ಸಿನಿವಾಣಿ

ಕತ್ರಿನಾ ಪೈಜಾಮಾ ಬೆಲೆ ಕೇಳಿದರೆ ನೀವು ದಂಗಾಗುವುದು ಪಕ್ಕಾ!

ಮುಂಬೈ: ಸಿನಿ ಸೆಲೆಬ್ರಿಟಿಗಳು ಬರಿ ದುಬಾರಿ, ಬ್ರ್ಯಾಂಡೆಡ್ ಬಟ್ಟೆಗಳನ್ನ ಧರಿಸುತ್ತರೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುತ್ತೆ. ಹೌದು, ಟ್ರೆಂಡಿ ಔಟ್​ಫಿಟ್ಸ್ ಧರಿಸುವುದು ಸೆಲೆಬ್ರಿಟಿಗಳ ವೃತ್ತಿ ಜೀವನಕ್ಕೆ ಅನಿವಾರ್ಯ ಎಂದೇ ಹೇಳಬೇಕು. ಇದಕ್ಕೆ, ಒಳ್ಳೆಯ ಉದಾಹರಣೆ ಎಂದರೆ ಅದು ಬಾಲಿವುಡ್​ನ ಹಾಟ್ ಬೆಡಗಿ ಕತ್ರಿನಾ ಕೈಫ್. ಸದ್ಯ, ಇವರು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕಾರಣ, ಏನು ಅಂತೀರಾ? ಇತ್ತೀಚೆಗೆ, ಕತ್ರಿನಾ ಅವರು ಮುಂಬೈನ ಏರ್​ಪೋರ್ಟ್​ನಲ್ಲಿ ಧರಿಸಿದ ಹಸಿರು ಪೈಜಾಮಾದ ಬೆಲೆ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಹೌದು, ನಟಿ ಕತ್ರಿನಾ ಮುಂಬೈ ಏರ್​ಪೋರ್ಟ್​ಗೆ 'ವಿಕ್ಟೋರಿಯಾ ಬೇಕಮ್​ ಲೇಬಲ್' ಹೊಂದಿರುವ ಹಸಿರು ಬಣ್ಣದ ಪೈಜಾಮಾ ಧರಿಸಿ ಬಂದಿದ್ದರು. ಸದ್ಯ, ಈ ಉಡುಪು ಫ್ಯಾಶನ್ ಪ್ರಿಯರ ಗಮನಸೆಳೆದಿದೆ. ಆದರೆ, ಈ ಪೈಜಾಮಾದ ಬೆಲೆ ಬರೋಬ್ಬರಿ 1,07,600 ರೂಗಳಂತೆ. ಇದನ್ನು, ಗಮನಿಸಿದ ಫ್ಯಾಶನ್ ಪ್ರಿಯರು ಸದ್ಯ ಹುಬ್ಬೇರಿಸಿದ್ದಾರೆ. ಈಗ ನಟಿಯ ಈ ಪೈಜಾಮಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.