ತೆಲಂಗಾಣ: ಆರ್ಆರ್ಆರ್(RRR) ಚಿತ್ರದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ಟಾಲಿವುಡ್ ಸ್ಟಾರ್ ನಟ ಜೂ. ಎನ್ಟಿಆರ್(Jr.NTR) ಇದೀಗ ದೊಡ್ಡ ಸಂಸ್ಥೆಯೊಂದಕ್ಕೆ ರಾಯಭಾರಿಯಾಗಿದ್ದಾರೆ.
ಇದನ್ನೂ ಓದಿ: ಗ್ಯಾರಂಟಿಗಳನ್ನು ಜನತೆಗೆ ಕೊಡಲಾಗದೆ ಕಾಂಗ್ರೆಸ್ನವರು ಕುಂಟು ನೆಪ ಹುಡುಕುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ಪ್ಯಾನ್ ಇಂಡಿಯಾ(Pan India) ಸಿನಿಮಾಗಳಲ್ಲಿ ಹೆಚ್ಚು ಅಭಿನಯಿಸುವ ಮೂಲಕ ಚಿತ್ರರಸಿಕರನ್ನು ಮನರಂಜಿಸುವ ನಟ ಜೂ. ಎನ್ಟಿಆರ್ ಇದೀಗ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್(Malabar Gold & Diamonds) ಸಂಸ್ಥೆಯ ನೂತನ ರಾಯಭಾರಿಯಾಗಿದ್ದಾರೆ. ಈ ಬಗ್ಗೆ ಸಂಸ್ಥೆ ಕೂಡ ಹೊಸದೊಂದು ಪೋಸ್ಟರ್ ಬಿಡುಗಡೆಗೊಳಿಸುವ ಮುಖೇನ ಖಚಿತಪಡಿಸಿದೆ.
ಪೋಸ್ಟರ್ನಲ್ಲಿ ಬಹಳ ಆಕರ್ಷಕವಾಗಿ ಕಾಣಿಸುವ ಜೂ. ಎನ್ಟಿಆರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗುತ್ತಿದ್ದು, ಈ ಕುರಿತು ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ನಿಮ್ಮ ಮುಂದಿನ ಎಲ್ಲಾ ಚಿತ್ರಗಳಿಗೂ ಶುಭವಾಗಲಿ, ಜಾನ್ವಿ ಕಪೂರ್ ಅವರೊಟ್ಟಿಗೆ ಅಭಿನಯಿಸುತ್ತಿರುವ ದೇವರಾ(Devara) ಚಿತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡಿ ತಿಳಿಸಿದ್ದಾರೆ.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಗೆ ನೂತನ ರಾಯಭಾರಿಯಾಗಿರುವ ಜೂ. ಎನ್ಟಿಆರ್, ಇತ್ತೀಚೆಗಷ್ಟೇ ಮ್ಯಾಕ್ಡೋನಲ್ಡ್(McDonalds) ಸಂಸ್ಥೆಗೂ ಕೂಡ ಸಹಿ ಹಾಕುವ ಮೂಲಕ ನೂತನ ರಾಯಭಾರಿಯಾಗಿದ್ದಾರೆ,(ಏಜೆನ್ಸೀಸ್).