''ನನಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡಿ ಅಭ್ಯಾಸ''. ಇದು 'ಜೇಮ್ಸ್' ಟೀಸರ್‌ನ ಖಡಕ್ ಡೈಲಾಗ್. ಈ ಡೈಲಾಗ್ ಟೀಸರ್‌ನಲ್ಲಿ ನೋಡಿದ್ಮೇಲೆ ನಿಜಕ್ಕೂ ದಾಖಲೆಗಳೆಲ್ಲಾ ಪುಡಿ ಪುಡಿಯಾಗಿವೆ ಅನಿಸುತ್ತೆ. ಕೇವಲ 24 ಗಂಟೆಗಳಲ್ಲಿ ಅಪ್ಪು ಅವರ ಕೊನೆಯ 'ಜೇಮ್ಸ್' ಸಿನಿಮಾದ ಟೀಸರ್ ನಿಜಕ್ಕೂ ಎರಡು ಹೊಸ ದಾಖಲೆಗಳನ್ನು ಬರೆದಿದೆ. ಒಂದೇ ದಿನದೊಳಗೆ 'ಜೇಮ್ಸ್'ಗೆ 1 ಕೋಟ ಅಂದರೆ 10 ಮಿಲಿಯನ್ ವೀಕ್ಷಣೆ ಸಿಕ್ಕಿದೆ. ಇದಲ್ಲದೇ, 530k ಲೈಕ್ಸ್ ಅನ್ನು ಈ ಟೀಸರ್ ಗಿಟ್ಟಿಸಿಕೊಂಡಿದೆ. ಅಂದಹಾಗೆ, ಕನ್ನಡದ ಯಾವುದೇ ಸಿನಿಮಾಗಳ ಟೀಸರ್‌ಗೂ ಈ ಮಟ್ಟಿಗಿನ ರೆಸ್ಪಾನ್ಸ್ ಇಲ್ಲಿಯವರೆಗೆ ಸಿಕ್ಕಿರಲಿಲ್ಲ.
ಹೀಗೆ ಮುನ್ನುಗುತ್ತಿರುವ ಈ ಟೀಸರ್ ಒಂದೊಂದು ಹಳೆಯ ದಾಖಲೆಗಳನ್ನು ಅಳಿಸಿ ಹಾಕುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಚೇತನ್ ಕುಮಾರ್ ಅವರ ನಿರ್ದೇಶನದ ಈ 'ಜೇಮ್ಸ್' ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತೆ. ಹೀಗಾಗಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಸಿನಿಮಾದ ಟೀಸರ್ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಇನ್ನೇನು, ಈ ದಾಖಲೆಗಳ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಭಾಕಿ ಇದೆ, ಅಷ್ಟೇ. ಸಿನಿಮಾದಲ್ಲಿ ನಟ ಶ್ರೀಕಾಂತ್ ಮತ್ತು ನಾಯಕಿ ನಟಿ ಪ್ರಿಯಾ ಆನಂದ್ ಅವರ ಪಾತ್ರಗಳು ಎಲ್ಲರ ಗಮನ ಸೆಳೆಯಲಿವೆ.
'ಜೇಮ್ಸ್' ಟೀಸರ್‌ಗೆ ಬೇರೆ ಭಾಷೆಗಳಲ್ಲೂ ನಿಜಕ್ಕೂ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಹೌದು, 24 ಗಂಟೆಯೊಳಗೆ 'ಜೇಮ್ಸ್'ನ ತೆಲುಗು ಟೀಸರ್‌ಗೆ 2.1 ಮಿಲಿಯನ್ ವೀವ್ಸ್ ಸಿಕ್ಕಿದೆ. 'ಜೇಮ್ಸ್' ಚಿತ್ರದ ತಮಿಳು ಟೀಸರ್‌ಗೆ 1.6 ಮಿಲಿಯನ್ ವೀಕ್ಷಣೆ ಸಿಕ್ಕಿದೆ. ಇನ್ನು 'ಜೇಮ್ಸ್' ಹಿಂದಿ ಟೀಸರ್‌ಗೆ 1.7 ಮಿಲಿಯನ್ ಆದರೆ, ಮತ್ತೊಂದೆಡೆ 'ಜೇಮ್ಸ್' ಮಲಯಾಳಂ ಟೀಸರ್ 1.7 ಮಿಲಿಯನ್ ವೀವ್ಸ್ ಗಿಟ್ಟಿಸಿಕೊಂಡಿದೆ. ಇನ್ನು, ಈ ಟೀಸರ್ಗಳಿಗೆ ಸಾವಿರ ಸಾವಿರ ಕಾಮೆಂಟ್ಗಳು ಹರಿದು ಬಂದಿವೆ. ಚಿತ್ರದ ಟೀಸರ್‌ಗೆ ರೆಸ್ಪಾನ್ಸ್ ಈ ರೇಂಜ್ಗೆ ಇದ್ದರೆ, ಸಿನಿಮಾ ಬಿಡುಗಡೆಯಾದರೆ ಅಭಿಮಾನಿಗಳ ಅಬ್ಬರ ಯಾವ ರೇಂಜ್ಗೆ ಇರಬಹುದು ಎಂಬುದು ಈಗ ಎಲ್ಲರ ಕುತೂಹಲವಾಗಿದೆ.