ಸಿನಿವಾಣಿ

ವಿಕ್ಕಿಗೆ ಕತ್ರಿನಾ ಲಕ್ಷ್ಮಣ ರೇಖೆ!

ವಿಕ್ಕಿ ಕೌಶಾಲ್​ ಹಾಗೂ ಕತ್ರೀನಾ ಕ್​ೃ ಕಳೆದೆರೆಡು ವರ್ಷಗಳಿಂದ ಡೇಟಿಂಗ್​ ಮಾಡುತ್ತಿರುವ ವಿಷಯ ಹೊಸದೇನಲ್ಲ. ಆದರೆ, ವಿಕ್ಕಿ ಆಗಲೀ, ಕತ್ರೀನಾ ಆಗಲೀ ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ಮೂಲಗಳ ಪ್ರಕಾರ, ವಿಕ್ಕಿ ತಂದೆಗೆ ಕತ್ರೀನಾ ತಮ್ಮ ಸೊಸೆಯಾಗಿ ಬರುವುದು ಇಷ್ಟವಿಲ್ಲವಂತೆ. ಹಾಗಾಗಿ, ಮೊದಲು ಅವರನ್ನು ಒಪ್ಪಿಸಿ, ಆ ನಂತರ ಈ ವಿಷಯವನ್ನು ಬಹಿರಂಗಗೊಳಿಸುವುದಕ್ಕೆ ಇಬ್ಬರೂ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ, ವಿಕ್ಕಿ ಬಗ್ಗೆ ಕತ್ರೀನಾಗೆ ವ್ಯಾಮೋಹ ಹೆಚ್ಚಾಗಿದ್ದು, ಇನ್ನು ಮುಂದೆ ರೊಮ್ಯಾಂಟಿಕ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳಬಾರದು ಎಂದು ತಾಕೀತು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. "ಮನ್​ಮರ್ಜಿಯಾನ್​' ಚಿತ್ರದಲ್ಲಿ ವಿಕ್ಕಿ ಮತ್ತು ತಾಪ್ಸಿ ನಡುವಿನ ರೊಮ್ಯಾಂಟಿಕ್​ ದೃಶ್ಯಗಳು ಸಾಕಷ್ಟು ಚರ್ಚೆಯಾಗಿತ್ತು. ಇನ್ನು ಮುಂದೆ, ಅಂತಹ ದೃಶ್ಯಗಳಿಂದ ದೂರ ಇರಬೇಕು ಎಂದು ವಿಕ್ಕಿಗೆ ಕತ್ರೀನಾ ಸ್ಪಷ್ಟಪಡಿಸಿದ್ದಾರಂತೆ. ಅದಕ್ಕೆ ಕಾರಣವೂ ಇದೆ.

ವಿಕ್ಕಿಗೂ ಮುನ್ನ ರಣಬೀರ್​ ಕಪೂರ್​ ಜತೆಗೆ ಡೇಟಿಂಗ್​ ಮಾಡುತ್ತಿದ್ದರು ಕತ್ರೀನಾ. ರಣಬೀರ್​ ತಮ್ಮ ಚಿತ್ರಗಳಲ್ಲಿ ರೊಮ್ಯಾಂಟಿಕ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದರ ಜತೆಗೆ, ಆ ನಟಿಯರ ಜತೆಗೆ ಬಹಳ ಹತ್ತಿರವಾಗಿದ್ದರು. ಇದೇ ಕಾರಣದಿಂದ, ರಣಬೀರ್​ ಮತ್ತು ಕತ್ರೀನಾ ನಡುವೆ ಬ್ರೇಕಪ್​ ಆಯಿತು. ತಮ್ಮ ಜೀವನದಲ್ಲಿ ಇದು ಪುನರಾವರ್ತನೆಯಾಗಬಾರದು ಎಂಬ ಕಾರಣಕ್ಕೆ ಕತ್ರೀನಾ ಬಹಳ ಎಚ್ಚರ ವಹಿಸಿದ್ದಾರಂತೆ. ವಿಕ್ಕಿ ತಮ್ಮ ಚಿತ್ರದ ಹೀರೋಯಿನ್​ಗಳಿಂದ ದೂರವೇ ಇರಬೇಕು ಎಂದು ಬಯಸುತ್ತಿದ್ದಾರಂತೆ. ಅವರ ಬಯಕೆ ಈಡೇರುತ್ತದೆಯೇ? ಎಂಬುದನ್ನು ಕಾದು ನೋಡಬೇಕು. & ಏಜೆನ್ಸೀಸ್​