ಇತ್ತೀಚೆಗೆ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ನಟಿ ಕಂಗನಾ ರಣಾವತ್ ಈಗ ಅವರು ತಮ್ಮ ಮತ್ತು ಅವರ ಸಹೋದರಿ ರಂಗೋಲಿ ಚಂದೇಲ್ ಅವರ ಅಮೂಲ್ಯವಾದ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿ ಅವರ ಇನ್ಸ್ಟಾಗ್ರಾಂನಲ್ಲಿ ಒಂದಿಷ್ಟು ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದು ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದ್ದಾರೆ. ಕಂಗನಾ ಶೇರ್ ಮಾಡಿರುವ ಮೊದಲ ಫೋಟೋ 2000ನೇ ಇಸವಿಯಲ್ಲಿ ತೆಗೆದಿದ್ದು, ಅದರಲ್ಲಿ ಕಂಗನಾ ಅವರ ತಾಯಿ ಕಾಣಿಸುತ್ತಾರೆ.
ಆ ಫೋಟೋಗೆ ನಟಿ, 'ಹ ಹ...9ನೇ ತರಗತಿ ಇರಬೇಕು...2000 ವರ್ಷ' ಎಂಬ ಕ್ಯಾಪ್ಷನ್ ನೀಡಿದ್ದಾರೆ. ನಂತರ, ನಟಿ ಕಂಗನಾ ತನ್ನ ಸಹೋದರಿ ರಂಗೋಲಿಯ ಬಾಲ್ಯದ ಚಿತ್ರವನ್ನು ಹಂಚಿಕೊಂಡಿದ್ದು, ತಂಗಿಯನ್ನು ಟ್ಯಾಗ್ ಮಾಡಿದ್ದಾರೆ. ಇನ್ನು, 2 ನೇ ತರಗತಿಯಲ್ಲಿ ತನ್ನ ಆತ್ಮೀಯ ಸ್ನೇಹಿತೆಯ ಜೊತೆಗೆ ಇರುವ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. 'ಶಾಲಾ ದಿನಗಳು ... ಅದು ನಾನು ಮತ್ತು 2 ನೇ ತರಗತಿಯಲ್ಲಿ ನನ್ನ ಬೆಸ್ಟ್ ಫ್ರೆಂಡ್ ನ್ಯಾನ್ಸಿ', ಅಂತ ಈ ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಸದ್ಯ, ಕಂಗನಾ ಹಂಚಿಕೊಂಡಿರುವ ಫೋಟೋಗಳು ಇನ್ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.