ಚಿತ್ರ Instagram 
ಸಿನಿವಾಣಿ

"ಮಕ್ಕಳ ಹಾಗೆ ಆಡ್ತೀವಿ, ಆದ್ರೆ ಮೆಚ್ಯೂರ್ ಆಗಿದ್ದೇವೆ; ಕಾರ್ತಿಕ್-ಅನನ್ಯಾ ಸಂಬಂಧದ ಸೀಕ್ರೆಟ್ ಬಯಲು! Kartik Aaryan

Kartik Aaryan: ಬಾಲಿವುಡ್‌ನ ಹಾಟ್ ಜೋಡಿ ಎಂದೇ ಪ್ರಸಿದ್ಧೀ ಪಡೆದ ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ಅವರು ಸಮೀರ್ ವಿದ್ವಾನ್ಸ್‌ ನಿರ್ದೇಶನದ  'ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ' ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಟಿಸಿದ್ದು, ಇದೀಗ ಚಿತ್ರವು ಡಿ.25 ರಂದು ತೆರೆ ಮೇಲೆ ಬರಲು ಸಜ್ಜಾಗಿದೆ.
ಈ ಸಿನಿಮಾವು ಕಾರ್ತಿಕ್ ಮತ್ತು ಅನನ್ಯಾ ಅವರ 2019 ರ 'ಪತಿ ಪತ್ನಿ ಔರ್ ವೋ' ಚಿತ್ರದ ನಂತರ ಅವರ ಎರಡನೇ ಚಿತ್ರವಾಗಿದೆ. ಅವರ ವೃತ್ತಿಪರ ಒಡನಾಟದ ಹೊರತಾಗಿಯೂ ಇವರಿಬ್ಬರೂ ಈ ಹಿಂದೆ ಡೇಟಿಂಗ್​ ಮಾಡುತ್ತಿದ್ದರು ಎಂಬ ವದಂತಿಗಳು ಹರಿದಾಡುತ್ತಿದ್ದವು.
ಚಿತ್ರ ಬಿಡುಗಡೆಗೂ ಮುನ್ನ, ಕಾರ್ತಿಕ್ ಆರ್ಯನ್ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಅನನ್ಯಾ ಪಾಂಡೆ ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 
"ಪತಿ ಪತ್ನಿ ಔರ್ ವೋ" ಮತ್ತು " ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ" ನಂತರ ಅನನ್ಯಾ ಅವರಲ್ಲಿ ಏನಾದರೂ ಬದಲಾವಣೆಗಳು ಕಂಡುಬಂದಿವೆಯೇ ಎಂದು ನಿರೂಪಕರು ಪ್ರಶ್ನೆ ಕೇಳಿದಾಗ ಅವರು ನಿಜವಾಗಿಯೂ ಒಳ್ಳೆಯವರು ಎಂದು ನಾನು ಆಗಲೂ ಹೇಳುತ್ತಿದ್ದೆ, ಈಗಲೂ ಹೇಳುತ್ತೇನೆ. ಅವರೊಂದಿಗೆ ಈ ಚಿತ್ರವನ್ನು ಮಾಡುವುದು ನಮಗೆ ತುಂಬಾ ಸಂತೋಷವಾಯಿತು. ನಾವಿಬ್ಬರೂ ಪರಸ್ಪರವಾಗಿ ಹೆಚ್ಚು ಅರ್ಥಮಾಡಿಕೊಳ್ಳುತ್ತಿದ್ದೇವೆ ಎಂದು ಕಾರ್ತಿಕ್​ ಉತ್ತರಿಸಿದರು.
ಸಿನಿಮಾ ಮಾಡುವಾಗ ಇದು ನಮಗೊಂದು ಪ್ರಯಾಣವಾಗಿತ್ತು. ನಾವಿಬ್ಬರು ಜೀವನದಲ್ಲಿ ನಮ್ಮದೇ ಆದ ಕ್ಷಣಗಳನ್ನು ಹೊಂದಿದ್ದೇವೆ ಹಾಗೆಯೇ ಏರಿಳಿತವನ್ನು ಕಂಡಿದ್ದೇವೆ. ಈ ಸಂದರ್ಭದಲ್ಲಿ ನಾವಿಬ್ಬರೂ ವ್ಯಕ್ತಿಗಳಾಗಿ ವಿಕಸನಗೊಂಡು ಈ ಹಂತಕ್ಕೆ ಬಂದಿದ್ದೇವೆ. ಅನನ್ಯಾ ಜೊತೆಗಿನ ಸಂಬಂಧವು ಎಂದಿಗೂ ದ್ವೇಷವಾಗಿ ಇರಲಿಲ್ಲ. ಬದಲಾಗಿ ಪ್ರತಿಕ್ಷಣವೂ ಪ್ರೀತಿ, ಪ್ರೀತಿ, ಪ್ರೀತಿಯೇ ಆಗಿರುತ್ತದೆ ಎಂದು ಅವರು ಹಂಚಿಕೊಂಡರು.
ಅನನ್ಯಾ ಯಾವಾಗಲೂ ಮೃದು ಭಾವನೆಯನ್ನು ಹೊಂದಿದ್ದಾರೆ. ನನಗೆ ಆಕೆಯ ಮೇಲೆ ಯಾವಾಗಲೂ ಒಂದು ಮೃದುತ್ವವಿತ್ತು. ಅವಳೂ ಕೂಡ ನನ್ನ ಮೇಲೆ ಆ ಭಾವನೆಯನ್ನೇ ಹೊಂದಿದ್ದಾಳೆ. ನಾವಿಬ್ಬರು ಪರಸ್ಪರ ಒಳ್ಳೆಯ ಮನೋಭಾವವನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
'ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ' ಚಿತ್ರಕ್ಕೆ ಹಿಂತಿರುಗಿ ನೋಡುವುದಾದರೆ , ಈ ಚಿತ್ರವು ಬಲವಾದ ನಿರ್ಮಾಣ ತಂಡವನ್ನು ಹೊಂದಿದೆ. ಈ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ ಕರಣ್ ಜೋಹರ್, ಆದರ್ ಪೂನಾವಲ್ಲ, ಅಪೂರ್ವ ಮೆಹ್ತಾ ಮತ್ತು ಭೂಮಿಕಾ ತಿವಾರಿ, ನಮಹ್ ಪಿಕ್ಚರ್ಸ್‌ನ ಶರೀನ್ ಮಂತ್ರಿ ಕೆಡಿಯಾ ಮತ್ತು ಕಿಶೋರ್ ಅರೋರಾ ಅವರೊಂದಿಗೆ ನಿರ್ಮಾಣ ಮಾಡಿದ್ದಾರೆ (ಏಜೆನ್ಸೀಸ್​).