ಬರೆದುಕೊಂಡು ನೆಟ್ಟಿಗರು ಪೋಸ್ಟ್ ಹಂಚಿಕೊಂಡಿದ್ದರು. ಈ ವಿರುದ್ಧ ನಟಿ ಕೀರ್ತಿ ಸುರೇಶ್ ಕಿಡಿಕಾರಿದ್ದಾರೆ.
ಟೀಕೆಗಳು ಮತ್ತು ಊಹಾಪೋಹಗಳಿಗೆ ನಟಿ ಕೀರ್ತಿ ಸುರೇಶ್ ಇದೀಗ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಪ್ರತಿಕ್ರಿಯೆಯ ಬಗ್ಗೆ ಜನರು ಮಾಡುತ್ತಿರುವ ಊಹೆಗಳನ್ನು ಪ್ರಶ್ನಿಸಿರುವ ಅವರು, ತೆರೆಯ ಮೇಲಿನ ನಟನೆ ಮತ್ತು ನಿಜಜೀವನದ ವರ್ತನೆಗಳನ್ನು ಹೋಲಿಕೆ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ.
ಟ್ವಿಟರ್ ಲಿಂಕ್ವೊಂದನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಅವರು, 'ಮೊದಲನೆಯದಾಗಿ, ನನ್ನ ಮುಖದಲ್ಲಿ ನಿಮಗೆ ಅಸಮಾಧಾನ ಎಲ್ಲಿ ಕಾಣಿಸುತ್ತಿದೆ. ನಾವಿಬ್ಬರೂ ತಂದೆ-ಮಗಳಂತಹ ಬಾಂಧವ್ಯವನ್ನು ಹೊಂದಿದ್ದೇವೆ. ನಾನು ಅಥವಾ ಅವರು ಈ ಬಗ್ಗೆ ಹೇಳಿದ್ದು ನೀವು ಕೇಳಿಸಿಕೊಂಡಿಲ್ಲವೆ?ಎರಡನೆಯದಾಗಿ, ನನಗೆ ಒಂದು ವೇಳೆ ನನಗೆ ಅಸಮಾಧಾನವಾಗಿತ್ತು ಎಂದೇ ಇಟ್ಟುಕೊಳ್ಳೋಣ; ಹಾಗಾದರೆ ಸಿನಿಮಾಗಳಲ್ಲಿ ನಮ್ಮನ್ನು ಮುಟ್ಟುತ್ತಾರೆ ಎಂಬ ಕಾರಣಕ್ಕೆ ಸಾರ್ವಜನಿಕವಾಗಿಯೂ ಅದನ್ನು ಒಪ್ಪಿಕೊಳ್ಳಬೇಕು ಎಂದು ನೀವು ಹೇಳುತ್ತಿದ್ದೀರಾ? ಬ್ರದರ್, ನೀವಿನ್ನೂ ಕೆಲವು ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ' ಎಂದು ಬರೆದುಕೊಂಡಿದ್ದಾರೆ.
ಆದರೆ, ಈ ಚರ್ಚೆಯು ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಸಿನಿಮಾಗಳಲ್ಲಿ ಆಪ್ತ ಹಾಗೂ ದೈಹಿಕ ಸ್ಪರ್ಶವಿರುವ ದೃಶ್ಯಗಳಲ್ಲಿ ನಟಿಸುವ ನಟಿಯರಿಗೆ ಸಾರ್ವಜನಿಕವಾಗಿ ಇಂತಹ ಸನ್ನೆಗಳು ನಡೆದಾಗ ಏಕೆ ಸಮಸ್ಯೆಯಾಗಬೇಕು ಎಂದು ನೆಟ್ಟಿಗರ ಒಂದು ವರ್ಗ ಪ್ರಶ್ನಿಸಲಾರಂಭಿಸಿತ್ತು.
ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಅವರು ಪ್ರೆಸ್ಮೀಟ್ನಲ್ಲಿ ಮಾತನಾಡಿದ ಅವರು, 'ಮಿಸ್ಕಿನ್ ಸರ್ ನನ್ನ ಮೇಲೆ ಕೈ ಇಟ್ಟಿದ್ದು ನನಗೆ ತುಂಬಾನೆ ಅನ್ಕಂಫರ್ಟೆಬಲ್ ಫೀಲ್ ಆಯ್ತಂತೆ. ಅವರು ನನ್ನನ್ನು ಹೊಗಳುತ್ತಾ ಕೈ ಇಟ್ಟರು. ನಾನು ನನಗೆ ಅನ್ ಕಂಫರ್ಟ್ ಫೀಲ್ ಆಗುತ್ತಿದೆ ಎಂದು ನಾನು ಹೇಳಿದ್ನ. ಅವರು ನನ್ನನ್ನು ಮಗಳೆಂದು ನಾನು ಅವರನ್ನು ಅಪ್ಪನೆಂದು. ನಾನೇ ಅವರ ಕೈಯನ್ನು ಹಿಡಿದುಕೊಳ್ಳುತ್ತಿದೆ. ಇವರಿಗೆ ಕಾಂಟೆಂಟ್ ಕ್ರಿಯೇಟ್ ಮಾಡಲು ಒಂದು ವಿಚಾರ ಬೇಕಷ್ಟೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು, (ಏಜೆನ್ಸೀಸ್).