ಸಿನಿವಾಣಿ

ಕಾರ್ಪೊರೇಟ್ ಶಾಲೆಯಲ್ಲಿ ಓದುತ್ತಿರುವ ಜೂ. ಎನ್​ಟಿಆರ್​ ಮಕ್ಕಳ ಸ್ಕೂಲ್​ ಫೀಸ್​ ಬಗ್ಗೆ ತಿಳಿದ್ರೆ ಹುಬ್ಬೇರೋದು ಖಚಿತ!

ಹೈದರಾಬಾದ್​: ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹೀರೋ ಆಗಿ ಬಹಳ ಒಳ್ಳೆಯ ಹೆಸರು ಗಳಿಸಿದವರಲ್ಲಿ ಜೂನಿಯರ್​ ಎನ್​ಟಿಆರ್ ಕೂಡ ಒಬ್ಬರು. ಬಾಲನಟನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಎನ್​ಟಿಆರ್​ ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಕೊರಟಾಲ ಶಿವ ನಿರ್ದೇಶನದ "ದೇವರ" ಚಿತ್ರದ ಶೂಟಿಂಗ್‌ನಲ್ಲಿ ಎನ್‌ಟಿಆರ್ ಬಿಜಿಯಾಗಿದ್ದಾರೆ ಎಂದು ನಮಗೆ ತಿಳಿದಿದೆ.

ದೇವರ ಸಿನಿಮಾ ಮುಂದಿನ ವರ್ಷ ಏಪ್ರಿಲ್ 5 ರಂದು ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಈ ಚಿತ್ರದ ನಂತರ ಎನ್​ಟಿಆರ್ ತಮ್ಮ ಮುಂದಿನ ಚಿತ್ರವನ್ನು ಕೆಜಿಎಫ್​ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮಾಡಲಿದ್ದಾರೆ.

ಇನ್ನು ಜೂ. ಎನ್‌ಟಿಆರ್ ಸಮಯ ಸಿಕ್ಕಾಗಲೆಲ್ಲ ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಪತ್ನಿ ಲಕ್ಷ್ಮಿ ಪ್ರಣತಿ ಜತೆ ಪ್ರವಾಸತಾಣಗಳಿಗೆ ಭೇಟಿ ನೀಡುತ್ತಾರೆ. ಜೂ.ಎನ್​ಟಿಆರ್​-ಲಕ್ಷ್ಮೀ ಪ್ರಣತಿ ದಂಪತಿಗೆ ಅಭಯ್ ರಾಮ್ ಹಾಗೂ ಭಾರ್ಗವ್ ರಾಮ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪುತ್ರರ ವಿಚಾರದಲ್ಲೂ ಸಾಕಷ್ಟು ಕಾಳಜಿ ವಹಿಸುತ್ತಾರೆ.

ಇದೀಗ ಎನ್‌ಟಿಆರ್ ಪುತ್ರರಿಗೆ ಸಂಬಂಧಿಸಿದ ವಿಷಯವೊಂದು ವೈರಲ್ ಆಗಿದೆ. ಎನ್​ಟಿಆರ್ ಅವರ ಹಿರಿಯ ಮಗ ಅಭಯ್ ರಾಮ್ ಐದನೇ ತರಗತಿಯಲ್ಲಿ ಓದುತ್ತಿದ್ದು, ಕಿರಿಯ ಮಗ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ. ಇಬ್ಬರೂ ಹೈದರಾಬಾದ್‌ನ ಕಾರ್ಪೊರೇಟ್ ಶಾಲೆಯಲ್ಲಿ ಓದುತ್ತಿದ್ದಾರೆ.

ಮಕ್ಕಳಿಬ್ಬರ ವಿದ್ಯಾಭ್ಯಾಸಕ್ಕೆ ಎನ್​ಟಿಆರ್ ಪ್ರತಿ ವರ್ಷ ವ್ಯಯಿಸುವ ಶುಲ್ಕದ ಬಗೆಗಿನ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎನ್​ಟಿಆರ್ ತಮ್ಮ ಪುತ್ರರ ಶಿಕ್ಷಣಕ್ಕಾಗಿ ವರ್ಷಕ್ಕೆ ಸುಮಾರು 20 ಲಕ್ಷ ರೂಪಾಯಿ ಶಾಲಾ ಶುಲ್ಕವನ್ನು ಪಾವತಿಸುತ್ತಾರೆಂದು ತಿಳಿದುಬಂದಿದೆ. ಇಷ್ಟು ಚಿಕ್ಕ ವಯಸ್ಸಿನ ಮಕ್ಕಳಿಗೆ 20 ಲಕ್ಷ ರೂ. ಸಂದಾಯ ಮಾಡುವುದು ಸಾಮಾನ್ಯ ವಿಷಯವಲ್ಲ. ಒಂದನೇ ತರಗತಿಗೆ ಈ ಮಟ್ಟದ ಶುಲ್ಕವನ್ನು ಪಾವತಿಸುತ್ತಿರುವುದರಿಂದ ಇನ್ನು ಮಕ್ಕಳ ಇನ್ನಿತರ ಅಗತ್ಯಗಳಿಗೆ ಎನ್​ಟಿಆರ್​ ಎಷ್ಟು ಖರ್ಚು ಮಾಡಬಹುದು ಊಹಿಸಿ. (ಏಜೆನ್ಸೀಸ್​)