- ನಟಿ ಕಂಗನಾ ರಣಾವತ್ ಸದಾ ತಮ್ಮ ನೇರ ಮಾತುಗಳು ಮತ್ತು ವಿಭಿನ್ನ ಸಿನಿಮಾಗಳ ಮೂಲಕ ಸುದ್ದಿಯಲ್ಲಿರುತ್ತಾರೆ
- ಅವರ ಬಹುನಿರೀಕ್ಷಿತ ಸಿನಿಮಾ 'ಭಾರತ್ ಭಾಗ್ಯ ವಿಧಾತ' ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ
- ಕಳೆದ ವರ್ಷ, ಪಾಡ್‌ಕ್ಯಾಸ್ಟ್‌ನಿಂದ ನಟಿಯ ಕೆಲವೊಂದು ತುಣುಕುಗಳು ವ್ಯಾಪಕವಾಗಿ ಹರಡಿದ್ದವು
- ನೀಲಿ ಸೀರೆಯ ಬಗ್ಗೆ ಇದೇನಿದು? ನಾನು ಕೂಡ ಅದರ ಬಗ್ಗೆ ಕೇಳಿದೆ" ಎಂದು ಕಾಲೆಳೆದ ಕಂಗನಾ
Kangana Ranaut: ನಟಿ ಕಂಗನಾ ರಣಾವತ್ ಸದಾ ತಮ್ಮ ನೇರ ಮಾತುಗಳು ಮತ್ತು ವಿಭಿನ್ನ ಸಿನಿಮಾಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಸದ್ಯ ಅವರ ಬಹುನಿರೀಕ್ಷಿತ ಸಿನಿಮಾ 'ಭಾರತ್ ಭಾಗ್ಯ ವಿಧಾತ' ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಈ ನಡುವೆ, ಚಿತ್ರದ ಸೆಟ್‌ನಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆ ಮತ್ತು ಅದಕ್ಕೆ ಕಂಗನಾ ನೀಡಿದ ಪ್ರತಿಕ್ರಿಯೆ ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಮುಂಬರುವ ಚಿತ್ರದ ಪ್ರಚಾರ ಸಂದರ್ಶನವೊಂದರ ಸಂಭಾಷಣೆಯಲ್ಲಿ ಗಿರಿಜಾ ಓಕ್ ಅವರ ಸಾಮಾಜಿಕ ಮಾಧ್ಯಮದ ಅನಿರೀಕ್ಷಿತ ಜನಪ್ರೀಯತೆಯ ಕಡೆಗೆ ತಿರುಗಿತು. ಕಳೆದ ವರ್ಷ, ಪಾಡ್‌ಕ್ಯಾಸ್ಟ್‌ನಿಂದ ನಟಿಯ ಕೆಲವೊಂದು ತುಣುಕುಗಳು ವ್ಯಾಪಕವಾಗಿ ಹರಡಿದ್ದವು. ಆ ವಿಡಿಯೋದಲ್ಲಿ ಅವರು ನೀಲಿ ಬಣ್ಣದ ಸೀರೆಯನ್ನು ಧರಿಸಿದ್ದರು. ಅನೇಕರು ಅವರ ಸುಂದರವಾದ ನೋಟವನ್ನು ನೋಡಿ ನ್ಯಾಷನಲ್ ಕ್ರಶ್ ಎಂದು ಬಣ್ಣಿಸಿದ್ದರು.
ಕಾರ್ಯಕ್ರಮದಲ್ಲಿ ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆ, ಕಂಗನಾ ಮುಗುಳ್ನಗುತ್ತಾ, "ನೀಲಿ ಸೀರೆಯ ಬಗ್ಗೆ ಇದೇನಿದು? ನಾನು ಕೂಡ ಅದರ ಬಗ್ಗೆ ಕೇಳಿದೆ" ಎಂದು ಗಿರಿಜಾ ಓಕ್ ಅವರ ಕಾಲೆಳೆಯುತ್ತಾ ಹೇಳಿರುವುದನ್ನು ಕೇಳಬಹುದು.
ಇದಕ್ಕೆ ಪ್ರತಿಕ್ರಿಯಿಸಿದ ನಟಿ, ನನಗೆ ದೊರೆತ ಕ್ರೆಡಿಟ್ಗಳನ್ನು ತೆಗೆದುಕೊಳ್ಳಲು ಏಕೆ ಮುಜುಗರವಾಗುತ್ತದೆ ಎಂಬುದನ್ನು ವಿವರಿಸಿದರು. ಆದಾಗ್ಯೂ, ಪಾಡ್ಕಾಸ್ಟ್ನಿಂದ ಒಂದು ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅನೇಕರು ಅದಕ್ಕೆ ಕಾಮೆಂಟ್ ಮಾಡಲು ಪ್ರಾರಂಭಿಸಿದರು. ನಿಜ ಹೇಳಬೇಕೆಂದರೆ ಅದಕ್ಕೆ ಯಾವುದೇ ನಿರ್ದಿಷ್ಟ ತರ್ಕ ಅಥವಾ ಕಾರಣವಿರಲಿಲ್ಲ.
ಬಹಳಷ್ಟು ಜನರು ನನ್ನ ಸೌಂದರ್ಯದ ಬಗ್ಗೆ ಕಾಮೆಂಟ್ ಮಾಡುತ್ತಲೇ ಇದ್ದಾರೆ. ಆದರೆ, ಅದು ನನ್ನ ವೈಯಕ್ತಿಕ ಸಾಧನೆಗಳಿಂದ ಸಿಕ್ಕಿದ್ದಲ್ಲ. ಬದಲಾಗಿ ನನ್ನ ಜೀನ್ಗಳು. ಆದರೆ, ಅದನ್ನು ನಾನು ಎಂದಿಗೂ ಕಷ್ಟಪಟ್ಟು ಸಂಪಾದಿಸಿಲ್ಲ ಅನುವಂಶೀಯತೆಯಿಂದ ಬಂದದ್ದು ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ ನೀವು ಸಿನಿಮಾದಲ್ಲಿರುವುದು ನಿಜಕ್ಕೂ ನನಗೆ ಸಂತೋಷ. ದಯವಿಟ್ಟು ಈ ಸೌಂದರ್ಯವನ್ನು ಬಳಸಿ ಚಿತ್ರ ಪ್ರಚಾರ ಮಾಡಿ ಎಂದು ನಗುತ್ತಾ ಹೇಳಿದ್ದು, ಸದ್ಯ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಭಾರತ್ ಭಾಗ್ಯ ವಿಧಾತ ಚಿತ್ರವನ್ನು ಮನೋಜ್ ತಪಾಡಿಯಾ ನಿರ್ದೇಶಿಸಿದ್ದು, ಜೂನ್ 12 ರಂದು ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಕಂಗನಾ ರನೌತ್, ಗಿರಿಜಾ ಓಕ್, ಸ್ಮಿತಾ ತಾಂಬೆ, ಇಶಾ ಡೇ, ಪ್ರಿಯಾ ಬರ್ಡೆ ಮತ್ತು ಆಶಾ ಶೆಲಾರ್ ನಟಿಸಿದ್ದಾರೆ (ಏಜೆನ್ಸೀಸ್).