ಸಿನಿವಾಣಿ

ಪತಿಯನ್ನು ಬಿಟ್ಟು ಇರೋಕೆ ಆಗುತ್ತಿಲ್ಲ ಎಂದು ಕತ್ರೀನಾ ಕೈಫ್ ಏನು ಮಾಡಿದ್ದಾರೆ ಗೊತ್ತಾ? ಫೋಟೋ ವೈರಲ್!

ಬಾಲಿವುಡ್ ನಟಿ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾಗಿ, ಜನವರಿ 9ಕ್ಕೆ ಒಂದು ತಿಂಗಳು ಕಳೆದಿದೆ. ಡಿಸೆಂಬರ್ 09, 2021 ರಂದು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಫೋರ್ಟ್ ಬರ್ವಾರಾದಲ್ಲಿ ಈ ಜೋಡಿಯ ಅದ್ಧೂರಿ ಮದುವೆ ನಡೆಯಿತು. ಇದೀಗ, ಒಂದು ತಿಂಗಳ ವಾರ್ಷಿಕೋತ್ಸವಕ್ಕೆಂದು, ನಟಿ ಕತ್ರಿನಾ ಗಂಡನನ್ನು ಬಿಟ್ಟು ಇರಲಾಗದೆ, ಮಧ್ಯಪ್ರದೇಶದ ಇಂದೋರ್‌ಗೆ ಹಾರಿದ್ದಾರೆ. ಹೌದು, ಅಲ್ಲಿ ನಟ ವಿಕ್ಕಿ ಅವರ ಮುಂಬರುವ ಚಿತ್ರದ ಚಿತ್ರೀಕರಣ ಮಾಡುತ್ತಿದ್ದಾರೆ. 
ಹಾಗಾಗಿ, ಶುಕ್ರವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ. ನಂತರ, ಅವರು ಇಂದೋರ್‌ನ ದೇವಿ ಅಹಲ್ಯಾಬಾಯಿ ಹೋಳ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಹೀಗಾಗಿ, ನಟಿ ಪತಿ ವಿಕ್ಕಿ ಕೌಶಲ್ ಅವರ ವಿವಾಹವಾಗಿ ಒಂದು ತಿಂಗಳು ಪೂರ್ಣಗೊಳ್ಳುತ್ತಿದ್ದಂತೆ ಇಂದೋರ್‌ಗೆ ಆಗಮಿಸಿ ಅವರ ಜತೆ ಕಾಲಕಳೆದಿದ್ದಾರೆ. ನಟಿ ಮತ್ತು ವಿಕ್ಕಿಯ ಸಂಭ್ರಮಾಚರಣೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.