ನೈಜ ಟನೆಯಾಧಾರಿತ ಚಿತ್ರಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ನೈಜ ಟನೆಗಳಿಂದ, ವ್ಯಕ್ತಿಗಳ ಜೀವನದಿಂದ ಆಧರಿಸಿದ ಅಥವಾ ಪ್ರೇರಣೆ ಪಡೆದ ಸಿನಿಮಾಗಳ ಸಂಖ್ಯೆ ಹೆಚ್ಚಿದೆ. 2025ರಲ್ಲಿಯೇ ಇದುವರೆಗೆ "ಛಾವಾ', "ಸ್ಕೈಫೋ ರ್ಸ್', "ದ ಡಿಪ್ಲೊಮ್ಯಾಟ್', "ಎಮರ್ಜೆನ್ಸಿ', "ಸೂಪರ್ಬಾಯ್ಸ್ ಆಫ್ ಮಾಲೆಗಾಂವ್' ಚಿತ್ರಗಳು ರಿಲೀಸ್ ಆಗಿದ್ದು, "ಫುಲೆ', "ಕೇಸರಿ 2' ಸೇರಿ ಹಲವು ಸಿನಿಮಾಗಳು ತೆರೆಗೆ ಬರಲು ಸಿದ್ಧತೆ ನಡೆಸಿವೆ.
ಇದೀಗ ಈ ಈ ಸಾಲಿಗೆ ಮತ್ತೊಂದು ಸಿನಿಮಾ "ಜ್ಞಾನವಾಪಿ ಫೈಲ್ಸ್: ಎ ಟೈಲರ್ಸ್ ಮರ್ಡರ್ ಸ್ಟೋರಿ' ಕೂಡ ಸೇರಿದ್ದು, ಇದೇ ಜೂ. 27ರಂದು ದೇಶಾದ್ಯಂತ ರಿಲೀಸ್ ಆಗಲಿದೆ. 2022ರ ಜೂ. 28ರಂದು ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಸಾಹುನನ್ನು ಇಬ್ಬರು ಧರ್ಮಾಂಧರು ಕೊಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕಿ ನೂಪರ್ ಶರ್ಮಾ ಪರ ಕಮೆಂಟ್ ಮಾಡಿದ್ದೇ ಕನ್ಹಯ್ಯಾ ಲಾಲ್ ಜೀವನಕ್ಕೆ ಮುಳುವಾಗಿತ್ತು. ಕನ್ಹಯ್ಯಾ ಹತ್ಯೆ ಮಾಡಿದ್ದ ಮೊಹಮ್ಮದ್ ರಿಯಾಜ್ ಅಟ್ಟಾರಿ ಮತ್ತು ಮೊಹಮ್ಮದ್ ಘೌಸ್ರನ್ನು ಬಂಧಿಸಲಾಯಿತಾದರೂ, ದೇಶಾದ್ಯಂತ ಈ ಪ್ರಕರಣ ಆತಂಕ ಸೃಷ್ಟಿಸಿತ್ತು.
ಭರತ್ ಶ್ರೀನಾತೆ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಕನ್ಹಯ್ಯಾ ಪಾತ್ರದಲ್ಲಿ ಬಾಲಿವುಡ್ನ ಖ್ಯಾತ ನಟ ವಿಜಯ್ ರಾಜ್ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ರಜನೀಶ್ ದುಗ್ಗಲ್, ಪ್ರೀತಿ ಝಂಗಿಯಾನಿ, ಆದಿತ್ಯ ರಾವ್ ತಾರಾಗಣದಲ್ಲಿದ್ದಾರೆ.