ಸಿನಿವಾಣಿ

ನನ್ನ ಕನಸು ನಾಶ ಮಾಡೋಕೆ ಹೊರಟಿದ್ದಾರೆ ... ಕಂಗನಾ ಹೀಗೆ ಹೇಳಿದ್ದ್ಯಾಕೆ?

ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೊಡೆತಟ್ಟಿ ನಿಂತಿರುವ ಕಂಗನಾ ರಣಾವತ್​ಗೆ ಇದೀಗ ಸಂಕಷ್ಟ ಎದುರಾಗಿದೆ. ಸೋಮವಾರ ಸಂಜೆ ಬೃಹತ್​ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು, ಕಂಗನಾ ಅವರ ಕಚೇರಿಗೆ ಭೇಟಿ ನೀಡಿದ್ದು, ಆ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸೀಲ್​ ಮಾಡಿಕೊಂಡಿದ್ದಾರೆ.

ಬಾಂದರಾದ ಪಾಲಿ ಹಿಲ್​ನಲ್ಲಿ ಕಂಗನಾ ಒಂದು ಹೊಸ ಆಫೀಸ್​ ಶುರು ಮಾಡಿದ್ದಾರೆ. ಆ ಆಫೀಸ್​ನ ಇಂಟೀರಿಯರ್​ಗಾಗಿಯೇ ಲಕ್ಷಲಕ್ಷ ಖರ್ಚು ಮಾಡಿದ್ದಾಗಿ ಕಂಗನಾ ಕೆಲವು ತಿಂಗಳುಗಳು ಹೇಳಿದ್ದರು. ಈಗ ಬೃಹತ್​ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಆ ಕಚೇರಿಗೆ ಭೇಟಿ ಕೊಟ್ಟು, ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಅದನ್ನು ಅತಿಕ್ರಮವಾಗಿ ನಿರ್ಮಿಸಲಾಗಿದೆ ಎಂದು ನೋಟೀಸ್​ ಅಂಟಿಸಿ ಬಂದಿದ್ದಾರೆ.

ಈ ನೋಟೀಸ್​ನಲ್ಲಿ ಹೇಗೆ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ನಮೂದಿಸಲಾಗಿದೆ. ಅಷ್ಟೇ ಅಲ್ಲ, 24 ಗಂಟೆಗಳಲ್ಲಿ ಈ ನೋಟೀಸ್​ಗೆ ಕಂಗನಾ ಅವರು 24 ಗಂಟೆಗಳಲ್ಲಿ ಉತ್ತರ ಕೊಡೆದಿದ್ದ ಪಕ್ಷದಲ್ಲಿ, ಅತಿಕ್ರಮವಾಗಿ ನಿರ್ಮಿಸಲಾದ ಭಾಗವನ್ನು ಒಡೆಯುವುದಾಗಿ ಈ ನೋಟೀಸ್​ನಲ್ಲಿ ಹೇಳಲಾಗಿದೆ.

ಬೃಹತ್​ ಮುಂಬೈ ಮಹಾನಗರ ಪಾಲಿಕೆಯ ಈ ನಿರ್ಣಯವನ್ನು ಖಂಡಿಸಿರುವ ಕಂಗನಾ, ತಮ್ಮ ಟ್ವಿಟರ್​ ಅಕೌಂಟ್​ ಮೂಲಕ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಮುಂಬೈ ಆಫೀಸ್​ ತೋರಿಸಿರುವ ಅವರು, ತಮ್ಮ ಕನಸೊಂದನ್ನು ಅಧಿಕಾರಿಗಳು ನುಚ್ಚುನೂರು ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.

'ಇದು ನನ್ನ 'ಮಣಿಕರ್ಣಿಕಾ' ಆಫೀಸ್​. ಈ ಆಫೀಸ್ ಸ್ಥಾಪಿಸುವುದಕ್ಕೆ ನನ್ನ 15 ವರ್ಷಗಳ ಪರಿಶ್ರಮವಿದೆ. ನನ್ನದೇ ಸ್ವಂತದ್ದೊಂದು ಆಫೀಸ್​ ಮಾಡಿಕೊಳ್ಳಬೇಕೆಂಬ ಕನಸು ಬಹಳ ವರ್ಷಗಳಿಂದ ಇತ್ತು. ಆ ಕನಸನ್ನು ನುಚ್ಚುನೂರು ಮಾಡಲಾಗುತ್ತಿದೆ' ಎಂದು ಅವರು ಹೇಳಿದ್ದಾರೆ.

ತಮ್ಮ ಬಳಿ ಎಲ್ಲದಕ್ಕೂ ಬೃಹತ್​ ಮುಂಬೈ ಮಹಾನಗರ ಪಾಲಿಕೆ ಅನುಮತಿ ಇದೆ ಎಂದಿರುವ ಅವರು, 'ನಾನು ಯಾವುದೇ ಅತಿಕ್ರಮ ನಿರ್ಮಾಣ ಮಾಡಿಲ್ಲ. ಪಾಲಿಕೆಯ ಅನುಮತಿ ಪಡೆದೇ ಕಚೇರಿ ನಿರ್ಮಿಸಿದ್ದೇನೆ. ಆದರೂ ಇಂದು ಅವರು ನನ್ನ ಕಚೇರಿಗೆ ರೇಡ್​ ಮಾಡಿದ್ದಾರೆ. ನಾಳೆ ನನ್ನ ಕನಸಿನ ಕಚೇರಿ ಒಡೆದರೂ ಆಶ್ಚರ್ಯವಿಲ್ಲ' ಎಂದು ಭೀತಿ ವ್ಯಕ್ತಪಡಿಸಿದ್ದಾರೆ ಕಂಗನಾ.