ಸಿನಿವಾಣಿ

ಪೈಲಟ್ ಆದ ಕಂಗನಾ ... ಪ್ರಾರಂಭವಾಯ್ತು ತೇಜಸ್ ಚಿತ್ರೀಕರಣ

ಮುಂಬೈ: ಕಳೆದ ಕೆಲವು ತಿಂಗಳುಗಳಿಂದ ಕಂಗನಾಗೆ ಸ್ವಲ್ಪವೂ ಪುರುಸೊತ್ತಿಲ್ಲ. ಎರಡನೆಯ ಲಾಕ್‌ಡೌನ್ ಮುಗಿಯುತ್ತಿದ್ದಂತೆಯೇ ಬುಡಾಪೆಸ್ಟ್‌ಗೆ ‘ಧಾಖಡ್’ ಚಿತ್ರದ ಚಿತ್ರೀಕರಣಕ್ಕೆ ಹೊರಟಿದ್ದ ಕಂಗನಾ, ಇದೀಗ ಅಲ್ಲಿಂದ ವಾಪಸ್ಸಾಗಿದ್ದಾರೆ. ಆ ಚಿತ್ರದ ಚಿತ್ರೀಕರಣ ಮುಗಿಸಿರುವ ಅವರು, ಶನಿವಾರದಿಂದ ‘ತೇಜಸ್’ ಚಿತ್ರದ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.

ಈ ಚಿತ್ರದಲ್ಲಿ ಪೈಲಟ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು, ಚಿತ್ರೀಕರಣ ಸಮಯದಲ್ಲಿ ತೆಗೆಸಿಕೊಂಡಿರುವ ೆಟೋವೊಂದನ್ನು ಅವರು ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.

‘ನನ್ನ ಹೊಸ ಮಿಷನ್ ‘ತೇಜಸ್’ ಪ್ರಾರಂಭವಾಗಿದೆ. ಜೋಶ್ ಸಿಕ್ಕಾಪಟ್ಟೆ ಜಾಸ್ತಿ ಇದೆ ...’ ಎಂದು ಕಂಗನಾ ಬರೆದುಕೊಂಡಿದ್ದಾರೆ. ಭಾರತದ ವೀರಯೋಧರ ಕುರಿತಾದ ಈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಬಹಳ ಹೆಮ್ಮೆ ಇದೆ ಎಂದು ಹೇಳಿಕೊಂಡಿರುವ ಕಂಗನಾ, ಈ ಚಿತ್ರದಲ್ಲಿ ತಮ್ಮ ಪಾತ್ರಕ್ಕಾಗಿ ಸೂಕ್ತ ತಯಾರಿಗಳನ್ನು ಮಾಡಿಕೊಂಡು, ಹಲವು ತರಬೇತಿ ಪಡೆದು, ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದಾರಂತೆ.

ಈ ಚಿತ್ರವನ್ನು ಸರ್ವೇಶ್ ಮೆವಾರಾ ನಿರ್ದೇಶಿಸುತ್ತಿದ್ದು, ರಾನ್ನಿ ಸ್ಕ್ರೂವಾಲಾ ನಿರ್ಮಿಸುತ್ತಿದ್ದಾರೆ.