ಸಿನಿವಾಣಿ

ರಿಯಾಲಿಟಿ ಶೋ ಸ್ಪರ್ಧಿಯನ್ನು ಡೇಟ್​ಗೆ ಕರೆದ ಜಾನ್ವಿ ಕಪೂರ್​! ಅಂತದ್ದೇನಾಯ್ತು ಗೊತ್ತಾ?

Mandara

ಮುಂಬೈ: ಬಾಲಿವುಡ್​ ನಟಿ ಜಾನ್ವಿ ಕಪೂರ್​ ಬಗ್ಗೆ ಅದೆಷ್ಟು ಹುಡುಗರು ತಲೆ ಕೆಡಿಸಿಕೊಂಡಿಲ್ಲ ಹೇಳಿ. ಹುಚ್ಚು ಅಭಿಮಾನ ಇಟ್ಟುಕೊಂಡಿರುವ ನಟಿಯೇ ಎದುರು ಬಂದು ನನ್ನ ಜತೆ ಡೇಟ್​ಗೆ ಬರುತ್ತೀಯಾ ಎಂದು ಕೇಳಿಬಿಟ್ಟರೆ? ಹೌದು ಇಂತಹ ಒಂದು ವಿಶೇಷ ಅವಕಾಶ ರಿಯಾಲಿಟಿ ಶೋನ ಸ್ಪರ್ಧಿಯೊಬ್ಬನಿಗೆ ಬಂದೊದಗಿದೆ.

ಜಾನ್ವಿ ಕಪೂರ್​ ಅಭಿನಯದ ರೂಹಿ ಸಿನಿಮಾ ಇಂದು ಬಿಡುಗಡೆಯಾಗಿದೆ. ಅದರ ಪ್ರಮೋಷನ್​ ಸಲುವಾಗಿ ಜಾನ್ವಿ ಕಪೂರ್​ ಮತ್ತು ವರುಣ್​ ಶರ್ಮಾ ಈ ವಾರಾಂತ್ಯದ ಡ್ಯಾನ್ಸ್​ ದಿವಾನೆ 3 ಷೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಚಿತ್ರೀಕರಣ ಈಗಾಗಲೇ ಮುಗಿದಿದೆ. ಷೋನಲ್ಲಿ ಪಿಯೂಷ್​ ಹೆಸರಿನ ಸ್ಪರ್ಧಿ ಮಾಡಿದ ನೃತ್ಯಕ್ಕೆ ಜಾನ್ವಿ ಫಿದಾ ಆಗಿದ್ದಾರೆ. ನೀವು ಥೇಟ್​ ಹೀರೋನಂತೆಯೇ ಡ್ಯಾನ್ಸ್​ ಮಾಡ್ತೀರಿ, ನನ್ನ ಜತೆ ಡೇಟ್​ಗೆ ಬರ್ತೀರಾ ಎನ್ನುವ ಪ್ರಶ್ನೆಯನ್ನೂ ಕೇಳಿದ್ದಾರೆ. ಅದಕ್ಕೆ ನಾಚಿಕೆ ಮತ್ತು ಭಯದಿಂದ ಪಿಯೂಷ್​ ಉತ್ತರಿಸಿರುವುದನ್ನು ಪ್ರೋಮೋ ವಿಡಿಯೋದಲ್ಲಿ ನೋಡಬಹುದು.

ಡೇಟ್​ನ ಪ್ರಸ್ತಾಪ ಬಂದ ಮೇಲೆ ಕಾರ್ಯಕ್ರಮದ ನಿರೂಪಕ ಅವರಿಬ್ಬರಿಗಾಗಿ ವಿಶೇಷ ಡೇಟ್​ನ್ನೂ ಏರ್ಪಡಿಸುತ್ತಾನೆ. ಅದರಲ್ಲಿ ಆಗುವ ಒಂದಿಷ್ಟು ಕಾಮಿಡಿ ಝಲಕ್​ನ್ನು ಪ್ರೋಮೋದಲ್ಲಿ ನೋಡಬಹುದಾಗಿದೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ