ಬೆಂಗಳೂರು: ಇತ್ತೀಚೆಗಷ್ಟೆ ಚಿತ್ರತಂಡದವರೊಬ್ಬರು ನಿರ್ದೇಶಕ ಜೋಗಿ ಪ್ರೇಮ್ ಮೇಲೆ, "ಒಂದು ಹಾಡು ಹಾಡೋಕೆ ಐದು ಲಕ್ಷ ರೂ. ಡಿಮ್ಯಾಂಡ್ ಮಾಡಿದರು' ಎಂದು ಆರೋಪಿಸಿದ್ದರು. ಅದಕ್ಕೆ ಸಾಂಗ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಮತ್ತೊಂದು ಸಿನಿಮಾ ಹಾಡನ್ನು ಹಾಡುತ್ತಾ, ಜೋಗಿ ಪ್ರೇಮ್ ಸ್ಪಷ್ಟನೆ ನೀಡಿದ್ದಾರೆ. "ಐದಲ್ಲಾ, ಹತ್ತು ಲಕ್ಷ ಕೇಳುತ್ತೇನೆ. ಮುಂಬೈ ಸಿಂಗರ್ಗಳಿಗೆ ಆದರೆ ಕೊಡುತ್ತೀರಾ. ಕನ್ನಡಿಗರಿಗೆ ಯಾಕೆ ಕೊಡಬಾರದು? ಜತೆಗೆ ನಾನು ಹಾಡಲು ಪಡೆಯುವ ಸಂಭಾವನೆಯ ಸಂಪೂರ್ಣ ಮೊತ್ತ ಅಮ್ಮನ ಹೆಸರಿನಲ್ಲಿ ಮಾಡಿರುವ ಟ್ರಸ್ಟ್ಗೆ ಸೇರುತ್ತದೆ. ಆ ಮೂಲಕ ಅನೇಕ ಸಮಾಜಮುಖಿ ಕೆಲಸಗಳಿಗೆ ಬಳಕೆಯಾಗುತ್ತದೆ' ಎಂದು ಮಾಹಿತಿ ನೀಡಿದರು.
ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್, "ಪ್ರೇಮ್ ಸರ್ ಗಾಯನದ ಅಭಿಮಾನಿ ನಾನು. ಅವರ ಧ್ವನಿಯಲ್ಲಿರುವ ಮುಗ್ಧತೆ, ನೋವಿನ ಗಾಢತೆ ಈ ಹಾಡಿಗೆ ಬೇಕಿತ್ತು' ಎಂದು ಸಂತಸವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಕಾಂತ ಕನ್ನಲ್ಲಿ ಆ್ಯಕ್ಷನ್&ಕಟ್ ಹೇಳಿದ್ದು, ಕಿರಣ್ ಆದಿತ್ಯ , ಲೇಖಚಂದ್ರ, ರಥರ್ವ ತಬಲಾ ನಾಣಿ, ಅಪೂರ್ವ, ಕಾಕ್ರೋಚ್ ಸುಧಿ ತಾರಾಗಣದಲ್ಲಿದ್ದಾರೆ.