ಸಿನಿವಾಣಿ

ಕ್ಯಾಂಟೀನ್ ಮೆಟ್ಟಿಲುಗಳಿಂದ ಸ್ಯಾಂಡಲ್​ವುಡ್ ತೊಟ್ಟಿಲಿಗೆ..

ಬೆಂಗಳೂರು: ಒಂದು ಕಾಲದಲ್ಲಿ ಕ್ಯಾಂಟೀನ್ ಮೆಟ್ಟಿಲುಗಳಲ್ಲಿ ಮಲಗುತ್ತಿದ್ದ ಕವೀಶ್ ಶೆಟ್ಟಿ ಕೆಲವರ್ಷಗಳ ಹಿಂದೆ ಸ್ಯಾಂಡಲ್​ವುಡ್ ತೊಟ್ಟಿಲನ್ನು ಏರಿದ್ದಷ್ಟೇ ಅಲ್ಲ, ಸದ್ಯ ತ್ರಿಭಾಷಾ ಸಿನಿಮಾದ ನಾಯಕ-ನಿರ್ದೇಶಕರಾಗುವ ಜತೆಗೆ ನಿರ್ವಪಕರಾಗಿಯೂ ಹೊರಹೊಮ್ಮಿದ್ದಾರೆ.

ಕನ್ನಡ, ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ‘ಜಿಲ್ಕಾ’ ಸಿನಿಮಾ ನಿರ್ವಿುಸಿ, ನಿರ್ದೇಶಿಸಿ, ಅಭಿನಯಿಸಿದ್ದು, ಅದರ ಕನ್ನಡ ಅವತರಣಿಕೆ ಶುಕ್ರವಾರ (ಫೆ. 7) ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸಿನಿಮಾರಂಗದಲ್ಲಿ ಮಿಂಚಬೇಕು ಎಂಬ ಆಸೆಯಿಂದ ಕರಾವಳಿಯಿಂದ ಮುಂಬೈಗೆ ತೆರಳಿದ್ದ ಕವೀಶ್, ಅಲ್ಲಿ ಕ್ಯಾಂಟೀನ್​ನಲ್ಲಿ ಕೆಲಸ ಮಾಡುತ್ತ, ಕ್ಯಾಂಟೀನ್ ಮೆಟ್ಟಿಲುಗಳ ಮಲಗುತ್ತಿದ್ದಾಗಲೂ ಕಥೆ ಬರೆಯುತ್ತಿದ್ದರು. ‘ಎಂಬಿಎ ಮಾಡುತ್ತಿದ್ದ ನಾನು ಕೆಲಸಕ್ಕೆ ಸೇರಿದರೆ ಸಿನಿಮಾ ಆಸೆ ಕೈಬಿಡಬೇಕಾಗುತ್ತದೆ ಎಂದುಕೊಂಡು ಚಿತ್ರರಂಗಕ್ಕೆ ಧುಮುಕಿದೆ.

‘ಮುಂಗಾರು ಮಳೆ-2’ ಚಿತ್ರದಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ, ಬಳಿಕ ‘ಜಿಲ್ಕ’ ಸಿನಿಮಾ ಮಾಡಿದೆ’ ಎನ್ನುತ್ತಾರೆ ಕವೀಶ್. ‘ಜಿಲ್ಕ’ ಮೂಲಕ ಕವೀಶ್ ನಾಯಕ, ನಿರ್ದೇಶಕ, ನಿರ್ವಪಕರಾಗಿದ್ದಷ್ಟೇ ಅಲ್ಲದೆ ಕನ್ನಡಕ್ಕೆ ಇಬ್ಬರು ನಾಯಕಿಯರನ್ನೂ ಪರಿಚಯಿಸಿದ್ದಾರೆ. ಕರಾವಳಿಯ ಪ್ರಿಯಾ ಹೆಗ್ಡೆ ಹಾಗೂ ಲಕ್ಷ ಶೆಟ್ಟಿ ಈ ಚಿತ್ರದಲ್ಲಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ‘ನಾನು ಚಿತ್ರರಂಗಕ್ಕೆ ಬರುವ ಸಲುವಾಗಿ ಸಾಫ್ಟ್​ವೇರ್ ಕಂಪನಿ ಉದ್ಯೋಗ ಬಿಟ್ಟೆ. ‘ಜಿಲ್ಕ’ ತಂಡಕ್ಕೆ ಸೇರಿದ ಬಳಿಕ 2 ತೆಲುಗು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು’ ಎನ್ನುತ್ತಾರೆ ಪ್ರಿಯಾ.

‘ನಾನು ಖಾಸಗಿ ಕಂಪನಿಯಲ್ಲಿ ಎಚ್​ಆರ್ ಆಗಿದ್ದೆ. ‘ಜಿಲ್ಕ’ ಚಿತ್ರಕ್ಕೆ ಕವೀಶ್ ಆಫರ್ ಕೊಟ್ಟ ಬಳಿಕ ಕೆಲಸ ಬಿಟ್ಟು ಬಂದೆ. ನಂತರ ಕನ್ನಡ ಚಿತ್ರ ‘ಧೀರನ್’, ತುಳು ಸಿನಿಮಾ ‘ಶಕಲಕ ಬೂಮ್ ಬೂಮ್​ಗೂ ನಾಯಕಿಯಾಗಿ ಆಯ್ಕೆ ಆದೆ’ ಎಂದರು ಲಕ್ಷ. ಉದ್ಯೋಗ ತೊರೆದು ಸ್ಯಾಂಡಲ್​ವುಡ್​ನ ತೊಟ್ಟಿಲಿಗೇರಿರುವ ಈ ಮೂವರೂ ಅಲ್ಲಿಂದಲೇ ಬೆಳೆಯುವ ಮಹ ತ್ವಾಕಾಂಕ್ಷೆ ಹೊಂದಿರು ವುದಾಗಿ ಹೇಳಿಕೊಂಡಿದ್ದಾರೆ.