ಸಿನಿವಾಣಿ

‘ಸ್ಟೇ ಹೋಮ್​.. ಸ್ಟೇ ಸೇಫ್’​ ಎನ್ನುತ್ತಿವೆ ಉಪೇಂದ್ರ ‘ಕಬ್ಜ’ದ ಹೊಸ ಪೋಸ್ಟರ್​ಗಳು

ಬೆಂಗಳೂರು: ಆರ್ ಚಂದ್ರು ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ‘ಕಬ್ಜ‘ ಚಿತ್ರ ಪೋಸ್ಟರ್​ ಮೂಲಕವೇ ಸದ್ದು ಮಾಡಿದ್ದು ಗೊತ್ತಿರುವ ವಿಚಾರ. ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ಉಪೇಂದ್ರ ಅವರನ್ನು ತೋರಿಸಿ ಅಭಿಮಾನಿಗಳಿಗೂ ಬಿಗ್​ ಸಪ್ರೈಸ್​ ನೀಡಿದ್ದರು ನಿರ್ದೇಶಕರು. ಇದೀಗ ಕರೊನಾ ಹೊತ್ತಲ್ಲಿ ಸ್ಟೇ ಹೋಮ್​ ಸ್ಟೇ ಸೇಫ್​ ಎಂಬ ಸಾಲುಗಳಿರುವ ಹೊಸ ಪೋಸ್ಟರ್​ ಬಿಡುಗಡೆ ಮಾಡಿದೆ ಚಿತ್ರತಂಡ. ಈ ವರೆಗಿನ ಪೋಸ್ಟರ್​ಗಳಿಗೂ ಇದೀಗ ಹೊಸದಾಗಿ ಬಿಡುಗಡೆ ಮಾಡಿರುವ ಪೋಸ್ಟರ್​ಗೂ ತುಂಬ ವ್ಯತ್ಯಾಸಗಳಿದ್ದು, ರಕ್ತಸಿಕ್ತ ಕೈಗಳನ್ನು ಮತ್ತು ಬೈಕ್​ ಏರಿ ಪೋಸ್​ ಕೊಟ್ಟಿರುವ ಎರಡು ಲುಕ್​ಗಳು ಬಿಡುಗಡೆ ಆಗಿವೆ. ಕರೊನಾದಿಂದ ಸದ್ಯ ಶೂಟಿಂಗ್​ ಸ್ಥಗಿತಗೊಂಡಿದ್ದು, ಕನ್ನಡದ ಜತೆಯಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಓರಿಯಾ ಸೇರಿ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಆರ್ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದು, ರವಿ ಬಸ್ರೂರು ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ತಾರಾಗಣದ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದ್ದು, ನಾಯಕಿ ಯಾರೆಂಬುದನ್ನು ಶೀಘ್ರದಲ್ಲಿ ಬಹಿರಂಗ ಪಡಿಸಲಿದೆಯಂತೆ ಚಿತ್ರತಂಡ.