ಚೆನ್ನೈ: ದಕ್ಷಿಣ ಭಾರತದ ಪ್ರಸಿದ್ಧ ನಟಿ ಕಾಜಲ್ ಅಗರ್ವಾಲ್ ಮಂಗಳವಾರ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಬಗ್ಗೆ ಅವರ ಸಹೋದರಿ ಟ್ವಿಟ್ಟರ್ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಬಾಲಿವುಡ್ನಲ್ಲೂ ಅಭಿನಯಿಸಿರುವ ಕಾಜಲ್ ಅಗರ್ವಾಲ್ ರಾಜಮೌಳಿ ನಿರ್ದೇಶನದ ಮಗಧೀರ ಸಿನಿಮಾ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.
ಸದ್ಯ ತಾಯಿ ಮಗು ಆರೋಗ್ಯವಾಗಿದ್ದು. ನಮಗೆ ತುಂಬಾ ಖುಷಿಯಾಗಿದೆ. ನಮ್ಮ ಮನೆಗೆ ನಮ್ಮ ಮುದ್ದಾದ ಮಗು ಬಂದಿದೆ ಎಂದು ಕಾಜಲ್ ಅವರ ತಂಗಿ ನಿಶಾ ಅಗರ್ವಾಲ್ ತಿಳಿಸಿದ್ದಾರೆ.
ಜನವರಿಯಲ್ಲಿ ತಾನು ಗರ್ಭಿಣಿ ಇರುವುದಾಗಿ ತಮ್ಮ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಕಳೆದ ವರ್ಷ ಅಕ್ಟೋಬರ್ನಲ್ಲಿ ಗೌತಮ್ ಕೀಚ್ಲು ಎಂಬುವವರ ಜತೆ ವಿವಾಹವಾಗಿದ್ದರು.