ಕೋವಿಡ್ ಹಿನ್ನೆಲೆಯಲ್ಲಿ ನಟಿ ಸಂಜನಾ ಆನಂದ್ ಮನೆಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ಡಾನ್ಸ್ ಸೇರಿ ಹಲವು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಅವರು, ಕೋವಿಡ್ ಕಷ್ಟಕಾಲದಲ್ಲಿ ಸಣ್ಣಪುಟ್ಟ ಸಹಾಯದಲ್ಲಿ ನಿರತ ರಾಗಿದ್ದಾರೆ. ಈ ಬಗ್ಗೆ ಹೇಳಿಕೊಳ್ಳುವ ಅವರು, ‘ಕರೊನಾ ಇರುವುದರಿಂದ ನಾನು ಮನೆಯಿಂದ ಹೊರಬಂದಿಲ್ಲ. ಆದರೆ, ನಾನಿದ್ದಲ್ಲಿಂದಲೇ ಕೈಲಾದ ಸಹಾಯ ಮಾಡುತ್ತಿದ್ದೇನೆ. ನಮ್ಮ ಅಪಾರ್ಟ್ವೆುಂಟ್ನಲ್ಲಿನ ಕೆಲವರಿಗೆ ಸಹಾಯ ಮಾಡಿದ್ದೇನೆ. ಅದನ್ನು ಹೇಳಿಕೊಳ್ಳುವುದೂ ಸಮಂಜಸವಲ್ಲ. ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿರುವುದರಿಂದ ಸ್ನೇಹಿತರ, ಆಪ್ತರ ಸಮಸ್ಯೆಗಳನ್ನು ಸ್ಟೇಟಸ್ ಹಾಕಿಕೊಂಡಿದ್ದೆ. ಬೆಡ್, ಔಷಧ ಅವಶ್ಯಕತೆ ಇದೆ ಎಂದು ಶೇರ್ ಮಾಡಿಕೊಂಡಿದ್ದೆ. ಕೆಲವರಿಗೆ ಅದರ ಉಪ ಯೋಗವಾಗಿದೆ’ ಎನ್ನುತ್ತಾರೆ ಸಂಜನಾ.
ಇತ್ತೀಚೆಗಷ್ಟೇ ಪ್ಲಾಸ್ಮಾ ದಾನ ಮಾಡಿ ಇತರರಿಗೂ ಮಾದರಿಯಾಗಿದ್ದ ನಟಿ ಕಾವ್ಯಾ ಶಾಸ್ತ್ರಿ, ಕರೊನಾ ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿ ಕೂರದೆ, ಕೈಲಾದ ಒಂದಷ್ಟು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಪೈಕಿ ಹೇಳುವುದಾದರೆ, ರಾಜಧಾನಿಯ ಹಲವು ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿದ್ದಾರೆ. ಕೊಳಗೇರಿ ಪ್ರದೇಶದಲ್ಲಿ ವಾಸಿಸುವವರಿಗೂ ತಮ್ಮ ಕಾರ್ನಲ್ಲಿಯೇ ಕಿಟ್ ಕೊಂಡೊಯ್ದು ಹಂಚುತ್ತಿದ್ದಾರೆ. ‘ಕರೊನಾ ಕಷ್ಟ ಕಾಲದಲ್ಲಿ ಸಾಕಷ್ಟು ಜನ ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸುವ ಮೂಲಕ ನನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ’ ಎನ್ನುತ್ತಾರವರು.
‘ಕಿಸ್’ ಬೆಡಗಿ ಶ್ರೀಲೀಲಾ ನಟ ನೆಯ ಜತೆಗೆ ಆನ್ಲೈನ್ನಲ್ಲಿಯೇ ಓದು ಮುಂದುವರಿಸಿದ್ದಾರೆ. ಇದೆಲ್ಲದರ ನಡುವೆ ತೆರೆಮರೆಯಲ್ಲಿ ಕರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗೂ ಶ್ರೀಲೀಲಾ ಸ್ಪಂದಿಸುತ್ತಿದ್ದಾರೆ. ‘ನನ್ನ ಹೆಸರಿನ ಲೀಲಾ ಟ್ರಸ್ಟ್ ಮೂಲಕ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಅದರಿಂದ ಪ್ರಚಾರ ಪಡೆಯಬೇಕೆಂಬ ಉದ್ದೇಶ ನನಗಿಲ್ಲ. ಹಾಗಾಗಿ ಆ ಕೆಲಸ ಗೌಪ್ಯವಾಗಿಯೇ ನಡೆಯುತ್ತಿತ್ತು. ಕೊಳಚೆ ಪ್ರದೇಶದ ಜನರಿಗೆ ಆಹಾರದ ಕಿಟ್ಗಳನ್ನು ನೀಡಿದ್ದೇನೆ. ಮಳೆಗಾಲ ಶುರುವಾದ ಹಿನ್ನೆಲೆಯಲ್ಲಿ ಒಂದಷ್ಟು ಜನರಿಗೆ ಮನೆಗಳನ್ನೂ ನಿರ್ವಿುಸಿಕೊಟ್ಟಿದ್ದೇನೆ. ಮುಂದೆಯೂ ಆ ಕೆಲಸ ಚಾಲ್ತಿಯಲ್ಲಿರ ಲಿದೆ’ ಎಂಬುದು ಶ್ರೀಲೀಲಾ ಮಾತು.