ಸಿನಿವಾಣಿ

ಅಪ್ಪು ಪರವಾಗಿ ಕರ್ನಾಟಕ ರತ್ನ ಸ್ವೀಕರಿಸಿದ ಅಶ್ವಿನಿ: ವರುಣ ಸಿಂಚನದ ನಡುವೆ ಪ್ರಶಸ್ತಿ ಪ್ರದಾನ

ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಘೋಷಿಸಲಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಇಂದು ವಿಧಾನಸೌಧದ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು. ಪುನೀತ್​​ಗೆ ಮರಣೋತ್ತರವಾಗಿ ನೀಡಲಾದ ಈ ಪ್ರಶಸ್ತಿಯನ್ನು ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಸ್ವೀಕರಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೂಪರ್​ ಸ್ಟಾರ್​ ರಜನಿಕಾಂತ್, ಜೂ.ಎನ್​ಟಿಆರ್ ಅವರು ಜೊತೆಯಾಗಿ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಂತೆ ಅದೇ ಸಮಯದಲ್ಲಿ ವರುಣ ಸಿಂಚನವಾಯಿತು. ಈ ಸಂದರ್ಭದಲ್ಲಿ ಅಭಿಮಾನಿಗಳಿಂದಲೂ ಹರ್ಷೋದ್ಗಾರ ಹೊರಹೊಮ್ಮಿತು. ಮಳೆಯ ನಡುವೆಯೇ ಪ್ರಶಸ್ತಿ ಪ್ರದಾನ ನೆರವೇರಿತು.