ಸಿನಿವಾಣಿ

ಬಾಲಿವುಡ್​ನವರಿಗೆ ಹೀರೋಯಿನ್​, ಬೀಚ್​ ಬಿಟ್ರೆ ಬೇರೆ ಗೊತ್ತಿಲ್ಲ! ಪುಷ್ಪ-2 ಹೆಸರೇಳಿ ಕಂಗನಾ ಟಾಂಗ್​! Kangana Ranaut

Kangana Ranaut : ಇತ್ತೀಚೆಗೆ ದೇಶಾದ್ಯಂತ ಸದ್ದು ಮಾಡಿದ ಚಿತ್ರವೆಂದರೆ ಅದು ಪುಷ್ಪ 2. ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೃಷ್ಟಿಸಿದ ಸಂಚಲನದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಇದು ಬಾಲಿವುಡ್ ಚಿತ್ರಗಳ ದಾಖಲೆಗಳನ್ನು ಮುರಿದಿದೆ. ಖಾನ್‌ಗಳು ಮತ್ತು ಕಪೂರ್‌ಗಳ ಸಿನಿಮಾ ದಾಖಲೆಗಳನ್ನು ಹಿಂದಿಕ್ಕಿದೆ. ದಂಗಲ್ ಸಿನಿಮಾದ 2000 ಕೋಟಿ ರೂ. ದಾಖಲೆಯನ್ನು ಸಹ ಮುರಿಯಲಿದೆ ಎಂಬ ನಿರೀಕ್ಷೆಗಳಿವೆ. ಇನ್ನು ಮೂರು ವಾರಗಳ ಕಾಲ ಸಿನಿಮಾ ಇದೇ ರೀತಿ ರನ್​ ಆದರೆ ದಂಗಲ್ ಹಿಂದಿಕ್ಕುವ ನಿರೀಕ್ಷೆ ಇದೆ.

ಪುಷ್ಪ 2 ಸಿನಿಮಾದ ಯಶಸ್ಸು ಬಾಲಿವುಡ್​ ಮಂದಿಯ ಕಣ್ಣು ಕುಕ್ಕಿದೆಯೇ? ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಏಕೆಂದರೆ, ಈ ಚಿತ್ರಕ್ಕೆ ಸಿಗಬೇಕಾದ ಚಪ್ಪಾಳೆ ಸಿಗುತ್ತಿಲ್ಲ ಮತ್ತು ಯಾರೊಬ್ಬರು ಪುಷ್ಪ 2 ಚಿತ್ರದ ಬಗ್ಗೆ ಮಾತನಾಡುತ್ತಿಲ್ಲ. ಪುಷ್ಪ ಸಿನಿಮಾದ ಕಲೆಕ್ಷನ್ ನೋಡಿ ಸ್ಟಾರ್ ಹೀರೋಗಳು ಹಾಗೂ ಟಾಪ್ ಪ್ರೊಡಕ್ಷನ್ ಹೌಸ್​ಗಳ ಕಣ್ಣು ಕೆಂಪಾಗಿಸಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ಸ್ಟಾರ್ ಹೀರೋಯಿನ್ ಕಂಗನಾ ರಣಾವತ್ ಇತ್ತೀಚೆಗೆ ಮಾಡಿರುವ ಕಾಮೆಂಟ್​ಗಳು ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಿದೆ.

ನಮ್ಮ ಬಾಲಿವುಡ್ ಮಂದಿಗೆ 'ಪುಷ್ಪ-2' ನಂತಹ ಸಿನಿಮಾ ಮಾಡಲು ಸಾಧ್ಯವಿಲ್ಲ. ಅವರಿಗೆ ಹುಡುಗಿಯರು, ನಾಯಕಿಯರು ಮತ್ತು ಬೀಚ್​ಗಳು ಮಾತ್ರ ಬೇಕು. ಅವರಿಗೆ ಬೇರೇನೂ ಬೇಕಾಗಿಲ್ಲ ಎಂದು ಕಂಗಾನಾ ಹೇಳಿದ್ದಾರೆ. ಇದೀಗ ಕಂಗನಾ ಅವರ ಈ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅಂದಹಾಗೆ ಬಾಲಿವುಡ್ ಬಗ್ಗೆ ಕಂಗನಾ ಈ ರೀತಿಯ ಕಾಮೆಂಟ್ ಮಾಡುವುದು ಹೊಸದೇನಲ್ಲ. ಈ ಹಿಂದೆಯೂ ಅವರು ಉದ್ಯಮದ ಬಗ್ಗೆ ಅಚ್ಚರಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಟಾಲಿವುಡ್ ಈಗಾಗಲೇ ಸತತ ಪ್ಯಾನ್ ಇಂಡಿಯಾ ಯಶಸ್ಸಿನೊಂದಿಗೆ ನಂಬರ್ ಒನ್ ಉದ್ಯಮವಾಗುವ ಅಂಚಿನಲ್ಲಿದೆ. ಬಾಹುಬಲಿ, ಆರ್‌ಆರ್‌ಆರ್, ಸಲಾರ್, ಪುಷ್ಪ, ಕಾರ್ತಿಕೇಯ-2 ಹಾಗೂ ಹನುಮಾನ್ ಚಿತ್ರಗಳು ಪ್ಯಾನ್ ಇಂಡಿಯಾದಾದ್ಯಂತ ಯಶಸ್ಸು ಗಳಿಸಿವೆ. (ಏಜೆನ್ಸೀಸ್​)