Jason Sanjay Recalls 'Kidnapping' By Father Vijay's Fan 
ಸಿನಿವಾಣಿ

'ಅಪ್ಪನನ್ನು ಕಾಣುವ ಹಂಬಲದಿಂದ ನನ್ನನ್ನು ಕಿಡ್ನ್ಯಾಪ್​ ಮಾಡಿದ್ದರು'; ಸಿಎಂ ವಿಜಯ್ ಪುತ್ರ Jason Sanjay​ ಶಾಕಿಂಗ್ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ನಾನು 5ನೇ ತರಗತಿಯಲ್ಲಿದ್ದಾಗ ಅಪ್ಪನ ಅಭಿಮಾನಿಯಿಂದ ಕಿಡ್ನ್ಯಾಪ್​ಗೆ ಒಳಗಾಗಿದ್ದೆ
  • ಅಂದು ಅದು ಕಿಡ್ನ್ಯಾಪ್​ ಎಂತಲೇ ಅನಿಸಿದ್ದು ಆದರೆ ಅವರು ಅಪ್ಪನನ್ನು ಕಾಣುವ ಹಂಬಲದಲ್ಲಿದ್ದರು
  • ವಿಜಯ್​ ಪುತ್ರ ಜೇಸನ್​ ಸಂಜಯ್​ ಅವರ ವಿಡಿಯೋ ವೈರಲ್
ನಾನು ಸಣ್ಣವನಿದ್ದಾಗ ಶಾಲೆಯಿಂದ ಹೊರಗೆ ಬಂದು ಅಪ್ಪನಿಗಾಗಿ ಕಾಯುತ್ತಿದ್ದೆ. ಅಲ್ಲೇ ಹತ್ತಿರದಲ್ಲಿ ಒಬ್ಬ ಅಪ್ಪನ ಅಭಿಮಾನಿ ಅವರನ್ನು ಕಾಣಲು ನಿಂತಿದ್ದರು. ಆದರೆ, ಅಪ್ಪ  ಕಾಣಿಸಿಕೊಳ್ಳದ ಕಾರಣ ನನ್ನನ್ನು ಹೊತ್ತು ಆತ ಓಡಲು ಶುರು ಮಾಡಿದ. ನನಗೆ ಭಯವಾಗಿ ಜೋರಾಗಿ ಅಳಲು ಶುರು ಮಾಡಿದೆ. ಆದರೆ ಅವರಿಗೆ ನನ್ನನ್ನು ಕಿಡ್ನ್ಯಾಪ್ ಮಾಡುವ ಉದ್ದೇಶ ಇರಲಿಲ್ಲ ಹೀಗೆಂದು ತಮಾಷೆಯಾಗಿ ಮಗುವೊಂದರ ಬಳಿ ಹಂಚಿಕೊಂಡಿದ್ದು ತಮಿಳುನಾಡಿನ ಸಿಎಂ ವಿಜಯ್​ ಅವರ ಪುತ್ರ  ಜೇಸನ್​ ಸಂಜಯ್​.

ಕುಟುಂಬದೊಂದಿಗೆ ವೈಮನಸ್ಸು

ವಿಜಯ್​ ಅವರು ಮೊದಲ ಬಾರಿಗೆ ಚುನಾವಣೆಗೆ ನಿಂತು ಭರ್ಜರಿ ಗೆಲುವು ಕಂಡಿದ್ದಲ್ಲದೆ ಸಿಎಂ ಹುದ್ದೆಯನ್ನು ಅಲಂಕರಿಸಿಕೊಂಡಿದ್ದಾರೆ. ಆದರೆ, ಈ ಮಧ್ಯೆ ಅವರ ಅಭಿಮಾನಿಗಳಲ್ಲಿ ಅಸಮಾಧಾನ ಇರುವುದು ಎಂದರೆ ಅದು ಅವರು ಮತ್ತು ನಟಿ ತ್ರಿಷಾ ನಡುವಿನ ಒಡನಾಟ.
ತಮಿಳುನಾಡಿನ ಸಿಎಂ  ವಿಜಯ್​ ಅವರ ಪತ್ನಿ ಸಂಗೀತಾ ಡಿವೋರ್ಸ್​​​​ಗಾಗಿ ಅರ್ಜಿ ಸಲ್ಲಿಸಿದ ನಂತರ ವಿಜಯ್​ ಹಾಗೂ ತ್ರಿಷಾ ಅವರ ಒಡನಾಟ ಹೆಚ್ಚಾಗಿಯೇ ಕಾಣಿಸಿಕೊಂಡಿತ್ತು. ಇಬ್ಬರು ಲಿಫ್ಟ್​ನಲ್ಲಿ ಕಾಣಿಸಿಕೊಂಡ ಫೋಟೋಗಳು, ಒಟ್ಟಾಗಿ ರಶ್ಮಿಕಾ ಮದುವೆಯಲ್ಲಿ ಕಾಣಿಸಿಕೊಂಡಿದ್ದು ಇವೆಲ್ಲವು ಊಹಾಪೋಹಕ್ಕೆ ಪುಷ್ಠಿಯನ್ನು ನೀಡಿತ್ತು. 
ತಮಿಳುನಾಡಿನ ಸಿಎಂ ಆಗಿ ಪದಗ್ರಹಣ ಕಾರ್ಯಕ್ರಮ ನಡೆದಾಗಲೂ ಸಹ ವಿಜಯ್​ ಅವರ ಪತ್ನಿ ಸಂಗೀತ ಹಾಗೂ ಅವರ ಮಗ ಜೇಸನ್​ ಸಂಜಯ್​ ಹಾಗೂ ದಿವ್ಯಾ ಸಾಶಾ ಕಾಣಿಸಿಕೊಂಡಿರಲಿಲ್ಲ.  ಈ ಎಲ್ಲ ವಿಚಾರಗಳಿ ಒಂದಲ್ಲ ಒಂದು ದಿನ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ಜೇಸನ್​ ಸಂಜಯ್​ ಅವರು ಮಾತನಾಡಿರುವ ಹಳೆಯ ವಿಡಿಯೋ ವೈರಲ್​​ ಆಗಿದ್ದು ನೆಟ್ಟಿಗರ ಗಮನವನ್ನು ಸೆಳೆದಿದೆ.

ವಿಡಿಯೋದಲ್ಲಿ ಏನಿದೆ?

ಬಿಳಿ ಶರ್ಟ್​​ ಧರಿಸಿರುವ  ಜೇಸನ್​ ಸಂಜಯ್​ ಅವರ ಮುಂದೆ ನಿಂತ ಬಾಲಕನೊಬ್ಬನ ಬಳಿ ಹೀಗೆಂದು ಹೇಳಿಕೊಂಡಿದ್ದಾರೆ. 'ನಾನು ಶಾಲೆಯಲ್ಲಿ ಓದುವಾಗ ಟೈಟ್​ ಸೆಕ್ಯೂರಿಟಿ ಇತ್ತು. ಆದರೆ, ಒಂದು ದಿನ.  ನಾನು ನಿಂತಿದ್ದ ಸ್ವಲ್ಪ ದೂರದಲ್ಲಿ ನನ್ನ ತಂದೆ(ವಿಜಯ್​)ಅವರ ಅಭಿಮಾನಿ ನಿಂತಿದ್ದರು. ತಂದೆಯನ್ನು ನೋಡುವುದು ಅವರ ಹಂಬಲವಾಗಿತ್ತು. ಆದರೆ,  ಎಷ್ಟೊತ್ತು ಕಾದರೂ ತಂದೆ ಕಾಣಿಸಿಕೊಳ್ಳದ ಕಾರಣ ನನ್ನನ್ನು ಹೊತ್ತು ಓಡತೊಡಗಿದರು. ನಾನು ಭಯಭೀತನಾದೆ. ನನ್ನ ಬಳಿ ಇದ್ದ ಬ್ಯಾಗ್ ಬಾಟಲ್​ ಶೂ ಎಲ್ಲ ಬಿಸಾಡಿದೆ. ಆದರೆ, ಅಂದು ಅವರು ನನ್ನನ್ನು ಕಿಡ್ನ್ಯಾಪ್​ ಮಾಡಿಲ್ಲ. ಅಪ್ಪನನ್ನು ಹತ್ತಿರದಿಂದ ಕಾಣುವ ಆಸೆಯಿಂದಾಗಿ ಹೀಗೆ ನಡೆದುಕೊಂಡಿದ್ದರು ಎಂದು ತಿಳಿಸಿರುವುದು ವಿಡಿಯೋದಲ್ಲಿ ಇದೆ. 
ಇಬ್ಬರ ಮಧ್ಯೆ ಮುನಿಸಿಲ್ಲ
ತಾಯಿ ಮತ್ತು ತಂದೆಯ ನಡುವಿನ ಈ ಬೆಳವಣಿಗೆ ಮಕ್ಕಳವರೆಗೂ ತಲುಪಿದೆ. ಈ ಕಾರಣದಿಂದಲೇ ಅವರು ವಿಜಯ್​ ಅವರ ಪದಗ್ರಹಣಕ್ಕೆ ಬಂದಿಲ್ಲ ಎಂದು ಹಲವರು ಮಾತನಾಡಿಕೊಂಡಿದ್ದರು. ಪ್ರಸ್ತುತ ವೈರಲ್ ಆಗಿರುವ ವಿಡಿಯೋ ಕಂಡ ನೆಟ್ಟಿಗರು ಇಬ್ಬರ ಮಧ್ಯೆ ವೈಮನಸ್ಸಿಲ್ಲ. ಹರಡಿರುವುದು ವದಂತಿಯಷ್ಟೇ ಎಂದಿದ್ದಾರೆ, (ಏಜೆನ್ಸೀಸ್).