ಬೆಂಗಳೂರು: ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಿಡುಗಡೆ ಆಗುವುದು ಹೊಸದೇನಲ್ಲ. ಆದರೆ, ಇಬ್ಬರು ಸ್ಟಾರ್ ನಟಿಯರು ಕ್ಲಾಶ್ ಆಗುವುದು ಅಪರೂಪ. ಫೆಬ್ರವರಿ 12ರಂದು ಅಂಥದ್ದೊಂದು ಘಟನೆ ನಡೆಯಲಿದೆ. ಅಂದು ಕಾಜಲ್ ಅಗರ್ವಾಲ್ ಮತ್ತು ಸಮಂತಾ ಮುಖಾಮುಖಿಯಾಗುತ್ತಿರುವುದು ವಿಶೇಷ. ಅಂದು ಅವರಿಬ್ಬರ ಚಿತ್ರಗಳು ಬಿಡುಗಡೆಯಾಗುತ್ತಿರಬಹುದು ಅಂದುಕೊಂಡರೆ ಅದು ತಪು್ಪ. ಈ ಬಾರಿ ಚಿತ್ರಗಳಲ್ಲ, ಕಾಜಲ್ ಮತ್ತು ಸಮಂತಾ ಅಭಿನಯದ ವೆಬ್ಸೀರೀಸ್ಗಳು ಒಂದೇ ದಿನ ಸ್ಟ್ರೀಮ್ ಆಗಲಿವೆ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ಸರಣಿಯಲ್ಲಿ ಸಮಂತಾ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಮನೋಜ್ ಬಾಜಪೇಯಿ, ಪ್ರಿಯಮಾಣಿ ಮುಂತಾದವರು ನಟಿಸಿರುವ ಈ ವೆಬ್ಸರಣಿ ಫೆಬ್ರವರಿ 12ರಂದು ಅಮೆಜಾನ್ ಪ್ರೖೆಮ್ಲ್ಲಿ ಸ್ಟ್ರೀಮ್ ಆಗಲಿದೆ. ಇದು ಸಮಂತಾ ಅಭಿನಯದ ಮೊದಲ ವೆಬ್ಸರಣಿಯಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅದೇ ದಿನ, ಕಾಜಲ್ ಅಗರ್ವಾಲ್ ಅಭಿನಯದ ‘ಲೈವ್ ಟೆಲಿಕಾಸ್ಟ್’ ಎಂಬ ವೆಬ್ಸರಣಿ ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಿ ಪ್ರದರ್ಶನವಾಗಲಿದೆ. ತಮಿಳಿನ ಜನಪ್ರಿಯ ನಿರ್ದೇಶಕ ವೆಂಕಟ್ ಪ್ರಭು, ಈ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. ಕಾಜಲ್, ಜನಪ್ರಿಯ ಟಿವಿ ಕಾರ್ಯಕ್ರಮವೊಂದರ ನಿರ್ದೇಶಕಿಯಾಗಿ ಅಭಿನಯಿಸಿದ್ದಾರೆ. ಈ ಎರಡೂ ವೆಬ್ಸರಣಿಗಳು ಒಂದೇ ದಿನ ಬೇರೆಬೇರೆ ಓವರ್ ದಿ ಟಾಪ್ (ಓಟಿಟಿ)ಗಳಲ್ಲಿ ಸ್ಟ್ರೀಮ್ ಆಗಲಿದ್ದು, ಇಬ್ಬರಲ್ಲಿ ಯಾರಿಗೆ ಹೆಚ್ಚು ಅಂಕ ಸಿಗುತ್ತದೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.