ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾಗಿ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡ ‘ಇರುವುದೆಲ್ಲವ ಬಿಟ್ಟು’ ಸಿನಿಮಾದ ನಿರ್ದೇಶಕ ಕಾಂತಾ ಕನ್ನಲಿ ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದು ಅದಕ್ಕೆ ಚಿರಂಜೀವಿ ಸರ್ಜಾ ನಾಯಕರಾಗಿದ್ದಾರೆ.
‘ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಕಮರ್ಷಿಯಲ್ ಎಲಿಮೆಂಟ್ಸ್ ಜತೆಗೆ ಸಿನಿಮಾದಲ್ಲಿ ಒಳ್ಳೆ ಮೆಸೆಜ್ ಕೂಡ ಇದೆ. ಚಿರಂಜೀವಿ ಸರ್ಜಾ ಅವರಿಗೆ ಕಮರ್ಷಿಯಲ್ ಫ್ಯಾನ್ಸ್ ಜಾಸ್ತಿ , ಹಾಗಾಗಿ ನನಗೂ ಇದು ಚಾಲೆಂಜಿಂಗ್ ಆಗಿರುತ್ತದೆ. ಚಿರು ಅವರ ಇದುವರೆಗಿನ ಸಿನಿಮಾಗಳಿಗೂ ಇದಕ್ಕೂ ಸಾಕಷ್ಟು ವ್ಯತ್ಯಾಸವಿದೆ.
ನಂಬಿಕೆ ಮತ್ತು ಪ್ರೀತಿಯ ನಡುವೆ ಈ ಕಥೆ ಟ್ರಾವೆಲ್ ಆಗುತ್ತದೆ. ‘ಇರುವುದೆಲ್ಲವ ಬಿಟ್ಟು’ ಚಿತ್ರವನ್ನು ಮೆಚ್ಚಿಕೊಂಡವರಿಗೆ ಇದು ಖಂಡಿತ ಇಷ್ಟವಾಗುತ್ತದೆ’ ಎನ್ನುತ್ತಾರೆ ಕಾಂತ ಕನ್ನಲಿ. ಚಿರಂಜೀವಿ ಸರ್ಜಾ ಸದ್ಯ ಏಪ್ರಿಲ್ ಸೇರಿದಂತೆ ಹೊಸ ರೀತಿಯ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನು ಕಾಂತಾ ಕನ್ನಲಿ ಚಿತ್ರವೂ ಆ ಸಾಲಿಗೆ ಸೇರಿಕೊಂಡಿದೆ. 2020ರಲ್ಲಿ ಅವರ ಮೂರ್ನಾಲ್ಕು ಸಿನಿಮಾಗಳು ತೆರೆಗೆ ಬರುತ್ತವೆ.