ಸಿನಿವಾಣಿ

ಟಾಲಿವುಡ್​ ಬ್ಯೂಟಿ ಕಾಜಲ್​ ಮದುವೆ ಫಿಕ್ಸ್​: ಕೊನೆಗೂ ವದಂತಿಗೆ ತೆರೆಎಳೆದ ಮಗಧೀರನ ಬೆಡಗಿ..!

ಹೈದರಾಬಾದ್: ಟಾಲಿವುಡ್​ ನಟಿ ಕಾಜಲ್​ ಅಗರ್​ವಾಲ್ ಶೀಘ್ರದಲ್ಲೇ ಹಸೆಮಣೆ ಏರಲು ತಯಾರಿ ನಡೆಸುತ್ತಿದ್ದಾರೆ. ಹೀಗಂತ ವದಂತಿಯೊಂದು ಹರಿದಾಡುತ್ತಿತ್ತು. ಉದ್ಯಮಿ, ಇಂಟಿರಿಯರ್​ ಡಿಸೈನರ್​, ಟೆಕ್​ ಮತ್ತು ವಿನ್ಯಾಸ ಉತ್ಸಾಹಿ ಗೌತಮ್​ ಕಿಟ್ಚ್ಲು ಎಂಬುವವರನ್ನು ಕಾಜಲ್​ ವರಿಸಲಿದ್ದಾರಂತೆ ಎಂದು ಹೇಳಲಾಗಿತ್ತು. ಇಲ್ಲಿಯವರೆಗೆ ವದಂತಿ ಅಂದುಕೊಂಡಿದ್ದವರಿಗೆ ಇದೀಗ ಸ್ವತಃ ಕಾಜಲ್ ಸರ್ಪ್ರೈಸ್​ ನೀಡಿದ್ದಾರೆ.​ ನಾವು ಮದುವೆಯಾಗುತ್ತಿರುವುದು ನಿಜ ಎಂದು ಖಚಿತಪಡಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ದೃಢಪಡಿಸಿದ್ದು, ಅಕ್ಟೋಬರ್​ 30ರಂದು ಮುಂಬೈನಲ್ಲಿ ಗೌತಮ್​ ಕಿಟ್ಚ್ಲು ಅವರನ್ನು ಮದುವೆಯಾಗುತ್ತಿರುವ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತಸವಾಗುತ್ತಿದೆ. ಇದೊಂದು ಖಾಸಗಿ ಸಮಾರಂಭಾಗಿದೆ. ಎರಡು ಕುಟುಂಬ ಮತ್ತು ಆಪ್ತರು ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾವಿಬ್ಬರು ಹೊಸ ಜೀವನವನ್ನು ಆರಂಭಿಸುತ್ತಿರುವ ಬಗ್ಗೆ ತುಂಬಾ ಥ್ರಿಲ್​ ಆಗಿದ್ದೇವೆ. ನೀವೆಲ್ಲರೂ ಸಹ ನಮಗೆ ಒಳ್ಳೆಯ ಮನಸ್ಸಿನಿಂದಲೇ ಹಾರೈಸುತ್ತಿರಾ ಎಂದು ತಿಳಿದಿದ್ದೇನೆ.

ಹಲವು ವರ್ಷಗಳವರೆಗೆ ನನ್ನ ಮೇಲೆ ನೀವು ತೋರಿದ ಅಭಿಮಾನಕ್ಕೆ ಧನ್ಯವಾದಗಳು. ನನ್ನ ಜೀವನದ ಹೊಸ ಪ್ರಯಾಣದಲ್ಲೂ ನಿಮ್ಮ ಆಶೀರ್ವಾದ ಎದುರು ನೋಡುತ್ತಿದ್ದೇನೆ. ನಿಮ್ಮನ್ನು ಮನರಂಜನೆ ಮಾಡುವುದನ್ನು ಸಹ ನಾನು ಮುಂದುವರಿಸುತ್ತೇನೆ. ಅಂತ್ಯವಿಲ್ಲದ ಬೆಂಬಲ ನೀಡುತ್ತಿರುವ ನಿಮಗೆ ನನ್ನ ಧನ್ಯವಾದಗಳು ಎಂದು ಕಾಜಲ್​ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಮುಂಬೈನಲ್ಲಿ ಗೌತಮ್​ ಕಿಟ್ಚ್ಲು ಅವರನ್ನು ಕಾಜಲ್​ ಮದುವೆಯಾಗುತ್ತಿದ್ದಾರೆ. ಭಾವಿ ಪತಿ ಗೌತಮ್​ರೊಂದಿಗೆ ಕಾಜಲ್​ ರಹಸ್ಯವಾಗಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆಂದು ಸುದ್ದಿ ಹರಿದಾಡಿತ್ತು. ಆದರೆ, ಮದುವೆ ಸಂಬಂಧ ಕಾಜಲ್​ ಮಾತ್ರ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿರಲಿಲ್ಲ. ನಿನ್ನೆಯಷ್ಟೇ ಇನ್​​ಸ್ಟಾಗ್ರಾಂನಲ್ಲಿ ಹೃದಯದ ಚಿತ್ರವನ್ನು ಪೋಸ್ಟ್​ ಮಾಡಿದ್ದರಷ್ಟೇ. ಇದೀಗ ಹೌದು ಎಂದು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್​)