Jana Nayagan Vijay Salary 
ಸಿನಿವಾಣಿ

ಜನನಾಯಗನ್ ಸಿನಿಮಾ ರಿಲೀಸ್​​; ವಿಜಯ್ ಮಾತ್ರವಲ್ಲ, ನಿರ್ದೇಶಕ ಹೆಚ್. ವಿನೋತ್, ಅನಿರುದ್ಧ್ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!

ಪ್ರಮುಖ ಮುಖ್ಯಾಂಶಗಳು

  • ಜನನಾಯಗನ್​ ಸಿನಿಮಾಗಾಗಿ ವಿಜಯ್​ ಸೇರಿದಂತೆ ಪೂಜಾ ಹೆಗ್ಡೆ, ನಿರ್ದೇಶಕರ ಸಂಭಾವನೆ ಎಷ್ಟಿದೆ?.
  • ವಿಜಯ್​ ಅವರು 220 ಕೋಟಿ ರೂಪಾಯಿಯಿಂದ 275 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆದುಕೊಂಡಿದ್ದಾರೆ.
  • ಬಾಬಿಡಿಯೋಲ್ ಅವರು​​ 5ರಿಂದ 10 ಕೋಟಿ, ಪ್ರಕಾಶ್​ ರಾಜ್​ 5 ಕೋಟಿ ಸಂಭಾವನೆ ಪಡೆದ ಸಾಧ್ಯತೆ.
Jana Nayagan Vijay Salary: ತಮಿಳುನಾಡಿನ ಸಿಎಂ ವಿಜಯ್​ ಅವರ ಕೊನೆಯ ಸಿನಿಮಾ ಎಂದೇ ನಂಬಲಾದ ಜನನಾಯಗನ್​​ ಅದ್ದೂರಿ ಪ್ರದರ್ಶನ ನೀಡುತ್ತಿದೆ. ಅಭಿಮಾನಿಗಳಲ್ಲಿ ಕೇವಲ ಚಿತ್ರದ ಮೇಲಷ್ಟೇ ಅಲ್ಲದೆ, ಚಿತ್ರತಂಡ ಪಡೆದಿರುವ ಭಾರಿ ಸಂಭಾವನೆಯ ಕುರಿತು ಸಾವಿರಾರು ಕುತೂಹಲವಿರುತ್ತದೆ. ವಿಜಯ್​, ಪೂಜಾ ಹೆಗ್ಡೆ ಸೇರಿದಂತೆ ಯಾರ್ಯಾರು ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ಹಲವರು ವರದಿಗಳ ಪ್ರಕಾರ, ಜನನಾಯಗನ್​​ ಸಿನಿಮಾದಲ್ಲಿ ನಟಿಸಲು ವಿಜಯ್​ ಅವರು 220 ಕೋಟಿ ರೂಪಾಯಿಯಿಂದ 275 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆದುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ವಿಜಯ್ ಮುಂಚೂಣಿಯಲ್ಲಿ ನಿಲ್ಲಲಿದ್ದಾರೆ.

ಯಾರ್ಯಾರ ಸಂಭಾವನೆ ಎಷ್ಟಿದೆ?

ಜನನಾಯಗನ್​ ಸಿನಿಮಾದಲ್ಲಿ ಪೂಜಾ ಹೆಗ್ಡೆಯವರ ಸ್ಕ್ರೀನಿಂಗ್​ ಸಮಯ ಕಡಿಮೆ ಇದ್ದರೂ ಸಹ, ಚಿತ್ರಕ್ಕಾಗಿ 6 ಕೋಟಿ ರೂ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
  • ಇನ್ನೂ ಬಾಬಿಡಿಯೋಲ್ ಅವರು​​ 5ರಿಂದ 10 ಕೋಟಿ ಪಡೆದುಕೊಂಡಿದ್ದಾರೆ.
  • ಪ್ರಕಾಶ್ ರಾಜ್ 5 ಕೋಟಿ
  • ಪ್ರಿಯಾಮಣಿ: 3 ಕೋಟಿ
  • ಗೌತಮ್ ವಾಸುದೇವ್ ಮೆನನ್: 3 ಕೋಟಿ
  • ನರೇನ್: 2.5 ಕೋಟಿ
  • ಮಮಿತಾ ಬೈಜು: 60 ಲಕ್ಷದಿಂದ 2 ಕೋಟಿ ಪಡೆದುಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರಿಗೂ ಭಾರಿ ಡಿಮ್ಯಾಂಡ್:ಚಿತ್ರದ ನಿರ್ದೇಶಕ ಹೆಚ್. ವಿನೋತ್ ಅವರು ಈ ಚಿತ್ರಕ್ಕಾಗಿ 25 ಕೋಟಿ ರೂಪಾಯಿ ಪಡೆದಿದ್ದಾರೆ. ಇದು ಅವರ ವೃತ್ತಿಜೀವನದಲ್ಲೇ ಅತ್ಯಧಿಕ ಸಂಭಾವನೆಯಾಗಿದೆ. ಮತ್ತೊಂದೆಡೆ, ಯಶಸ್ವಿ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತಕ್ಕಾಗಿ 13 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.

ಅಡತಡೆ ಮೀರಿ ಬಂದ ಜನನಾಯಗನ್

ಜನನಾಯಗನ್​ ಸಿನಿಮಾ ಜನವರಿಯಲ್ಲಿಯೇ ರಿಲೀಸ್​ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ವಿಳಂಬ, ಕಾನೂನು ವಿವಾದಗಳಿಂದಾಗಿ ಸಿನಿಮಾ ರಿಲೀಸ್ ಮುಂದೂಡಲ್ಪಟ್ಟಿತ್ತು. ಆನಂತರ ಎಲೆಕ್ಷನ್​ ಸಮಯದಲ್ಲಿಯೇ ಸಿನಿಮಾ ಆನ್​ಲೈನ್​ನಲ್ಲಿ ಸೋರಿಕೆಯಾಗಿತ್ತು. ಆ ಕಾರಣದಿಂದಾಗಿ ಮತ್ತೆ ರಿಲೀಸ್ ಡೇಟ್​ ಮುಂದೂಡಲಾಗಿತ್ತು. ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಅಂತಿಮವಾಗಿ ಜುಲೈ 23ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ಟ್ರೇಡ್ ಅನಾಲಿಸ್ಟ್ ರಮೇಶ್ ಬಾಲಾ ಅವರ ಮಾಹಿತಿ ಪ್ರಕಾರ, ಚಿತ್ರವು ಭಾರತದಲ್ಲಿ ಮುಂಗಡ ಬುಕಿಂಗ್ ಮೂಲಕವೇ ಈಗಾಗಲೇ 20 ಕೋಟಿ ರೂಪಾಯಿ ಗಳಿಸಿದೆ. ವಿದೇಶಿ ಮಾರುಕಟ್ಟೆಯಲ್ಲಿ ಪ್ರಿ-ಸೇಲ್ಸ್ 15 ಕೋಟಿ ರೂಪಾಯಿ ಗಡಿ ದಾಟಿದೆ. ಮೊದಲ ದಿನ ಭಾರತದಲ್ಲಿ 60 ಕೋಟಿ ರೂಪಾಯಿ ಹಾಗೂ ವಿಶ್ವಾದ್ಯಂತ 90 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ, (ಏಜೆನ್ಸೀಸ್).