ಸಿನಿವಾಣಿ

ಕಿಸ್ಸಿಂಗ್​ ಸೀನ್​ನಲ್ಲಿ ಬೇಕಂತಲೇ ಮಿಸ್ಟೇಕ್ಸ್​ ಮಾಡ್ತಿದ್ರು ಆ ನಟಿ! ಕಾರ್ತಿಕ್​ ಆರ್ಯನ್​ ಅಚ್ಚರಿ ಹೇಳಿಕೆ | Kartik Aaryan

Kartik Aaryan : ರೊಮ್ಯಾಂಟಿಕ್​​ ಸಿನಿಮಾಗಳಿಗೆ ಬಾಲಿವುಡ್​ ಹೆಸರುವಾಸಿ. ಹೀರೋ ಮತ್ತು ಹೀರೋಯಿನ್​ ನಡುವೆ ಇಂಟಿಮೇಟ್​ ದೃಶ್ಯಗಳನ್ನು ಚಿತ್ರೀಕರಿಸುವುದರಲ್ಲಿ ಬಾಲಿವುಡ್​ ನಂ.1 ಎಂದು ಎಲ್ಲರಿಗೂ ಗೊತ್ತಿದೆ. ಯಾವುದೇ ನಟಿಯಾಗಲಿ ಬಾಲಿವುಡ್​ ಕಾಲಿಟ್ಟರೆ ಸಾಕು ಆಕೆಯನ್ನು ಬೋಲ್ಡ್​ ಆಗಿ ತೋರಿಸಿಬಿಡುತ್ತಾರೆ. ಅದರಲ್ಲೂ ಬಾಲಿವುಡ್​ ಸಿನಿಮಾಗಳಲ್ಲಿ ಕಿಸ್ಸಿಂಗ್​ ದೃಶ್ಯಗಳು ಇದ್ದೇ ಇರುತ್ತವೆ. ಇದೀಗ ಬಾಲಿವುಡ್ ನಟ ಕಾರ್ತಿಕ್​ ಆರ್ಯನ್​, ಕಿಸ್ಸಿಂಗ್​ ಸೀನ್​ ಬಗ್ಗೆ ನೀಡಿರುವ ಹೇಳಿಕೆಯೊಂದು ವೈರಲ್​ ಆಗಿದೆ.

ನಟ ಕಾರ್ತಿಕ್ ಆರ್ಯನ್​ ಇದುವರೆಗೆ 18 ಚಿತ್ರಗಳಲ್ಲಿ ಕೆಲಸ ಮಾಡಿ, 8 ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಅದರಲ್ಲಿ 3 ಸಿನಿಮಾಗಳು ದಾಖಲೆಯ ಗಳಿಕೆಯನ್ನು ಮಾಡಿದೆ. ಈ ಚಾಕೋಲೇಟ್​ ಬಾಯ್​ ರೊಮ್ಯಾಂಟಿಕ್ ಸೀನ್ ಒಂದರಲ್ಲಿ 37 ರೀಟೇಕ್​ಗಳನ್ನು ತೆಗೆದುಕೊಂಡಿದ್ದರು. ಇದು ಭಾರಿ ಸುದ್ದಿಯಾಗಿತ್ತು. ಆದರೆ, 37 ರೀಟೆಕ್​ಗಳನ್ನು ತೆಗೆದುಕೊಳ್ಳಲು ನಟಿಯೇ ಕಾರಣ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ಈ ಕಿಸ್ಸಿಂಗ್​ ಕತೆ ಏನು? ಆ ನಟಿ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಈ ಕತೆಯು 2014ರಲ್ಲಿ ಬಿಡುಗಡೆಯಾದ 'ಕಾಂಚಿ: ದಿ ಅನ್ಬ್ರೇಕಬಲ್' ಸಿನಿಮಾಗೆ ಸಂಬಂಧಿಸಿದ್ದಾಗಿದೆ. ಈ ಚಿತ್ರದಲ್ಲಿ ನಟಿ ಮಿಷ್ಟಿ ಚಕ್ರವರ್ತಿ ಮತ್ತು ಕಾರ್ತಿಕ್ ಆರ್ಯನ್ ಜತೆಯಾಗಿ ನಟಿಸಿದರು. ಇದರಲ್ಲಿ ಆರ್ಯನ್​ ಅವರದ್ದು ಲವರ್ ಬಾಯ್ ಪಾತ್ರ. ಈ ಚಿತ್ರವನ್ನು ಸುಭಾಷ್ ಘಾಯ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಚುಂಬನದ ದೃಶ್ಯವಿದ್ದು, ಇದಕ್ಕಾಗಿ 37 ರೀಟೇಕ್​ಗಳನ್ನು ತೆಗೆದುಕೊಳ್ಳಾಗಿತ್ತು.

ಇತ್ತೀಚೆಗೆ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಕಾರ್ತಿಕ್ ಆರ್ಯನ್​ ಅವರು ಈ ಚುಂಬನದ ದೃಶ್ಯದ ಬಗ್ಗೆ ಮಾತನಾಡಿದ್ದಾರೆ. ಈ ಕಿಸ್ಸಿಂಗ್​ ಸೀನ್​ ಚಿತ್ರೀಕರಣ ಇಷ್ಟೊಂದು ತಲೆನೋವು ತರುತ್ತದೆ ಎಂದು ನಾನೆಂದಿಗೂ ಯೋಚಿಸಿರಲಿಲ್ಲ. ಶೂಟಿಂಗ್​ ದಿನ ನಾವಿಬ್ಬರು ನಿಜವಾದ ಪ್ರೇಮಿಗಳಂತೆ ವರ್ತಿಸುತ್ತಿದ್ದೆವು. ಒಂದು ಸೀನ್ ಮಾಡಲು ಬರೋಬ್ಬರಿ 37 ರೀಟೇಕ್ ತೆಗೆದುಕೊಳ್ಳಬೇಕಾಯಿತು. ಕೊನೆಗೆ ಸುಭಾಷ್ ಜೀ ಬಂದು ಓಕೆ ಅಂದಾಗ ನಮಗೆ ತುಂಬಾ ಖುಷಿಯಾಯಿತು ಎಂದು ಆರ್ಯನ್​ ಹೇಳಿದ್ದಾರೆ.

ನಟಿ ಮಿಶ್ಟಿ ಅವರು ಕಿಸ್ಸಿಂಗ್​ ಸೀನ್​ ಶೂಟಿಂಗ್​ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಿದ್ದರು. ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಿದ್ದಾರೆಂದು ನನಗೆ ಅನಿಸುತ್ತದೆ. ನಿರ್ದೇಶಕ ಸುಭಾಷ್ ಘಾಯ್ ಅವರು ಚಿತ್ರಕ್ಕಾಗಿ ಭಾವೋದ್ರಿಕ್ತ ಚುಂಬನವನ್ನು ಬಯಸಿದ್ದರು. ಆದರೆ, ನನಗೆ ಹೇಗೆ ಮುತ್ತು ಕೊಡಬೇಕೆಂದು ತಿಳಿಯಲಿಲ್ಲ. ಸರ್ ದಯವಿಟ್ಟು ನನಗೆ ಕಿಸ್ ಮಾಡುವುದು ಹೇಗೆಂದು ತೋರಿಸಿ ಎಂದು ಅವರನ್ನೇ ಕೇಳಿದ್ದೆ ಎಂದು ಆರ್ಯನ್​ ಹೇಳಿದ್ದಾರೆ.

ಅಂದಹಾಗೆ ಕಾಂಚಿ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿತು. ಇನ್ನು 2024ರಲ್ಲಿ ಬಿಡುಗಡೆಯಾದ ಕಾರ್ತಿಕ್ ಆರ್ಯನ್ ಅವರ 'ಭೂಲ್ ಭುಲೈಯಾ 3' ಒಂದು ಸೂಪರ್ಹಿಟ್ ಚಿತ್ರವಾಗಿದ್ದು, ಹಲವು ದಾಖಲೆಗಳನ್ನು ಮುರಿದಿದೆ. (ಏಜೆನ್ಸೀಸ್​)