ಸಿನಿವಾಣಿ

‘ನಮ್ಮ ಫ್ಲಿಕ್ಸ್’ನಲ್ಲಿ ‘ಜೂನಿಯರ್’ ಜೋರು: ಕನ್ನಡಿಗರೇ ಕನ್ನಡಿಗರಿಗಾಗಿ ಪ್ರಾರಂಭಿಸಿರುವ ಒಟಿಟಿಯಲ್ಲಿ ಕನ್ನಡ ಚಿತ್ರಗಳ ಹಬ್ಬ

ಬೆಂಗಳೂರು: ಕನ್ನಡದ ಕಂಟೆಂಟ್ ಸಿನಿಮಾಗಳಿಗಾಗಿಯೇ ಆರಂಭವಾಗಿರುವ ಒಟಿಟಿ ವೇದಿಕೆ ‘ನಮ್ಮ ಫ್ಲಿಕ್ಸ್’. 2020ರಲ್ಲಿ ಆರಂಭವಾದ ಈ ಪ್ಲಾಟ್‌ಫಾರಂ ಇದೀಗ 4.50 ಲಕ್ಷಕ್ಕೂ ಅಧಿಕ ಜನರನ್ನು ತಲುಪಿದೆ. ಭಿನ್ನ, ವಿಭಿನ್ನ ಹಾಗೂ ಸದಭಿರುಚಿಯ ಸಿನಿಮಾ, ಧಾರಾವಾಹಿ, ವೆಬ್ ಸರಣಿಗಳ ಮೂಲಕ ‘ನಮ್ಮ ಫ್ಲಿಕ್ಸ್’ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದೆ. ಈ ವೇದಿಕೆಯಲ್ಲಿ ಕನ್ನಡದ ಕಿರೀಟಿ ಜನಾರ್ದನ ರೆಡ್ಡಿ ಅಭಿನಯದ ‘ಜೂನಿಯರ್’ ಚಿತ್ರ ಸೆ. 30ರಿಂದ ಪ್ರದರ್ಶನಗೊಳ್ಳುತ್ತಿದ್ದು, ಒಟಿಟಿಯಲ್ಲೂ ವೈರಲ್ ಆಗಿದೆ. ಕಿರೀಟಿ ರೆಡ್ಡಿ, ಶ್ರೀಲೀಲಾ, ರವಿಚಂದ್ರನ್, ಜೆನೀಲಿಯಾ ಮುಖ್ಯಭೂಮಿಕೆಯಲ್ಲಿದ್ದ ‘ಜೂನಿಯರ್’ ಚಿತ್ರ ಕಳೆದ ಜು. 18 ರಂದು ಕನ್ನಡ -ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಕುಟುಂಬ ಪ್ರಧಾನ ಭಾವನಾತ್ಮಕ ಕಥೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ‘ನಮ್ಮ ಫ್ಲಿಕ್ಸ್’ನಲ್ಲೂ ಹೆಚ್ಚಿನ ಪ್ರೇಕ್ಷಕರನ್ನು ತಲುಪಿದೆ. ‘‘ಜೂನಿಯರ್’ಗೆ ಥಿಯೇಟರ್‌ನಲ್ಲಿ ಉತ್ತಮ ಪ್ರತಿಕ್ರಿಯೆಗಳು ಬಂದಿದ್ದವು. ನಟ ಕಿರೀಟಿ ಮೊದಲ ಸಿನಿಮಾದಲ್ಲಿಯೇ ಡಾನ್ಸ್, ಅಭಿನಯದ ಮೂಲಕ ಮಿಂಚಿದ್ದರು. ರವಿಚಂದ್ರನ್, ಜೆನೀಲಿಯಾ, ಶ್ರೀಲೀಲಾ ಅವರಂತಹ ಪ್ಯಾನ್ ಇಂಡಿಯಾ ಕಲಾವಿದರು, ದೇವಿಶ್ರೀ ಪ್ರಸಾದ್ ಸಂಗೀತ್, ‘ಬಾಹುಬಲಿ’ ಖ್ಯಾತಿಯ ಸೆಂಥಿಲ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿತ್ತು. ಬಿಗ್ ಬಜೆಟ್ ಜತೆಗೆ ಉತ್ತಮ ಕಲಾ ಬಳಗ, ಯೂಥ್‌ುಲ್ ಸ್ಟೋರಿಯ ಜತೆಗೆ ್ಯಾಮಿಲಿಗೆ ಹೆಚ್ಚು ಇಷ್ಟವಾಗುವ ಕಥೆ ಇದಾಗಿತ್ತು. ತಾಂತ್ರಿಕವಾಗಿಯೂ ಗುಣಮಟ್ಟದಿಂದ ಕೂಡಿರುವ ಕಾರಣ ಚಿತ್ರವನ್ನು ‘ನಮ್ಮ ಫ್ಲಿಕ್ಸ್’ನಲ್ಲಿ ಪ್ರಸಾರ ಮಾಡಲು ನಿರ್ಧರಿಸಿದೆವು. ರಿಲೀಸ್ ಆದ ಕೇವಲ 15 ದಿನಗಳಲ್ಲಿ ‘ಜೂನಿಯರ್’ ಚಿತ್ರವನ್ನು ದಾಖಲೆ ಸಂಖ್ಯೆಯಲ್ಲಿ ವೀಕ್ಷಿಸಿದ್ದಾರೆ. ಕುಟುಂಬ ಪ್ರಧಾನ ಸಿನಿಮಾಗಳಿಗೆ ಕನ್ನಡದಲ್ಲಿ ಪ್ರೇಕ್ಷಕರಿದ್ದಾರೆ ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದೆ’ ಎಂದು ‘ನಮ್ಮ ಫ್ಲಿಕ್ಸ್’ ಸಂಸ್ಥಾಪಕ, ಸಿಇಒ ವಿಜಯಪ್ರಕಾಶ್ ಭರವಸೆ ವ್ಯಕ್ತಪಡಿಸಿದರು.

ರವಿಚಂದ್ರನ್‌ಗೆ ‘ಜೈ’ ಎಂದ ಪ್ರೇಕ್ಷಕ

‘ಜೂನಿಯರ್’ ಚಿತ್ರದಲ್ಲಿ ನಟ ರವಿಚಂದ್ರನ್ ಅಭಿನಯಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆ. ಇಲ್ಲಿ ಅವರನ್ನು ಕೇವಲ ಅತಿಥಿ ಪಾತ್ರಕ್ಕೆ ಸೀಮಿತಗೊಳಿಸದೆ ಗಟ್ಟಿ ಪಾತ್ರ ನೀಡಲಾಗಿದೆ. ಜೆನೀಲಿಯಾ, ಶ್ರೀಲೀಲಾ ಕೂಡ ಹಿಂದಿನ ಸಿನಿಮಾಗಳಿಗಿಂತ ಇಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ಕಿರೀಟಿಯ ಎನರ್ಜಿಟಿಕ್ ರ್ಪಾಮೆನ್ಸ್ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದೆ. ಈಗ ‘ನಮ್ಮ ಫ್ಲಿಕ್ಸ್’ನಲ್ಲಿ ಅತಿ ಕಡಿಮೆ ಅರ್ಥಾತ್ ಕೇವಲ 49 ರೂ. ದರದಲ್ಲಿ ‘ಜೂನಿಯರ್’ ಸೇರಿ ಎಲ್ಲ ಕಂಟೆಂಟ್‌ಗಳನ್ನು ನೋಡಬಹುದಾಗಿದೆ’ ಎಂದು ವಿಜಯ್‌ಪ್ರಕಾಶ್ ಮಾಹಿತಿ ನೀಡಿದರು.

ಚಂದಾ ವಿವರ

* ಪಾಕ್ಷಿಕ: 49 ರೂ.

* ಮಾಸಿಕ: 79 ರೂ.

* ತ್ರೈಮಾಸಿಕ: 149 ರೂ.

* ಅರ್ಧ ವಾರ್ಷಿಕ: 249 ರೂ.

* ವಾರ್ಷಿಕ: 499 ರೂ.

ತಂದೆ-ಮಗನ ಭಾವನಾತ್ಮಕ ಕಥೆ

‘ಮಾಯಾಬಜಾರ್’ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶಿಸಿದ್ದ ‘ಜೂನಿಯರ್’ ತಂದೆ- ಮಗನ ಭಾವನಾತ್ಮಕ ಕಥೆಯಾಗಿದೆ. ಕೋದಂಡಪಾಣಿಯ (ರವಿಚಂದ್ರನ್) ಮುದ್ದಿನ ಮಗ ಅಭಿನವ್ (ಕಿರೀಟಿ). ಈತನಿಗೆ ತಂದೆಯ ಅತಿಯಾದ ಕಾಳಜಿಯೇ ಕಿರಿಕಿರಿ ಎನಿಸಿ, ದೂರದೂರಿಗೆ ಓದಲು ಹೋಗುತ್ತಾನೆ. ಬಳಿಕ ವ್ಯಾಸಂಗ ಮುಗಿದ ಮೇಲೆ ಕೆಲಸಕ್ಕೆ ಸೇರಿಕೊಳ್ಳುವ ಈತ ವಿಜಯಾ ಸೌಜನ್ಯ (ಜೆನೀಲಿಯಾ) ಕೆಂಗಣ್ಣಿಗೆ ಗುರಿಯಾಗಿ ಕಂಪನಿಯ ಸಿಎಸ್‌ಆರ್ ವಿಭಾಗಕ್ಕೆ ಹಿಂಬಡ್ತಿ ಪಡೆಯುತ್ತಾನೆ. ಕಂಪನಿಯು ವಿಜಯನಗರ ಎಂಬ ಊರಿಗೆ ನೀಡುತ್ತಿದ್ದ ಸಿಎಸ್‌ಆರ್ ನಿಧಿಯ ದುರ್ಬಳಕೆ ಬಗ್ಗೆ ಅಭಿನವ್ ಗಮನ ಸೆಳೆಯುತ್ತಾನೆ. ಆಗ ಕಂಪನಿಯ ಸದಸ್ಯರು ವಿಜಯನಗರಕ್ಕೆ ಶ್‌ಟಿ ಆಗುತ್ತಾರೆ. ತಂದೆ-ತಾಯಿ ತೊರೆದ ವಿಜಯನಗರವನ್ನು ಅಭಿನವ್ ತನಗೇ ಗೊತ್ತಿರದಂತೆ ಸೇರುತ್ತಾನೆ. ಹಾಗಾದರೆ, ವಿಜಯನಗರದಲ್ಲಿ ನಡೆಯುವ ತಂದೆ-ಮಗಳು-ಮಗನ ಭಾವನಾತ್ಮಕ ಕಥೆ ಏನು? ಎಂಬುದೇ ಕುತೂಹಲಕಾರಿ ‘ಜೂನಿಯರ್’ ಕಥೆ.

ಡಬ್ ಸಿನಿಮಾಗಳಿಗೆ ಪ್ರತ್ಯೇಕ ವಿಭಾಗ

‘ನಮ್ಮ ಫ್ಲಿಕ್ಸ್’ನಲ್ಲಿ ‘ಜೂನಿಯರ್’ ಒಟಿಟಿಯಲ್ಲೂ ಹಿಟ್ ಲಿಸ್ಟ್ ಸೇರಿದ್ದು, ಅದಕ್ಕೆ ಕನ್ನಡ ಪ್ರೇಕ್ಷಕರಿಗೆ ಧನ್ಯವಾದ’ ಎನ್ನುವ ವಿಜಯ್ ಪ್ರಕಾಶ್, ‘ಹೊಸ ಹೊಸ ಯೋಜನೆ, ಸದಭಿರುಚಿ ಸಿನಿಮಾಗಳ ಮೂಲಕ ‘ನಮ್ಮ ಫ್ಲಿಕ್ಸ್’ ಕನ್ನಡ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ನಮ್ಮ ಮುಂದೆ ಹಲವಾರು ಹೊಸ ಯೋಜನೆಗಳಿವೆ. ನಮ್ಮ ವೇದಿಕೆಯಲ್ಲಿ ಪರಭಾಷೆಯಿಂದ ಕನ್ನಡಕ್ಕೆ ಡಬ್ ಆದ 30ಕ್ಕೂ ಅಧಿಕ ಸಿನಿಮಾಗಳು ಪ್ರಸಾರವಾಗುತ್ತಿದ್ದು, ಅದಕ್ಕಾಗಿ ‘ಡಿ-ಪಿಕ್ಸ್’ ಎಂಬ ಪ್ರತ್ಯೇಕ ವಿಭಾಗ ಮಾಡಿದ್ದೇವೆ. ಪವನ್ ಕಲ್ಯಾಣ್, ನಾಗಾರ್ಜುನ ಸೇರಿ ಹಲವು ಖ್ಯಾತ ನಟರ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಕನ್ನಡದ ಎಕ್ಸ್‌ಕ್ಲೂಸಿವ್ ಕಂಟೆಂಟ್, ಕುಟುಂಬ ಪ್ರಧಾನ ಕಥೆಗಳು, ಕಾಮಿಡಿ, ಸಸ್ಪೆನ್ಸ್-ಥ್ರಿಲ್ಲರ್ ಜಾನರ್ ಸಿನಿಮಾಗಳನ್ನು ‘ನಮ್ಮ ಫ್ಲಿಕ್ಸ್’ನಲ್ಲಿ ಪ್ರಸಾರ ಮಾಡುತ್ತೇವೆ’ ಎಂದು ವಿಜಯ್ ಪ್ರಕಾಶ್ ಮಾಹಿತಿ ನೀಡಿದರು.

ಕನ್ನಡ ಸಿನಿಮಾಗಳಿಗೆ ವೇದಿಕೆ

ಕನ್ನಡ ಚಿತ್ರಗಳಿಗೆ ಒಟಿಟಿಗಳಲ್ಲೂ ವೇದಿಕೆ ಸಿಗುತ್ತಿಲ್ಲ ಎಂಬ ಮಾತಿನ ನಡುವೆ ‘ನಮ್ಮ ಫ್ಲಿಕ್ಸ್’ ಕನ್ನಡ ಚಿತ್ರರಂಗದ ಪರ ಬಲವಾಗಿ ನಿಂತಿದೆ ಎನ್ನುವ ‘ಜೂನಿಯರ್’ ನಿರ್ದೇಶಕ ರಾಧಾಕೃಷ್ಣ ರೆಡ್ಡಿ, ‘ಕನ್ನಡ ಚಿತ್ರಗಳಿಗೆ ‘ನಮ್ಮ ಫ್ಲಿಕ್ಸ್’ ಉತ್ತಮ ವೇದಿಕೆಯಾಗಿದೆ. ನಮ್ಮ ‘ಜೂನಿಯರ್’ ಚಿತ್ರ ಇಲ್ಲಿ ಪ್ರದರ್ಶನವಾಗುತ್ತಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸೇರಿ ಎಲ್ಲ ವಯೋಮಾನದವರು ಈ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ನಮ್ಮ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಕ್ಕೆ ‘ನಮ್ಮ ಫ್ಲಿಕ್ಸ್’ಗೆ ಧನ್ಯವಾದ’ ಎನ್ನುತ್ತಾರೆ.