ಬೆಂಗಳೂರು: ‘ಜೋಗಿ’ ಪ್ರೇಮ್ ಇತ್ತೀಚೆಗೆ ಮಲಯಾಳಂನ ಸ್ಟಾರ್ ನಟ ಮೋಹನ್ ಲಾಲ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಅಷ್ಟೇ ಅಲ್ಲ, ಅವರ ಜತೆಗಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ‘ನನ್ನ ಮನಸ್ಸಿನ ಭಾವನೆಗಳನ್ನು ಬಾಯ್ಮಾತಿನಲ್ಲಿ ಹೇಳಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅವರು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್. ಆದರೂ ಅವರಂತ ಸೌಜನ್ಯಯುತ ವ್ಯಕ್ತಿಯನ್ನು ನಾನು ನೋಡಿಲ್ಲ ...’ ಎಂದು ಬರೆದುಕೊಂಡಿದ್ದಾರೆ.
ಯಾವಾಗ ಪ್ರೇಮ್ ಇಂಥದ್ದೊಂದು ಟ್ವೀಟ್ ಮಾಡಿದರೋ, ಅಲ್ಲಿಂದ ಒಂದು ಚರ್ಚೆ ಶುರುವಾಗಿದೆ. ಪ್ರೇಮ್ ಮೋಹನ್ ಲಾಲ್ ಅವರನ್ನು ಭೇಟಿ ಮಾಡಿದ್ದು, 20ರಂದು ನಡೆಯಲಿರುವ ‘ಕೆವಿಎನ್ 04’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸುವುದಕ್ಕೋ ಅಥವಾ ಆ ಚಿತ್ರದಲ್ಲೊಂದು ಪ್ರಮುಖ ಪಾತ್ರವನ್ನು ನಿರ್ವಹಿಸುವಂತೆ ಮನವಿ ಮಾಡುವುದಕ್ಕೋ ಎಂಬ ಚರ್ಚೆ ಕೇಳಿ ಬಂದಿದೆ.
ಈ ಕುರಿತು ಪ್ರೇಮ್ ಮಾತ್ರ ತಮ್ಮ ಎಂದಿನ ಸ್ಟೈಲ್ನಲ್ಲಿ ಮುಗುಮ್ಮಾಗಿದ್ದಾರೆ. ‘ಕೆವಿಎನ್ 04’ ಚಿತ್ರದಲ್ಲಿ ಮೋಹನ್ ಲಾಲ್ ನಟರಾಗಿರುತ್ತಾರೋ ಅಥವಾ ಅತಿಥಿಯಾಗಿ ಬರುತ್ತಾರೋ ಎಂಬ ರಹಸ್ಯವನ್ನು ಕಾಪಾಡಿಕೊಂಡಿದ್ದಾರೆ.