Ayogya 2 Sathish Ninasam 
ಸಿನಿವಾಣಿ

'ಸಿನಿಮಾ ಬಗ್ಗೆ ಶಿಕ್ಷಣ ಪಡೆಯಿರಿ ಅಂದಿದ್ದು ಈ ಅರ್ಥದಲ್ಲಿ..'; ನಿರ್ಮಾಪಕರ ಬಳಿ ಕ್ಷಮೆಯಾಚಿಸಿದ ಸತೀಶ್ ನೀನಾಸಂ..Ayogya 2

ಪ್ರಮುಖ ಮುಖ್ಯಾಂಶಗಳು

  • ನಂಬಿಕೆ ಇಲ್ಲದಿದ್ದರೆ ಸಿನಿಮಾ ಯಾಕೆ ಮಾಡುತ್ತೀರ ಎಂದು ನಿರ್ಮಾಪಕರನ್ನು ಪ್ರಶ್ನಿಸಿದ್ದ ನೀನಾಸಂ ಸತೀಶ್​
  • ಮಾತಿನ ಭರದಲ್ಲಿ ಶಿಕ್ಷಣ ಎಂದು ಬಿಟ್ಟೆ ಕ್ಷಮಿಸಿ..ನಿಮ್ಮ ಅಗತ್ಯವಿದೆ ಎಂದು ನೀನಾಸಂ ಸತೀಶ್
  • ಸಿನಿಮಾ ಮಾಡುತ್ತಾ ಕಲಿಯುವುದು ಶಿಕ್ಷಣ ಎಂದೆ ಮತ್ತೇನು ಅಲ್ಲ ಎಂದು ಪೋಸ್ಟ್
Ayogya 2 Sathish Ninasam: 'ನಿರ್ಮಾಪಕರು ಒಂದು ಸಿನಿಮಾ ಮಾಡಿ ಅಷ್ಟು ಹಣ ವೆಚ್ಚವಾಯ್ತು. ಇಷ್ಟು ಹೋಯ್ತು ಅಂತ ಹೇಳಿಕೊಂಡರೆ ಹೇಗೆ. ನಿಮಗೆ ನಂಬಿಕೆ ಇಲ್ಲದಿದ್ದರೆ ಸಿನಿಮಾ ಯಾಕೆ ಮಾಡುತ್ತೀರ' ಎಂದು ಅಯೋಗ್ಯ 2 ಸಿನಿಮಾದ ಹಾಡು ರಿಲೀಸ್​ ವೇಳೆ ಮಾತನಾಡಿ ಸತೀಶ್​ ನೀನಾಸಂ ವಿವಾದದ ಸುಳಿಗೆ ಸಿಲುಕಿದ್ದರು. ಸದ್ಯ ಆ ಬಗ್ಗೆ ಸ್ಪಷ್ಟನೆ ಕೊಟ್ಟು ವಿಡಿಯೋವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ರಿಲೀಸ್ ಮಾಡಿದ್ದಾರೆ.

ಸತೀಶ್​ ಕ್ಷಮೆ ಕೇಳಿದ್ದು ಹೀಗೆ

ಅಯೋಗ್ಯ-2 ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಅಪಾರ್ಥಗಳಿಗೆ ನನ್ನ ಕ್ಲಾರಿಟಿ ವಿಡಿಯೋ ಎಂದು ಶೀರ್ಷಿಕೆ ಕೊಟ್ಟುಕೊಂಡಿದ್ದಾರೆ. 'ಕಾರ್ಯಕ್ರಮದಲ್ಲಿ ಕೆಲವು ಪದ ಬಳಕೆ ಮಾಡಿದ್ದಕ್ಕೆ ಕ್ಷಮೆ ಇರಲಿ. ಇದು ಕೆಲವರಿಗೆ ನೋವಾಗಿರಬಹುದು. ಅದರಲ್ಲೂ ನಿರ್ಮಾಪಕರಲ್ಲಿ ಕ್ಷಮೆ ಕೋರುತ್ತೇನೆ ಎಂದು ಮನವಿ ಮಾಡಿಕೊಂಡರು.
ನಾನು ಬಳಸಿದ ಪದ ಶಿಕ್ಷಣ ಎಂದರೆ ಸಿನಿಮಾ ಮಾಡುತ್ತಾ ಕಲಿಯುವ ಬಗ್ಗೆ ಹೇಳಿದ್ದು' ಎಂದರು.
ಮುಂದುವರೆದು, 'ನಾನು ಸಹ ನಿರ್ಮಾಪಕನಾಗಿ ಕೈ ಸುಟ್ಟುಕೊಂಡ ಅನುಭವಿಸಿದ ಬಗ್ಗೆ ಪಾಠ ಕಲಿತಿದ್ದೇನೆ. ಅದರಲ್ಲೂ ಹೊಸದಾಗಿ ಸಿನಿಮಾ ಇಂಡಸ್ಟ್ರಿಗೆ ಬರುವ ನಿರ್ಮಾಪಕರು ಯಾವ ವಲಯದಲ್ಲಿ ಹಣ ಹೆಚ್ಚು ವೆಚ್ಚವಾಗಿತ್ತಿದೆ. ಕಡಿಮೆ ಹಣ ಸೋರಿಕೆಯಾಗುತ್ತಿರೋದು ಎಲ್ಲಿ ಎನ್ನುವ ಬಗ್ಗೆ ಹಾಗೂ ವಿವಿಧ ಕ್ಷೇತ್ರದ ಬಗ್ಗೆ ಮಾಹಿತಿ ತಿಳಿದುಕೊಂಡಿರಬೇಕು' ಎಂದು ಹೇಳಿದ್ದಷ್ಟೆ.
'ನನ್ನಿಂದ ನೋವಾಗಿದ್ದರೆ ಕ್ಷಮೆ ಇರಲಿ. ಯಾರಿಗೂ ನೋಯಿಸಿ ಖುಷಿ ಪಡುವ ವ್ಯಕ್ತಿ ನಾನಲ್ಲ. ಇನ್ನು ಸಾಕಷ್ಟು ಸಿನಿಮಾ ಮಾಡುವ ಕನಸು ಹೊತ್ತಿದ್ದೇನೆ. ನಾನು ಸಿನಿಮಾ ಮಾಡುತ್ತಾ ಹಲವು ವಿಚಾರಗಳನ್ನು ಕಲಿಯುತ್ತಿದ್ದೇನೆ. ಮಾತಿನ ಭರದಲ್ಲಿ ಕೆಲವು ಪದಗಳು ಬಂದಿವೆ, ಸಿನಿಮಾಗೆ ನಿರ್ಮಾಪಕರ ಅಗತ್ಯ ಬಹಳ ಇದೆ. ಇದನ್ನು ಇಲ್ಲಿಗೆ ಬಿಟ್ಟು ಮುನ್ನಡೆಯೋಣ. ಅಯೋಗ್ಯ-2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಿಮ್ಮೆಲ್ಲರ ಆಶೀರ್ವಾದ ಅಗತ್ಯವಿದೆ' ಎಂದು ಹೇಳಿಕೊಂಡಿದ್ದಾರೆ.

ನಿರ್ಮಾಪಕರ ಬಗ್ಗೆ ನೀನಾಸಂ ಸತೀಶ್ ಹೇಳಿದ್ದೇನು?

ಕನ್ನಡ ಸಿನಿಮಾ ರಂಗ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ಕೊಟ್ಟಿದೆ. ಅಣ್ಣಾವ್ರಂತ ಮಹಾನಟರು ಇಲ್ಲಿನವರೇ ಅಲ್ಲವೇ. ಆದರೆ ನಿರ್ಮಾಪಕರು ಒಂದು ಸಿನಿಮಾ ಮಾಡಿ ಅಷ್ಟು ಖರ್ಚಾಯ್ತು, ಇಷ್ಟು ಹಣ ಹೋಯ್ತು ಎಂದು ಹೇಳಿಕೊಂಡರೆ ಹೇಗೆ?. ನೀವು ಹೇಳಿಕೊಂಡರೆ ನಿಮಗೆ ನಂಬಿಕೆ ಇಲ್ಲದಿದ್ದರೆ ಸಿನಿಮಾ ಯಾಕೆ ಮಾಡ್ತೀರಾ. ಸಿನಿಮಾ ಬಗ್ಗೆ ಸ್ಟಡಿ ಮಾಡಿ. ಸರಿಯಾದ ಶಿಕ್ಷಣ ಪಡೆದುಕೊಳ್ಳಿ. ಸಿನಿಮಾದಲ್ಲಿ ಕೆಲಸ ಮಾಡಿ ಆನಂತರ ಸಿನಿಮಾಕ್ಕೆ ಬನ್ನಿ ಎಂದಿದ್ದರು. ಈ ವಿಚಾರದ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದ ನಂತರ ಸ್ಪಷ್ಟನೆಯ ವಿಡಿಯೋವನ್ನು ಸತೀಶ್​ ನೀನಾಸಂ ಅವರು ಹರಿಬಿಟ್ಟಿದ್ದಾರೆ, (ಏಜೆನ್ಸೀಸ್).