ಸಿನಿವಾಣಿ

ರಾಕಿಂಗ್​ ಸ್ಟಾರ್​ ಯಶ್​ ಅವರ ಪುತ್ರ ಜೂನಿಯರ್ ಯಶ್ ಲುಕ್

vinaymk1969

ಬೆಂಗಳೂರು: ‘ರಾಕಿಂಗ್ ಸ್ಟಾರ್’ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮುದ್ದು ಮಗಳು ಐರಾಳನ್ನು ಈಗಾಗಲೇ ನೋಡಿದ್ದೀರಿ. ಆದರೆ, ಐರಾಳ ತಮ್ಮನ ದರ್ಶನ ಈವರೆಗೂ ಆಗಿರಲಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಚೋಟಾ ಯಶ್ ಹೇಗಿದ್ದಾನೆ? ಎಂಬ ಬಗ್ಗೆ ಕುತೂಹಲವಿತ್ತು. ಅಭಿಮಾನಿಗಳೂ ಸಹ ಕಾತರದಿಂದ ಕಾಯುತ್ತಿದ್ದರು. ಅದೆಲ್ಲದಕ್ಕೂ ಉತ್ತರ ಎಂಬಂತೆ ಗುರುವಾರ ಜೂನಿಯರ್ ಯಶ್ ಫೋಟೋ ಬಹಿರಂಗವಾಗಿದೆ. ಸ್ವತಃ ಯಶ್ ಮತ್ತು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ.

‘ನಮ್ಮ ಕುಟುಂಬದ ಕಾಮನಬಿಲ್ಲು’ ಎಂದು ಹೇಳಿಕೊಂಡಿರುವ ರಾಧಿಕಾ, ‘ನಮ್ಮ ಈ ಜೂನಿಯರ್​ಗೆ ಮಾವನ ಹೋಲಿಕೆ ಇದೆ’ ಎಂದು ಇನ್ಸಾ್ಟಗ್ರಾಂನಲ್ಲಿ ಖುಷಿಯನ್ನು ಅಕ್ಷರಕ್ಕಿಳಿಸಿದ್ದಾರೆ. ಇತ್ತ ಯಶ್, ‘ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಹಾರೈಕೆ ಸದಾ ಈ ನನ್ನ ಪುಟ್ಟ ಕಂದನ ಮೇಲಿರಲಿ’ ಎಂದಿದ್ದಾರೆ.

ಅಂದಹಾಗೆ, ಇಂದಿಗೆ ಜೂನಿಯರ್ ಯಶ್ ಹುಟ್ಟಿ ಆರು ತಿಂಗಳಾಯಿತು. ಆ ಹಿನ್ನೆಲೆಯಲ್ಲಿ ಫೋಟೋ ಅನಾವರಣಗೊಳಿಸುವ ಬಗ್ಗೆ ಬುಧವಾರವಷ್ಟೇ ರಾಧಿಕಾ ಮಾಹಿತಿ ನೀಡಿದ್ದರು. ಅದರಂತೆ ಮುದ್ದಾದ ಫೋಟೋ ಬಿಡುಗಡೆಯಾಗಿದೆ.