ಸಿನಿವಾಣಿ

ಎಲ್ಲಿ ನನ್ನ ಚಪ್ಪಲ್?; ಯಾಮಿಗೆ ಕಾಲೆಳೆದವರಿಗೆ ಕಂಗನಾ ತರಾಟೆ

Webdesk - Ravikanth

ಜನಪ್ರಿಯ ಮಾಡಲ್ ಮತ್ತು ನಟಿ ಯಾಮಿ ಗೌತಮ್ ಇತ್ತೀಚೆಗಷ್ಟೇ ನಿರ್ದೇಶಕ ಆದಿತ್ಯ ಧರ್ ಅವರನ್ನು ಮದುವೆಯಾಗಿದ್ದು, ಮದುವೆ ಮತ್ತು ಇತರೆ ಶಾಸ್ತ್ರಗಳ ಹಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋಗಳನ್ನು ಮುಂದಿಟ್ಟುಕೊಂಡು ಯಾಮಿಗೆ ಕಾಲೆಳೆಯುತ್ತಿರುವವರಿಗೆ ಕಂಗನಾ ರಣಾವತ್ ತರಾಟೆ ತೆಗೆದುಕೊಂಡಿದ್ದಾರೆ. ಭಾನುವಾರ, ಯಾಮಿ ತಮ್ಮ ಹಳದಿ ಕಾರ್ಯಕ್ರಮದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ, ‘ಬೆಟ್ಟದ ಹುಡುಗಿ’ ಮದುವೆಯಾಗುವುದನ್ನು ನೋಡುವುದೇ ಚಂದ ಎಂದು ಹೇಳಿದ್ದರು. ಕಂಗನಾ ಮತ್ತು ಯಾಮಿ ಇಬ್ಬರೂ ಹಿಮಾಚಲ ಪ್ರದೇಶದವರಾಗಿದ್ದು, ಅದೇ ಸಲುಗೆಯಿಂದ ಯಾಮಿಗೆ ‘ಬೆಟ್ಟದ ಹುಡುಗಿ’ ಎಂದು ಕರೆದಿದ್ದರು. ಯಾಮಿಯ ಸಹನಟರಾದ ಆಯುಷ್ಮಾನ್ ಖುರಾನಾ ಮತ್ತು ವಿಕ್ರಾಂತ್ ಮಸ್ಸೇ ಸಹ ಈ ಫೋಟೋಗಳಿಗೆ ಕಾಮೆಂಟ್ ಮಾಡಿದ್ದರು. ಈ ಪೈಕಿ ವಿಕ್ರಾಂತ್ ಅವರ ಕಾಮೆಂಟ್, ಕಂಗನಾ ಅವರನ್ನು ಕೆರಳಿಸಿದೆ. ‘ಯಾನಾ, ಈ ಫೋಟೋಗಳಲ್ಲಿ ದೇವಿ ಮಾ ತರಹ ಕಾಣುತ್ತಾರೆ’ ಎಂದು ಪ್ರತಿಕ್ರಿಯಿಸದ್ದರು.

ಇದಕ್ಕೆ ಉತ್ತರ ಕೊಟ್ಟಿರುವ ಕಂಗನಾ, ‘ಎಲ್ಲಿಂದ ಬಂತು ಈ ಜಿರಲೆ? ಎಲ್ಲಿ ನನ್ನ ಚಪ್ಪಲ್?’ ಎಂದು ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಪರೋಕ್ಷವಾಗಿ ವಿಕ್ರಾಂತ್​ಗೆ ಹೊಡೆಯುವುದಾಗಿ ಹೇಳಿದ್ದಾರೆ. ಇದು ಸಹಜವಾಗಿ ವಿಕ್ರಾಂತ್ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಯಾಮಿ ಮತ್ತು ವಿಕ್ರಾಂತ್ ಒಳ್ಳೆಯ ಗೆಳೆಯ ರಾದ್ದರಿಂದ, ಪರಸ್ಪರ ಕಾಲೆಳೆದುಕೊಂಡರೆ, ಕಂಗನಾಗೆ ಯಾಕೆ ಸಿಟ್ಟು ಎಂದು ಹಲವರು ಪ್ರಶ್ನಿಸಿದ್ದಾರೆ. ಇನ್ನು, ಕಂಗನಾಗೆ ಕಾಲು ಕೆರೆದುಕೊಂಡು ಹೋಗಿ ಜಗಳ ಮಾಡುವುದು ಅಭ್ಯಾಸವಾಗಿದೆ ಎಂದು ಹಲವರು ಹೇಳಿದ್ದಾರೆ.